ಪ್ರಾಣ ಹೋದರೂ ಭೂಮಿ ಬಿಡಲ್ಲ: ಬಸವರಾಜಪ್ಪ
ಭದ್ರಾವತಿ: ಸ್ವಾತಂತ್ಯ ಪೂರ್ವದಿಂದಲೂ ಬಗರ್ ಹುಕುಂ ಸಾಗು ಮಾಡುತ್ತಾ ಕಾನೂನು ಬದ್ದವಾಗಿ ಸಾಗುವಳಿ ಚೀಟಿ ಪಡೆದು ಜೀವಿಸುತ್ತಿರುವ ರೈತರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ. ರೈತರು ಪ್ರಾಣ ಹೋ ದರೂ ಭೂಮಿಯನ್ನು ಬಿಡಲ್ಲ ಎಂಬುದನ್ನು ಸರ್ಕಾರ ಅರಿಯಲಿ ಎಂದು ರಾಜ್ಯ ರೈತ ಸಂಘದ ಮುಖಂಡ ಹೆಚ್.ಆರ್.ಬಸವರಾ ಜಪ್ಪ ಆಕ್ರೋಶ ವ್ಯಕ್ತ ಪಡಿಸಿದರು.

ಅವರು ಹೊಳೆಹೊನ್ನೂರು ಮತ್ತು ಹೊಳೆಹೊನ್ನೂರು ಹೋಬ ಳಿ ಭಾಗದ ರೈತರು ಅರಣ್ಯ ಇಲಾಖೆ ವಿರುಧ್ಧ ಹಮ್ಮಿಕೊಂಡಿದ್ದ ಭಾರೀ ಪ್ರತಿಭಟನೆಯಲ್ಲಿ ಮತನಾಡಿ. ರೈತರು ೭೦-೮೦ ವರ್ಷಗಳಿಂದ ಬಗರ್ ಹುಕುಂ ಸಾಗು ಮಾಡುತ್ತಾ ಸಾಗುವಳಿ ಚೀಟಿ ಪಡೆದು ಪಹಣಿ ಮತ್ತಿತರೆ ದಾಖಲಾತಿ ಹೊಂದಿ ಬ್ಯಾಂಕುಗಳಲ್ಲಿ ಸಾಲ ಪಡೆದು ಬಾವಿ ಕೊಳವೆ ಬಾವಿ ಇತ್ಯಾದಿ ಅಭಿವೃದ್ದಿ ಮಾಡಿಕೊಂಡಿರುವ ಭೂಮಿಯ ನ್ನು ತೆರವುಗೊಳಿಸಲು ಎಸಿ ಮೂಲಕ ನೋಟೀಸು ನೀಡುತ್ತ ಆತಂಕ ಹುಟ್ಟಿಸುತ್ತಿರುವುದು ಸಲ್ಲದು. ಅರಣ್ಯ ಸಚಿವ ಈಶ್ವರ ಖಂಡ್ರೆಯ ವರೇ ಸದನದಲ್ಲಿ ಮತ್ತು ಬಹಿರಂಗ ವಾಗಿ ಹೇಳಿರುವಂತೆ ೧೦೦ ಎಕರೆ ಭೂಮಿಯೊಳಗಿರುವ ಯಾವ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿದ್ದರೂ ಅರಣ್ಯಾಧಿಕಾರಿಗಳ ಅಟ್ಟಹಾಸ ಹೆಚ್ಚಾಗಿದೆ.
ಅಧಿಕಾರಿಗಳ ಯಾವ ಚಿತಾವಣೆಗೂ ರೈತರು ಹೆದರಬೇಡಿ. ಜನ ಶಕ್ತಿಗಿಂತ ಕಾನೂನು ದೊಡ್ಡ ದಲ್ಲ. ಯಾವ ಸರಕಾರಗಳು ಉಳಿ ಯಲ್ಲ. ೧೯೮೬ ರಲ್ಲಿ ಜೈಲು ಭರ್ತಿ ಆದಂತೆ ಈಗಲೂ ಜೈಲು ಭರ್ತಿಗೆ ಅಂಜಬೇಡಿ. ಬೆಂಕಿ ಬಿzಗ ಓಡಿದ ಹಾಗೆ ರೈತರು ಅಧಿಕಾರಿಗಳ ವಿರುದ್ದ ಹೋರಾಟಕ್ಕೆ ಓಡಬೇಕಾಗಿದೆ. ಅಧಿಕಾರಿಗಳ ಮೇಲೆ ಕೈ ಮಾಡದೆ ಗಾಂಧೀಜಿಯವರ ಶಾಂತಿಯ ಹಾದಿಯಲ್ಲಿ ಹೋರಾಡೋಣವೆಂದರು.
