ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಉಚ್ಚಾಟನೆ ತಾತ್ಕಾಲಿಕ; ಅವರಪ್ಪನೇ ಬಂದು ನನ್ನನ್ನು ಕರೀತಾರೆ…

Share Below Link

ಶಿವಮೊಗ್ಗ: ಬಿಜೆಪಿಯಿಂದ ನನ್ನ ಉಚ್ಚಾಟನೆ ಬಳಿಕ ನನ್ನ ಸ್ಪರ್ಧೆ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ಸಿಕ್ಕಿದೆ. ಇದಕ್ಕಾಗಿ ವಿಜಯೇಂದ್ರ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿದರು.
೪೦ ವರ್ಷಗಳ ಕಾಲದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದು ನೀವು, ನಿಮಗೆ ಉಚ್ಚಾಟನೆಯೇ ಎಂದು ಅನೇಕ ಹಿರಿಯರು ಪ್ರಶ್ನಿಸುತ್ತಿzರೆ. ಇನ್ನೂ ಅನೇಕರು ನಿಮಗೆ ಅನ್ಯಾಯವಾಗಿದೆ, ನಿಮ್ಮ ಜೊತೆ ನಾವಿzವೆ ಎಂದು ಕರೆ ಮಾಡಿ ತಿಳಿಸುತ್ತಿzರೆ. ದಿನೇ ದಿನೇ ನನ್ನ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ. ಈ ಉಚ್ಚಾಟನೆ ಕೇವಲ ತಾತ್ಕಾಲಿಕ ಮಾತ್ರ. ಚುನಾವಣೆಯಲ್ಲಿ ಗೆದ್ದ ಬಳಿಕ ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಹೇಳಿದರು.
ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಪಿತೂರಿ ಮಾಡಿ ನನ್ನ ಹೆಸರಿನ ವ್ಯಕ್ತಿಯಿಂದ ನಾಮಪತ್ರ ಸಲ್ಲಿಸಿzರೆ. ಆದರೆ, ಜನ ದಡ್ಡರಲ್ಲ. ನನ್ನ ಪೋಟೊ ನೋಡಿ ಕಬ್ಬಿನ ಜ ಜೊತೆ ರೈತ ಗುರುತಿಗೇ ಮತವನ್ನು ಹಾಕುತ್ತಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.


ಚುನಾವಣೆ ಪ್ರಚಾರ ಬಿರುಸಾಗಿ ನಡೆಯುತ್ತಿದೆ. ಕಾರ್ಯಕರ್ತರು ಬಹಳ ಉತ್ಸಾಹದಿಂದ ಕೆಲಸ ಮಾಡುತ್ತಿzರೆ. ಇಷ್ಟು ದಿನ ಚಿಹ್ನೆ ಇರಲಿಲ್ಲ. ಈಗ ಚಿಹ್ನೆ ಬಂದಿದೆ. ನಾಳೆ ಯಿಂದ ಕ್ರಮ ಸಂಖ್ಯೆ ೮, ಕೆ.ಎಸ್. ಈಶ್ವರಪ್ಪ, ಕಬ್ಬಿನ ಜ ಜೊತೆ ರೈತ ಚಿಹ್ನೆ ಇರುವ ಕರಪತ್ರವನ್ನು ಕೈಯಲ್ಲಿ ಹಿಡಿದು ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರವನ್ನು ನಡೆಸಲಿzರೆ ಎಂದು ತಿಳಿಸಿದರು.
ಇದೇ ವಿಜಯೇಂದ್ರ, ರಾಘವೇಂದ್ರ ಅವರು ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯುತ್ತಾರೆ ಎಂದು ಪದೇ ಪದೇ ಹೇಳುತ್ತಾ, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದರು. ಈಗ ಪಕ್ಷದಿಂದ ಉಚ್ಚಾಟನೆ ಆಗಿದೆ. ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂಬುದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ. ಈ ಹಿನ್ನೆಲೆ ಇತರೆ ಪಕ್ಷದ ಅನೇಕರು ನನ್ನ ಬೆಂಬಲಕ್ಕೆ ಬರುತ್ತಿzರೆ. ಹೊಸನಗರ ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಇತರೆ ಪಕ್ಷದ ಪ್ರಮುಖರು ರಾಷ್ಟ್ರ ಭಕ್ತರ ಬಳಗ ಸೇರ್ಪಡೆಯಾಗಿzರೆ. ಸೊರಬ ತಾಲೂಕಿನ ಆನವಟ್ಟಿ ಭಾಗದಲ್ಲೂ ಅನೇಕ ಕಾರ್ಯಕರ್ತರು ರಾಷ್ಟ್ರಭಕ್ತರ ಬಳಗ ಸೇರ್ಪಡೆಯಾಗುತ್ತಿzರೆ ಎಂದರು.
