ಗೌರಿ-ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸರ್ವರ ಸಲಹೆ ಸಹಕಾರ ಅತ್ಯಗತ್ಯ: ಹಿರೇಕಲ್ಮಠ ಶ್ರೀಗಳು
ಹೊನ್ನಾಳಿ: ಪಟ್ಟಣದ ಹಿಂದೂ ಮಹಾಸಭಾ ಗೌರಿ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳು ಹಿರೇಕಲ್ಮಠಕ್ಕೆ ತೆರಳಿ ಒಡೆಯರ್ ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳಿಂದ ಪ್ರಥಮ ದೇಣಿಗೆ ಪಡೆದು ಹಬ್ಬದ ಆಚರಣೆಯ ವಿಧಿ-ವಿಧಾನಗಳ ಬಗ್ಗೆ ಶ್ರೀಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ನೂತನ ಸಮಿತಿಯವರಿಗೆ ಆರ್ಶೀವಾದ ನೀಡಿ ಮಾತನಾಡಿದ ಪೂಜ್ಯಶ್ರೀಗಳು, ಹಿಂದೂಗಳಿಗೆ ಗಣಪತಿ ಹಬ್ಬವು ಪ್ರಮುಖ ಹಬ್ಬಗಳಂದಾಗಿದ್ದು ಈ ಸಮಿತಿ ಯವರಿಗೆ ಪಟ್ಟಣದ ಎ ಸದ್ಭಕ್ತರು ತನು-ಮನ-ಧನ ಸಹಾಯ ಮಾಡಿ ಗಣೇಶನ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಹಾಗೂ ಪ್ರಸಾದದ ವ್ಯವಸ್ಥೆಯು ಪ್ರತೀ ವರ್ಷದಂತೆ ಸಾಂಗವಾಗಿ ನೆರವೇರಲು ಸಹಕರಿಸಬೇಕೆಂದು ತಿಳಿಸಿದರು.
ನೂತನ ಸಮಿತಿಯ ಪದಾಧಿಕಾರಿಗಳ ಬಳಿ ಶ್ರೀಗಳು ಹಬ್ಬದ ರೂಪು-ರೇಷೆಗಳ ಬಗ್ಗೆ ಮತ್ತು ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಬಗ್ಗೆ ಕೈಗೊಂಡಿರುವ ತಯಾರಿ ಬಗ್ಗೆ ಮಾಹಿತಿ ಪಡೆದುಕೊಂಡರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬಿಸಾಟಿ ನಾಗರಾಜ್ ಮಾತನಾಡಿ, ಪ್ರಥಮ ಬಾರಿಗೆ ಒಡೆಯರ್ ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಗೌರಿ- ಗಣೇಶ ವಿಸರ್ಜನಾ ಮತ್ತು ಪ್ರಸಾದ ಹಾಗೂ ಪೂಜ ಕೈಂಕರ್ಯಗಳನ್ನು ಹಮ್ಮಿಕೊಳ್ಳಲು ಪೂಜ್ಯರ ಬಳಿ ಬಿನ್ನಹ ಮಾಡಲು ಬಂದಿದ್ದು ಶ್ರೀಗಳು ತಾವು ಬಿಡುವು ಮಾಡಿಕೊಂಡು ಬರುತ್ತೇನೆ ಎಂದು ಹೇಳಿರುವುದು ನಮ್ಮ ಪುಣ್ಯವೆಂದು ಹರ್ಷ ವ್ಯಕ್ತಪಡಿಸಿದರು.
ಸೆ.೧೭ ರಂದು ಗೌರಿ ಮತ್ತು ೧೮ರ ಸೋಮವಾರದಂದು ಗಣೇಶನ ಪ್ರತಿಷ್ಠಾಪನೆಯನ್ನು ಮಾಡಲಾಗುವುದು. ಸೆ.೨೮ರ ಗುರುವಾರದಂದು ರಾತ್ರಿ ೮ ಗಂಟೆಗೆ ಬಾಗಣ ಡ್ರಾ ಮಾಡಲಾಗುವುದು ಮತ್ತು ಅ.೧ರ ಭಾನುವಾರದಂದು ಗಣೇಶ ವಿಸರ್ಜನೆಯನ್ನು ಮಾಡ ಲಾಗುವುದು ಎಂದು ವಿವರಿಸಿದರು.
ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಎಸ್. ರುದ್ರೇಶ್ ಮಾತನಾಡಿ, ಪ್ರತೀ ವರ್ಷದಂತೆ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲು ಸಮಿತಿಯವತಿಯಿಂದ ಎ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದ್ದು ಪಟ್ಟಣದ ಮತ್ತು ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಸಕಲ ಭಕ್ತಾದಿಗಳು ಪಕ್ಷಾತೀತವಾಗಿ-ಜತ್ಯಾತೀತವಾಗಿ ಸೌಹಾರ್ದತೆಯಿಂದ ಗೌರಿ-ಗಣೇಶ ಹಬ್ಬಕ್ಕೆ ಸರ್ವರೂ ತಮ್ಮ ಅತ್ಯಮೂಲ್ಯ ಸಲಹೆ ಸಹಕಾರ ನೀಡ ಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚನ್ನಪ್ಪ ಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರ್ ಮಠ, ಹಿರೇಕಲ್ಮಠದ ವ್ಯವಸ್ಥಾಪಕ ಎಂ.ಪಿ.ಎಂ. ಚನ್ನಬಸಯ್ಯ, ಸಮಿತಿಯ ಉಪಾಧ್ಯಕ್ಷರಾದ ಎಂ.ಆರ್. ಮಹೇಶ್, ಖಜಂಚಿ ಎಚ್.ಡಿ. ಮಲ್ಲಿಕಾರ್ಜುನ್, ಸದಸ್ಯರಾದ ಮಂಜು ಸತ್ತಿಗೆ, ಕೋರಿ ಯೋಗೀಶ್ ಕುಳಗಟ್ಟೆ ಮುಖಂಡ ರಾದ ಪಟ್ಟಣಶೆಟ್ಟಿ ವಿಜಯ್ ಕುಮಾರ್, ಎಂ.ಟಿ.ಬಿ.ಮಂಜು, ವಸಂತ್ ಮತ್ತಿತರರಿದ್ದರು.