ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯೋಗ ಕ್ವಿಜ್ ಮೂಲಕ ಯೋಗದ ಮಹತ್ವ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯ…

Share Below Link

ಶಿವಮೊಗ್ಗ: ಯೋಗ ಕ್ವಿಜ್ ಮೂಲಕ ಯೋಗದ ಮಹತ್ವವನ್ನು ಪ್ರತಿಯೊಬ್ಬರು ಸರಳವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷ ನಾಗಪತಿ ವಿ.ಭಟ್ ಹೇಳಿ ದರು.
ಅವರು ಸವಳಂಗದ ರೋಟರಿ ಯುವ ಕೇಂದ್ರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ವಿಸ್ತಾರ ನ್ಯೂಸ್ ಕನ್ನಡ ಚಾನಲ್ ಸಹ ಯೋಗದೊಂದಿಗೆ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾ ಚರಣೆ ಮತ್ತು ಮಧ್ಯ ವಯಸ್ಕರು ಹಾಗೂ ಹಿರಿಯ ನಾಗರೀಕರಿಗೆ ಯೋಗ ಎಂಬ ವಿಷಯದ ಬಗ್ಗೆ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್‌ರವರ ಯೋಗ ಕ್ವಿಜ್‌ನಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿ ದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕತ ಯೋಗಾ ಚಾರ್ಯ ಪತಂಜಲಿ ಜೆ.ನಾಗ ರಾಜ್ ವಿಶೇಷ ಉಪನ್ಯಾಸ ನೀಡಿ ಸಾವಿರಾರು ವರ್ಷಗಳ ಇತಿಹಾಸ ವನ್ನು ಹೊಂದಿರುವ ಯೋಗ ಇಂದು ವಿಶ್ವದ ಎ ದೇಶಗಳು ಆಚರಿಸುವುದರ ಮೂಲಕ ಪ್ರತಿ ಯೊಬ್ಬರ ಮನ ಮನಗಳಲ್ಲಿಯೂ, ಮನೆ ಮನೆಗಳಲ್ಲಿಯೂ ದೀಪ ಜ್ಯೋತಿಯಾಗಿ ಪ್ರಜ್ವಲಿಸುತ್ತಿದೆ. ಯೋಗ ಕಲೆಯು ಹೌದು ವಿe ನವು ಹೌದು. ಪ್ರತಿಯೊಬ್ಬರು ಬ್ರಾಹ್ಮಿ ಮುಹೂರ್ತ ಮತ್ತು ಮುಸ್ಸ ಂಜೆಯ ಪ್ರಶಾಂತ ವಾತಾವರಣ ದಲ್ಲಿ ಹಿತ ಮಿತವಾಗಿ ಯೋಗಾ ಭ್ಯಾಸ ಮಾಡಿದಾಗ ಅಮೃತದ ರೂಪದಲ್ಲಿ ಜೀವನ ಆನಂದವನ್ನು ಅನುಭವಿಸಲು ಸಾಧ್ಯ ಎಂದು ಯೋಗ ಕ್ವಿಜ್ ಮೂಲಕ ಪ್ರತಿಯೊ ಬ್ಬರು ಭಾಗಹಿಸಿದಾಗ ಯೋಗದ ಸತ್ವ ತತ್ವ ಮಹತ್ವವನ್ನು ತಿಳಿಯಲು ಸಾಧ್ಯ ಎಂದರು..
ರೋಟರಿ ಕ್ಲಬ್ ಶಿವಮೊಗ್ಗದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್ ಮಾತನಾಡಿ ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ಯೋಗ ಇಂದು ವಿಶ್ವದ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿರುವುದು ಯೋಗದ ಶಕ್ತಿಯಿಂದ ಮಾತ್ರ ಎಂದರು.
ಪತಂಜಲಿ ಸಂಸ್ಥೆ ಆಡಳಿತಾಧಿಕಾರಿ ಎಂ.ಪೂವಯ್ಯ ಮಾತನಾಡಿ ಪತಂಜಲಿ ಮಹರ್ಷಿಯ ಅಷ್ಟಾಂಗ ಯೋಗ ಸೂತ್ರದ ಮಹತ್ವವನ್ನು ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ಆಳವಡಿಸಿಕೊಂಡಾಗ ಜೀವನದಲ್ಲಿ ಪರಿವರ್ತನೆಯನ್ನು ತರಲು ಯೋಗ ಸಹಕಾರಿ ಆಗಿದೆ. ಯೋಗ ಕ್ವಿಜ್ ದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಭಾರ್ಗವಿ ಭಟ್, ದ್ವಿತೀಯ ಬಹುಮಾನ ಲತಾ, ಮೂರನೇಯ ಬಹುಮಾನ ಪೇಟೆ ಅಜಯ್‌ಕುಮಾರ್, ಸಮಾ ಧಾನಕರ ಬಹುಮಾನ ಎನ್.ಜಿ. ಉಷಾ, ಮಲ್ಲಿಕಾ ಜೋಯಿಸ್, ಗಾಯಿತ್ರಿ ಸುದೀಂದ್ರ, ವೆಂಕಟ ರಾಮ್ ಜೋಯಿಸ್, ಟಿ.ಕೆ. ಮಹಾಬಲೇಶ ಭಟ್, ಸೂರ್ಯ ನಾರಾಯಣ ಉಡುಪ, ಹೆಚ್.ಜಿ. ಗೋಪಾಲ, ಜ್ಯೋತಿ ಪವಾರ್ ಪಡೆದು ಯೋಗದ ಮಹತ್ವವನ್ನು ಹೆಚ್ಚಿಸಿzರೆ ಎಂದರು.