ಟ್ರಾಫಿಕ್ ಫೈನ್ ಕಟ್ಟಲು ಸೆ.12ರವರೆಗೆ ವಿನಾಯಿತಿ …
ಶಿವಮೊಗ್ಗ : ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ನ್ಯಾಯಾಲ ಯದ ಮತ್ತು ಸರ್ಕಾರದ ಆದೇಶ ದನ್ವಯ ದಂಡ ಕಟ್ಟಲು ವಿನಾಯಿತಿ ಪ್ರಕಟವಾಗಿದ್ದು, ಸೆ.೧೨ರ ಒಳಗೆ ದಂಡ ಕಟ್ಟುವವರಿಗೆ ಶೇ.೫೦ರಷ್ಟು ರಿಯಾಯಿತಿ ಘೋಷಿಸಿದೆ. ಇದರ ಅನ್ವಯ ನಗರದ ಬಹುತೇಕ ವೃತ್ತಗಳಲ್ಲಿ ಸಾರ್ವಜನಿಕರು ಸಂಚಾರಿ ನಿಯಮ ಉಲ್ಲಂಘನೆಯ ದಂಡ ಕಟ್ಟುತ್ತಿರುವುದು ಕಂಡು ಬಂದಿತು.
ನಗರದಲ್ಲಿ ಸಂಚಾರಿ ಪೂರ್ವ ಮತ್ತು ಸಂಚಾರಿ ಪಶ್ಚಿಮ ಠಾಣೆ ಹಾಗೂ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ ಹಾಗೂ ಮಹಾ ವೀರ ವೃತ್ತ, ಅಶೋಕ ಸರ್ಕಲ್, ಎ.ಎ. ಸರ್ಕಲ್, ಗೋಪಿಸರ್ಕಲ್, ಶಿವಪ್ಪನಾಯಕ ವೃತ್ತ, ರೈಲ್ವೆ ಸ್ಟೇಷನ್ ವೃತ್ತ, ಉಷಾನರ್ಸಿಂಗ್ ಹೋಂ ಸರ್ಕಲ್ ಬಳಿ, ಸಂಚಾರಿ ಎಎಸ್ಐ ಮತ್ತು ಪಿಎಸ್ಐ ಹಾಗೂ ಮೇಲ್ಪಟ್ಟ ಅಧಿಕಾರಿಗಳ ಮುಖಾಂ ತರ ಸ್ಥಳದ ದಂಡದ ಮೊತ್ತವನ್ನು ಕಟ್ಟಬಹುದಾಗಿದೆ. ಈಗಾಗಲೇ ಜಿ ರಕ್ಷಣಾಧಿಕಾರಿಗಳು ಕೂಡ ಸಾರ್ವಜನಿಕರಲ್ಲಿ ಮನವಿ ಮಾಡಿ ಕೊಂಡಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿ ಸಿಕೊಳ್ಳಿ ಅಲ್ಲದೆ ಮುಂದಿನ ದಿನಗ ಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಬೇಡಿ ಎಂದು ಮನವಿ ಮಾಡಿzರೆ. ಸಾರ್ವಜನಿಕರು ಟ್ರಾಫಿಕ್ ಪೊಲೀಸರ ಬಳಿ ತಮ್ಮ ವಾಹನದ ಸಂಖ್ಯೆಯನ್ನು ತಿಳಿಸಿದರೆ ಅವರು ದಂಡದ ಮೊತ್ತವನ್ನು ಸ್ಥಳದ ತಿಳಿಸುತ್ತಾರೆ. ಮೊಬೈಲ್ ನಲ್ಲಿ ಗೂಗಲ್ಗೆ ಹೋಗಿ ಇ- ಚಲನ್ ಸೈಟ್ಗೆ ಹೋದರೆ ನಿಮ್ಮ ವಾಹನದ ದಂಡದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.

