ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಶಾಂತಿ ನಡಿಗೆಯಲ್ಲಿ ಸ್ವಾಮೀಜಿಗಳನ್ನು ಬೀದಿಗೆ ತಳ್ಳಿದ್ದ ಈಶ್ವರಪ್ಪ ಇಂದು ಲಿಂಗಾಯತರ ಓಲೈಕೆಗೆ ಮುಂದಾಗಿರುವುದೇಕ: ಎಸ್‌ಪಿ ದಿನೇಶ್…

Share Below Link

ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ದರಾಗಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಎಸ್.ಪಿ. ದಿನೇಶ್, ಶಾಂತಿ ನಡಿಗೆ ಕಾರ್ಯಕ್ರಮದ ಸಂದರ್ಭದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಇಬ್ಬರೂ ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎಂದು ಎಸ್.ಪಿ.ದಿನೇಶ್ ಗಂಭೀರ ಆರೋಪ ಮಾಡಿದರು.
ಶಾಂತಿ ನಡಿಗೆ ಕಾರ್ಯಕ್ರಮ ಬಿಜೆಪಿ ಮುಖಂಡ ಡಾ| ಧನಂಜಯ ಸರ್ಜಿ ಸೇರಿದಂತೆ ವಿವಿಧ ಪಕ್ಷಗಳ ಸಂಘಟನೆಗಳ ಪ್ರಗತಿಪರರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಸೈನ್ಸ್ ಮೈದಾನದಲ್ಲಿ ಆಯೋಜನೆಗೊಂಡಿತ್ತು. ಆದರೆ ಶಾಸಕ ಈಶ್ವರಪ್ಪನವರು ಕಾಲೇಜಿನ ಗೇಟಿಗೆ ಬೀಗ ಹಾಕಿಸಿ ಶಾಂತಿ ನಡಿಗೆ ಕಾರ್ಯಕ್ರಮವನ್ನು ತಪ್ಪಿಸಿದರು ಎಂದು ವಾಗ್ದಾಳಿ ನಡೆಸಿದ ದಿನೇಶ್, ಇದರಿಂದ ಇಬ್ಬರು ಶ್ರೀಗಳು ಬಸ್ ನಿಲ್ದಾಣದಲ್ಲಿ ಆಶೀರ್ವಚನ ನೀಡುವಂತಾಯಿತು. ಈಗ ಇದೇ ಈಶ್ವರಪ್ಪನವರು ಅವರ ಮಠಗಳಿಗೆ ಹೋಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಹಾಗಾದರೆ ಇವರಿಗೆ ಶಾಂತಿ ಬೇಡವೇ, ಸ್ವಾಮೀಜಿಗಳು ಬೇಡವೇ ಎಂದು ಪ್ರಶ್ನೆ ಮಾಡಿದರಲ್ಲದೇ, ಈಗ ಇದೇ ಮಠಾಧೀಶರನ್ನು ಭೇಟಿ ಮಾಡುತ್ತಾ ಲಿಂಗಾಯಿತ ಸಮುದಾಯವನ್ನು ಓಲೈಸುವ ಪ್ರಯತ್ನ ಮಾಡುತ್ತಿರುವುದು ಏಕೆ ಎಂದು ಕೆ.ಎಸ್. ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಪ್ರಚಾರ ಸಮಿತಿ ರಾಜ್ಯ ಸಂಯೋಜಿಕ ಎಸ್.ಪಿ. ದಿನೇಶ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ರಮೇಶ್ , ಓಬಿಸಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಶಿವಿಶ್ವನಾಥ್, ಉತ್ತರಬ್ಲಾಕ್ ಅಧ್ಯಕ್ಷ ದೀಪಕ್ ಸಿಂಗ್, ಆಸೀಫ್ ಉಪಸ್ಥಿತರಿದ್ದರು.