ಕಾಂಗ್ರೇಸ್ ಜಿಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ ಅರಣ್ಯ ಮತ್ತು ಕಂದಾಯ ಭೂಮಿ ಯನ್ನು ಇಂಡೀಕರಣ ಮಾಡಿದಾಗಿ ನಿಂದಲೂ ರೈತರ ಸಮಸ್ಯೆ ಕಡಿಮೆ ಯಾಗಿಲ್ಲ. ಅರಣ್ಯ ಸಚಿವರು ಹೇಳಿ ದ್ದರೂ ಅಧಿಕಾರಿಗಳು ಒಕ್ಕಲೆಬ್ಬಿಸಲು ನೋಟೀಸ್ ಜರಿಗೊಳಿಸಿರುವುದು ಕೈಬಿಡಬೇಕು. ಹೋರಾಟದಿಂದ ಮಾತ್ರ ನ್ಯಾಯ ಸಾಧ್ಯ. ಜಿ ಉಸ್ತು ವಾರಿ ಸಚಿವ ಮಧು ಬಂಗಾರಪ್ಪ ಅವರು ಸದಸ್ಯದಲ್ಲಿಯೇ ಶಿವಮೆಗ್ಗಕ್ಕೆ ಬರಲಿzರೆ. ಅಂದು ಡಿಎಫ್‌ಓ ಎಸಿ ಅವರನ್ನು ಕರೆಸಿ ರೈತರಿಗೆ ತೊಂ ದರೆ ನೀಡುವುದನ್ನು ತಡೆಯಲಾಗು ವುದೆಂದರು.

ಎಂಎಲ್‌ಸಿ ಡಾ: ಧನಂಜಯ ಸರ್ಜಿ ಮಾತನಾಡಿ ಆನೆಗಳು ಮನುಷ್ಯನಿಗೆ ಓಡಿಸಿಕೊಂಡು ಹೋಗುತ್ತಿವೆ. ಅರಣ್ಯಾಧಿಕಾರಿಗಳು ಆನೆಯನ್ನು ಹಿಡಿಯಲಾಗದೆ ಸಾಗು ಮಾಡುತ್ತಿರುವ ರೈತರನ್ನು ಓಡಿಸಲು ಬರುತ್ತಿzರೆ. ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊ ಳ್ಳುತ್ತಿರುವುದು ಒಳ್ಳೆಯದಲ್ಲವೆಂ ದರು. ರೈತರನ್ನ ಒಕ್ಕಲೆಬ್ಬಿಸಿದರೆ ರೈತರು ನಿಮ್ಮನ್ನು ಸುಮ್ಮನೆ ಬಿಡಲ್ಲವೆಂದು ಎಚ್ಚರಿಸಿದರು.
ಮಾಜಿ ಎಂಎಲ್‌ಸಿ ಎಸ್. ರುದ್ರೇಗೌಡ ಮಾತನಾಡಿ ಸರಕಾರದ ಒತ್ತಡದಿಂದಾಗಿ ಅಧಿಕಾರಿಗಳ ಕ್ರಮವಾಗಿದೆ. ೭೦ ವರ್ಷವಾದರೂ ಅಧಿಕಾರಿಗಳು ಅರಣ್ಯ ಭೂಮಿ ಎಂದು ಹೇಳುತ್ತಿರುವುದು ನಾಚಿಕೆ ಯಾಗಬೇಕು. ಬಗರ್ ಹುಕುಂ ಎಂದು ರೈತರಿಗೆ ಜಮೀನನ್ನು ವಿವಿಧ ಯೋಜನೆಯಡಿ ಮಂಜೂರು ಮಾಡಿದ ಮೇಲೆ ಆ ಜಮೀನು ರೈತರzಗುತ್ತದೆ ಹೊರತು ಅರಣ್ಯ ಇಲಾಖೆಯವರzಗುವುದಿಲ್ಲ. ಈ ವಾಸ್ತವಾಶಂವನ್ನು ಅರಲಿಯದೆ ಅರಣ್ಯ ಇಲಾಖೆಯವರು ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ ಎಂದು ಆಕೋಶ ವ್ಯಕ್ತಪಡಿಸಿ, ರೈತರು ಒಗ್ಗಟ್ಟಿನಿಂದ ಸರಕಾರವನ್ನು ಎದುರಿಸಬೇಕಾಗಿದೆ ಎಂದು ಕರೆ ನೀಡಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್ ಮಾತನಾಡಿ ರೈತರನ್ನು ಮುಟ್ಟಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಜಿ ಉಸ್ತುವಾರಿ ಮತ್ತು ಅರಣ್ಯ ಸಚಿವರ ಮಾತಿನಂತೆ ನಡೆಯಿರಿ ಎಂದರು.
ಈ ಸಂದರ್ಭದಲ್ಲಿ ಶಾಸಕಿ ಶಾರದಾ ಪೂರ್‍ಯಾನಾಯ್ಕ, ಮಾಜಿ ಶಾಸಕ ಅಶೋಕ್‌ನಾಯ್ಕ್ ಮುಖಂಡರಾದ ಜಗದೀಶ್‌ಗೌಡ, ಕೆ.ಹೆಚ್.ತೀರ್ಥಯ್ಯ, ಮಂಗೋಟೆ ರುದ್ರೇಶ್, ಮಲ್ಲಯ್ಯ, ಮಶಪ್ಪ, ಹನುಮಂತು, ಕಟ್ಟಾ ಉಮೇಶ್, ಮಶ್‌ರಾವ್ ನೂರಾರು ರೈತರು ಉಪಸ್ಥಿತರಿದ್ದರು.