ಜನ್ಮ ಇರೋವರೆಗೂ ಕಾಂಗ್ರೆಸ್‌ಗೆ ಹೋಗಲ್ಲ:
ಬಿಜೆಪಿ ಪಕ್ಷ ನನಗೆ ತಾಯಿ ಇದ್ದಂತೆ. ಯಡಿಯೂರಪ್ಪ ಅವರು ಪಕ್ಷ ಬಿಟ್ಟು ಕೆಜೆಪಿ ಕಟ್ಟಿದರು. ನಾನು ಯಾವತ್ತು ಪಕ್ಷ ಬಿಟ್ಟು ಹೋಗುವ ಬಗ್ಗೆ ಕಿಂಚಿತ್ತು ಯೋಚಿಸಿಲ್ಲ. ಈಗ ಅಪ್ಪ- ಮಕ್ಕಳ ಷಡ್ಯಂತ್ರದಿಂದ ತಾತ್ಕಾಲಿಕವಾಗಿ ಪಕ್ಷದಿಂದ ಹೊರಗಿzನೆ. ಚುನಾವಣೆ ಬಳಿಕ ಅವರಪ್ಪನೇ ಬಂದು ಕರಿತಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗಿ ಸೋತಿದ್ದ ಜಗದೀಶ್ ಶೆಟ್ಟರ್ ಅನ್ನೇ ಕರೆದುಕೊಂಡು ಬಂದು ಲೋಕಸಭೆಗೆ ಟಿಕೆಟ್ ಕೊಡಿಸಿzರೆ. ಪಕ್ಷದ ಕಟ್ಟಿ ಬೆಳೆಸಿದ ನನ್ನನ್ನು ಬಿಜೆಪಿಯಿಂದ ದೂರ ಮಾಡಲು ಆಗಲ್ಲ. ನನ್ನನ್ನು ಪಕ್ಷದಿಂದ ಹೊರಹಾಕಬೇಕು ಎಂದು ಅಪ್ಪ- ಮಕ್ಕಳು ಬಹಳ ಪ್ರಯತ್ನ ಮಾಡಿದ್ದರು. ಈಗ ಅವರಿಗೆ ಸಮಾಧಾನವಾಗಿದೆ. ಆದರೆ, ನನ್ನ ಜನ್ಮ ಇರೋವರೆಗೂ ಕಾಂಗ್ರೆಸ್‌ಗೆ ಹೋಗಲ್ಲ ಎಂದರು.
ಚುನಾವಣೆ ಬಳಿಕ ಅಪ್ಪ-ಮಕ್ಕಳಿಂದ ಬಿಜೆಪಿ ಮುಕ್ತವಾಗುತ್ತದೆ:
ಅಪ್ಪನ ಬೆಂಬಲದಿಂದ ರಾಜಧ್ಯಕ್ಷನಾಗಿರುವ ಎಳೆಸು ವಿಜಯೇಂದ್ರ ನಿಮ್ಮನ್ನು ಪಕ್ಷದಿಂದ ಹೊರಹಾಕಿzನೆ. ನಿಮಗೆ ಅನ್ಯಾಯ ವಾಗಿದೆ ಎಂದು ಕಾರ್ಯಕರ್ತರು ನೋವಿನಿಂದ ಕರೆ ಮಾಡುತ್ತಿzರೆ. ಈ ಅಪ್ಪ-ಮಕ್ಕಳಿಂದ ಈಶ್ವರಪ್ಪ ಹಾಗೂ ಹಿಂದುತ್ವಕ್ಕೆ ಅನ್ಯಾಯವಾಗಿದೆ. ಹೀಗಾಗಿ ಪ್ರತಿ ಬೂತ್‌ನಲ್ಲೂ ಈಶ್ವರಪ್ಪ ಅವರಿಗೆ ಮತ ಕೊಡಬೇಕು ಎಂದು ಜನರೇ ತೀರ್ಮಾನ ಮಾಡಿzರೆ. ನಾನು ಚುನಾವಣೆಯಲ್ಲಿ ಗೆದ್ದ ಬಳಿಕ ಇಲ್ಲಿ ರಾಘವೇಂದ್ರ ಮನೆಗೆ ಹೋಗುತ್ತಾರೆ, ವಿಜಯೇಂದ್ರ ರಾಜಧ್ಯಕ್ಷ ಸ್ಥಾನದಿಂದ ಕೆಳಗಿಳಿಯು ತ್ತಾರೆ. ಪಕ್ಷದ ಅಪ್ಪ-ಮಕ್ಕಳ ಕೈಯಿಂದ ಮುಕ್ತವಾಗುತ್ತದೆ ಎಂದು ಖಾರವಾಗಿ ಹೇಳಿದರು.
