ಇತರೆಕ್ರೀಡೆತಾಜಾ ಸುದ್ದಿದೇಶಶಿಕ್ಷಣ

ಸಾಧನೆಗೆ ವೈಫಲ್ಯಗಳು ಮುಖ್ಯವಲ್ಲ ಗೆಲ್ಲುವ ಗುರಿ ಮುಖ್ಯ: ಮೇಜರ್ ಆರ್ಯ

Share Below Link

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸೇಂಟ್ ಜೋಸೆಫ್ ಶಾಲೆ ಸಿಬಿಎಸ್‌ಇ ಶಾಲಾ ಶೈಕ್ಷಣಿಕ ೨೦೨೨-೨೩ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಮಾರಂಭ ಇತ್ತೀಚೆಗೆ ಜರುಗಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರಾದ ಮೇಜರ್ ಪ್ರದೀಪ್ ಆರ್ಯ (ಐ ಆರ್ ಎಸ್) ಪ್ರಸ್ತುತ ಆದಾಯ ಇಲಾಖೆ ಆಯುಕ್ತರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಾಧನೆಗೆ ವೈಫಲ್ಯಗಳು ಮುಖ್ಯವಲ್ಲ, ಗೆಲ್ಲುವ ಗುರಿ ಮುಖ್ಯ. ಇದಕ್ಕೆ ವಿದ್ಯಾರ್ಥಿಗಳ ನಿರಂತರ ಪ್ರಯತ್ನ ಬೇಕು ಎನ್ನುವ ಮೂಲಕ ಪ್ರದೀಪ್ ಆರ್ಯರವರು ತಮ್ಮ ಬದುಕಿನ ಅನುಭವ ಹಾಗೂ ಸಾಧನೆ ಕುರಿತು ಮೌಲ್ಯಯುತ ಮಾತುಗಳನ್ನು ಹಂಚಿಕೊಂಡರು.
ಕಾರ್ಯಕ್ರಮ ಕುರಿತು ಮಾತನಾಡಿದ ಶಾಲೆಯ ಪ್ರಾಂಶುಪಾಲ ರೆ|ಫಾ| ರೋಹನ್ ಡಿ ಅಲ್ಮೇಡಾ ಎಸ್‌ಜೆ ಅವರು ಸಾಧಕರ ಸಾಲಿನಲ್ಲಿ ಗುರುತಿಸ ಲ್ಪಡುವ ಮೇಜರ್ ಆರ್ಯ ಅವರ ಸಾಧನೆಗಳು ಭವಿಷ್ಯತ್‌ನಲ್ಲಿ ಯುವ ಪೀಳಿಗೆ ಯನ್ನು ಪ್ರೇರೇಪಿಸುವಲ್ಲಿ ಸಹಕಾರಿಯಾಗುವಂತವು ಎಂದು ಹೇಳುವ ಮೂಲಕ, ಸಾಧನೆಗೆ ಪ್ರತಿಯೊಬ್ಬರು ಅಳವಡಿಕೊಳ್ಳ ಬೇಕಾದ ಗುಣಗಳ ಬಗ್ಗೆ ತಿಳಿಸಿಕೊಟ್ಟರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರಗತಿ ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದ ಜೊತೆಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಸೇಂಟ್ ಜೋಸೆಫ್ ಶಾಲೆಯ ಮುಖ್ಯಸ್ಥರಾದ ರೆ|ಫಾ ಜೋಸೆಫ್ ಡಿಸೋಜ ಎಸ್‌ಜೆ, ಶಾಲೆಯ ಉಪ ಪ್ರಾಂಶುಪಾಲರಾದ ಸಿಸ್ಟರ್ ಶೀನಾ ಜೋಸೆಫ್, ಸೇಂಟ್ ಜೋಸೆಫ್ಸ್ ಸಂಯುಕ್ತ ಪಪೂ ಕಾಲೇಜಿನ ಪ್ರಾಂಶುಪಾಲ ವಿನೋದ್ ಅಮೃತ್‌ರಾಜ್, ಶಾಲೆಯ ಸಂಯೋಜಕರು ಮತ್ತು ಪೋಷಕ ಶಿಕ್ಷಕರ ಸಭೆಯ ಉಪಾಧ್ಯಾಕ್ಷರಾದ ಕಮಲ್ ಗೋವಿಂದ್, ಶಾಲೆಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.