ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪರಿಸರ ಸಂರಕ್ಷಣೆ ಸಾಮಾಜಿಕ ಜಲತಾಣಗಳ ಪೋಸ್ಟ್ ಗಳಿಗೆ ಸೀಮಿತವಾಗದಿರಲಿ…

Share Below Link

ಶಂಕರಘಟ್ಟ: ವಿಶ್ವ ಪರಿಸರ ದಿನಾಚರಣೆಯು ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ, ಮೇಸೇಜ್ ಅಥವಾ ಸ್ಟೇಟಸ್ ಹಾಕಿದರೆ ಅಷ್ಟಕ್ಕೆ ಮುಗಿವುದಿಲ್ಲ. ಬದಲಿಗೆ ಖುದ್ದು ಪರಿಸರ ಸ್ವಚ್ಛಗೊಳಿಸುವುದೋ ಅಥವಾ ಸಸಿಗಳನ್ನು ನೆಡುವ ಕಾರ್ಯ ಮಾಡಿದರೆ ಪರಿಸರ ದಿನವನ್ನು ಆಚರಿಸಿದ ಸಾರ್ಥಕತೆ ಸಿಗುತ್ತದೆ ಎಂದು ಖ್ಯಾತ ಶಿಕ್ಷಣ ತಜ್ಞ ಶ್ರೀನಾಥ್ ನಗರಗz ಹೇಳಿದರು.
ಕುವೆಂಪು ವಿವಿ ಪರಿಸರ ವಿeನ ವಿಭಾಗವು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೈವಿಕ ವಿeನ ಭವನದ ಸಂಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಸರದ ಬಗ್ಗೆ ಕಾಳಜಿ ಇದ್ದರೂ ನನ್ನೊಬ್ಬನಿಂದ ಏನು ಸಾಧ್ಯ ವಾಗುತ್ತದೆ ಎಂದು ಸುಮ್ಮನಿದ್ದು ಬಿಡಬಾರದು. ನೀವು ಅಂದು ಕೊಂಡ ಬದಲಾವಣೆ ನಿಮ್ಮಿಂದಲೇ ಶುರುವಾಗಬೇಕು. ದೇಶದ ಶೇ. ೨೭ ರಷ್ಟು ಜನಸಂಖ್ಯೆ ಮೊಬೈಲ್ ಬಳಸುತ್ತಿದೆ. ಇದು ಸಾಮಾಜಿಕ ಜಲತಾಣಗಳ ಮೂಲಕ ಪರಿಸರದ ಜಾಗೃತಿ ಮೂಡಿಸಲು ಉತ್ತಮ ಮಾಧ್ಯಮವಾಗಿದೆ. ಸಾಮಾಜಿಕ ಜಲತಾಣಗಳಲ್ಲಿ ಸಮಾನ ಮನಸ್ಕರ ಗ್ರೂಪ್ ಅಥವಾ ಪೇಜ್ ಸೃಷ್ಟಿಸಿ ಆ ಮೂಲಕ ಪರಿಸರ ಪ್ರೇಮಿಗಳ ಸಂಘಟಿಸಿ ಪರಿಸರ ಸಂರಕ್ಷಿಸುವ ಕೆಲಸ ಮಾಡಲು ಹೇರಳವಾದ ಅವಕಾಶಗಳಿವೆ ಎಂದರು.


ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಅವರು ಮಾತನಾಡಿ, ಪರಿಸರ ದಿನಾಚರಣೆ ದಿನ ಎರಡು ಗಿಡ ನೆಟ್ಟರೆ ಸಾಲದು, ಅದು ಕೇವಲ ಒಂದು ಭಾಗ ಅಷ್ಟೆ. ಆದರೆ ಪರಿಸರಕ್ಕೆ ಮಾರಕ ವಾಗುತ್ತಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ಬಳಸವುದನ್ನು ಕಡಿಮೆ ಮಾಡುತ್ತವೆ ಎಂದು ತೀರ್ಮಾನಿಸಬೇಕಿದೆ. ಮನೆಗಳಲ್ಲಿ, ಕಛೇರಿಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿಕೊಳ್ಳುವುದ ರಿಂದ ಪರಿಸರ ಮಾಲಿನ್ಯ ತಡೆಗಟ್ಟ ಬಹುದಾಗಿದೆ. ಇವತ್ತು ಕಾಸ್ಮೊ ಹಾಗೂ ಮೆಟ್ರೊಪಾಲಿಟನ್ ನಗರಗಳಲ್ಲಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯ ಮತ್ತು ಇ-ತ್ಯಾಜ್ಯ ವಸ್ತುಗಳ ಮರುಬಳಕೆಗೆ ಒತ್ತು ಕೊಬೇಕಿದೆ. ಈ ಬಗ್ಗೆ ಗ್ರಾಮೀಣ ಭಾಗದ ಜನರು ಈಗಿನಿಂದಲೇ ಜಾಗೃತರಾಗಬೇಕಿದೆ ಎಂದರು.
ಕುವೆಂಪು ವಿವಿ ಕುಲಪತಿ ಬಿ.ಪಿ. ವೀರಭದ್ರಪ್ಪ ಮಾತನಾಡಿ ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಿಕೊಂಡು ಸುಸ್ಥಿರ ಅಭಿವೃದ್ಧಿ ಬಗ್ಗೆ ಚಿಂಥಿಸುವ ಅನಿವಾರ್ಯತೆ ಇದೆ. ನೈಸರ್ಗಿಕ ಸಂಪನ್ಮೂಲಗಳ ವಿಪರೀತ ಬಳಕೆ ಮಾನವನಿಗೆ ಅಪಾಯಕಾರಿ ಎಂದು ಸುನಾಮಿ, ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ, ಜಗತಿಕ ತಾಪಮಾನ ಏರಿಕೆ ಎಂತಹ ಪ್ರಕೃತಿ ವಿಕೋಪಗಳು ಎಚ್ಚರಕೆ ಕೊಡುತ್ತಲೇ ಬರುತ್ತಿವೆ. ವಾಹನಗಳು ಇಂಗಾಲ ಡೈ ಆಕ್ಸಿಡ್ ಉಗುಳುವಿಕೆ ಹೆಚ್ಚಿನ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಇಂದು ಎಲೆಕ್ಟ್ರಿಕ್ ವಾಹನ ಗಳ ಬಳಕೆ ಉತ್ತೇಜಿಸುವುದಕ್ಕಾಗಿ ಅವುಗಳ ಪ್ರದರ್ಶನ ಏರ್ಪಡಿಸಿರು ವುದು ಅಭಿನಂದನೀಯ ಎಂದರು.
ಚಿನ್ನದ ಪದಕ ಸ್ಥಾಪನೆ:
ವಿವಿಯ ಪರಿಸರ ವಿeನ ವಿಭಾಗದಲ್ಲಿ ಅತಿಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗೆ ಬಂಗಾರದ ಪದಕ ನೀಡುವುದಾಗಿ ಹೊಯ್ಸಳ ಸೊಸೈಟಿಯ ಅಧ್ಯಕ್ಷ ಎಂ. ಶಂಕರ್ ಘೋಷಿಸಿದ್ದು, ಶೀಘ್ರ ಚಿನ್ನದ ಪದಕ ಸ್ಥಾಪನೆಗಾಗಿ ವಿವಿಗೆ ದೇಣಿಗೆ ನೀಡುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಯೋಗೇಂದ್ರ, ಶಂಕರ್ ಹಾಗೂ ವಿವಿಧ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.