ರೈತ ಚಿಹ್ನೆ ಸಿಕ್ಕಿದ್ದು ನನ್ನ ಪುಣ್ಯ:
ಲೋಕಸಭಾ ಚುನಾವಣೆಗೆ ನನಗೆ ರೈತನ ಚಿಹ್ನೆ ಸಿಕ್ಕಿರುವುದು ಯಾವುದೋ ಜನ್ಮದ ಪುಣ್ಯ. ನಿಮಗೆ ಇಂತ ಒಳ್ಳೆ ಚಿಹ್ನೆ ಸಿಕ್ಕಿದೆ ಎಂದು ಅನೇಕರು ಚಿಹ್ನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿzರೆ. ಭದ್ರಾವತಿಯಲ್ಲಿ ಹಿಂದುತ್ವವಾದಿ ಯುವಕರು ರಾಷ್ಟ್ರಭಕ್ತರ ಬಳಗ ಸೇರ್ಪಡೆಯಾಗಲಿzರೆ. ಬೈಂದೂರಿ ನಲ್ಲಿ ಮೀನುಗಾರರು ನನಗೆ ಬೆಂಬಲ ವ್ಯಕ್ತಪಡಿಸಿzರೆ. ಹೀಗೆ ಎ ವರ್ಗದ ಜನತೆ ನನಗೆ ಬೆಂಬಲ ನೀಡುತ್ತಿದ್ದು, ಗೆದ್ದ ಬಳಿಕ ಅವರ ಅಪೇಕ್ಷೆಗೆ ತಕ್ಕಂತೆ ಸಂಘಟನೆ ಕಟ್ಟುತ್ತೇನೆ. ಅವರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ವಿಜಯೇಂದ್ರ ಕುಂಕುಮ ಅಳಿಸಿ ಹಾಕಿದ ವಿಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ನೀತಿ ನಿಯಮ ಇಲ್ಲದೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಅಪ್ಪ ಮಕ್ಕಳು ಹೊಂದಾಣಿಕೆ ಮಾಡಿಕೊಂಡು ೬೦ ಸಾವಿರದಿಂದ ೧೦ ಸಾವಿರಕ್ಕೆ ಲೀಡ್‌ಗೆ ಇಳಿದಿzರೆ. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ ಟಿಪ್ಪು ಸುಲ್ತಾನನ ಟೋಪಿ ಹಾಕಿದ್ದನ್ನು ನೋಡಿzವೆ. ವಿಜಯೇಂದ್ರ ಅವರು ಯಾವಾಗ ಬೇಕಾದರೂ ಕುಂಕುಮ ತೆಗೆಯುತ್ತಾರೆ. ಯಾವಾಗ ಬೇಕಾದರೂ ಹಚ್ಚಿಕೊಳ್ಳುತ್ತಾರೆ. ಅದೇ ರೀತಿ ಶಿವರಾಜಕುಮಾರ್, ಗೀತಾ ಕುಂಕುಮ ಅಳಿಸಿ ಹಾಕಿದ್ದನ್ನು ಪ್ರಶ್ನೆ ಮಾಡುತ್ತೇನೆ. ಇವರೆಲ್ಲರೂ ಹಿಂದೂ ಸಮಾಜದ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ವಾಟಗೋಡು ಸುರೇಶ್ ನೇತೃತ್ವದಲ್ಲಿ ಹೊಸನಗರ ತಾಲೂಕು ಅನೇಕ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ನೂರಾರು ಸಂಖ್ಯೆ ಕಾರ್ಯಕರ್ತರು ರಾಷ್ಟ್ರಭಕ್ತರ ಬಳಗವನ್ನು ಸೇರ್ಪಡೆಗೊಂಡರು. ಇದೇ ವೇಳೆ ಕೆ.ಎಸ್.ಈಶ್ವರಪ್ಪ ಅವರ ಚುನಾವಣೆ ಸ್ಪರ್ಧೆಯ ಚಿಹ್ನೆ ಹಾಗೂ ಕ್ರಮ ಸಂಖ್ಯೆವುಳ್ಳ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ವಾಟಗೋಡು ಸುರೇಶ್, ಅರಿದ್ರಾವತಿ ಗ್ರಾಪಂನ ಮಾಜಿ ಅಧ್ಯಕ್ಷೆ ಲೀಲಾವತಿ, ಗ್ರಾಪಂ ಮಾಜಿ ಸದಸ್ಯರಾದ ನಳೀನ ರಾವ್, ಭಗೀರಥ ಭಟ್, ಕಲ್ಕಿ ಮಹೇಶ್, ಕುಂಬ್ಳೆ ಅಶೋಕ್, ಎಚ್.ಮಂಜಪ್ಪ, ಡಾಕಪ್ಪ, ಎ.ಕೆ.ಭದ್ರಪ್ಪ, ನಾಗೇಂದ್ರ, ಗೋಪಾಲಗೌಡ, ದ್ವಾರಕೇಶ್ ಸೇರಿದಂತೆ ಅನೇಕರು ಹಾಜರಿದ್ದರು.