ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ …

Share Below Link

ಶಿವಮೊಗ್ಗ : ಪರಿಸರ ಇದ್ದರೆ ನಾವು. ಆದ್ದರಿಂದ ಪರಿಸರ ಸಂರ ಕ್ಷಣೆ ನಮ್ಮೆಲ್ಲರ ಮುಖ್ಯ ಜವಾಬ್ದಾ ರಿಯಾಗಿದೆ ಎಂದು ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಗಾಡಿಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿ ಕೊಳ್ಳಲಾಗಿದ್ದ ಸಸ್ಯ ಶ್ಯಾಮಲ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಹೆಚ್ಚು ಅರಣ್ಯ ನಾಶ ವಾಗುತ್ತಿರುದನ್ನು ಕಾಣುತ್ತಿದ್ದೇವೆ. ಅರಣ್ಯ ನಾಶವಾದಷ್ಟು ಪರಿಸರದ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಗಿಡ-ಮರಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕಿದೆ. ಇದು ನಮ್ಮೆಲ್ಲರ ಜವಾಬ್ದಾರಿ ಮತ್ತು ಇಂದಿನ ತುರ್ತಾಗಿದೆ.
ಪರಿಸರ ಸಂರಕ್ಷಣೆ ವಿಷಯ ದಲ್ಲಿ ವಿದ್ಯಾರ್ಥಿಗಳಾದ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಪ್ರತಿ ಮಕ್ಕಳು ತಮ್ಮ ಮನೆಗಳು ಮತ್ತು ಶಾಲೆಗಳಲ್ಲಿ ಒಂದಾದರೂ ಗಿಡ ನೆಟ್ಟು ಪೋಷಿಸಬೇಕೆಂದು ಕರೆ ನೀಡಿದರು.
ಡಿಡಿಪಿಐ ಸಿ.ಆರ್.ಪರಮೇಶ್ವ ರಪ್ಪ ಮಾತನಾಡಿ, ಶಾಲಾ ಮಕ್ಕಳ ಹಾಜರಾತಿ ಹಾಗೂ ಸ್ಥಳಾವಕಾಶ ಆಧರಿಸಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ೧೮೭೧೮ ಮತ್ತು ಪ್ರೌಢಶಾಲೆ ಮಕ್ಕಳಿಗೆ ೫೫೬೬ ಸೇರಿ ದಂತೆ ಜಿಯಲ್ಲಿ ಒಟ್ಟು ೨೪೨೮೪ ಸಸಿಗಳನ್ನು ಆಯ್ದ ಶಾಲೆಗಳಲ್ಲಿ ನೆಡಲಾಗುವುದು. ಮಕ್ಕಳು ಪರಿ ಸರದ ಕುರಿತು ಹೆಚ್ಚು ಜಗೃತ ರಾಗಬೇಕು. ಗಿಡಗಳನ್ನು ನೆಟ್ಟ ನಂತರ ಒಂದು ಗಿಡಕ್ಕೆ ವಾರಕ್ಕೆ ೧೦ ಲೀ ನೀರನ್ನು ಹಾಕಬೇಕು. ಗಿಡ ಗಳನ್ನು ನೆಟ್ಟ ನಂತರ ಉಸ್ತುವಾರಿ ಗಾಗಿ ಮಕ್ಕಳಿಗೆ ಗಿಡಗಳನ್ನು ಹಂಚಿಕೆ ಮಾಡಲಾಗುವುದು. ಸತತ ೩ ವರ್ಷಗಳ ಕಾಲ ಮಕ್ಕಳು ಗಿಡ ಗಳಿಗೆ ನೀರೆರೆದು ಪೋಷಿಸಬೇಕು. ಚೆನ್ನಾಗಿ ಗಿಡ ಬೆಳೆಸಿದ ಮಕ್ಕಳಿಗೆ ಶಾಲೆಯಲ್ಲಿ ಬಹುಮಾನ ನೀಡಲಾ ಗುವುದು ಎಂದರು.
ಬಿಇಓ ನಾಗರಾಜ್ ಪ್ರಾಸ್ತಾವಿ ಕವಾಗಿ ಮಾತನಾಡಿ, ಶಿಕ್ಷಣ ಇಲಾ ಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ ೫೦ ಲಕ್ಷ ಸಸಿಗಳನ್ನು ನೆಡುವ ಸರ್ಕಾರದ ವಿನೂತನ ಕಾರ್ಯಕ್ರಮ ಸಸ್ಯ ಶ್ಯಾಮಲ ಕ್ಕೆ ಇಂದು ರಾಜದ್ಯಂತ ಚಾಲನೆ ದೊರೆತಿದೆ. ಸೆ.೧೧ ರಿಂದ ೧೫ ರವರೆಗೆ ೫ ದಿನಗಳ ಕಾಲ ಈ ಕಾರ್ಯಕ್ರಮವು ಶಾಲೆಗಳು ಮತ್ತು ಪಿಯು ಕಾಲೇಜಿನಲ್ಲಿ ನಡೆಯಲಿದೆ ಎಂದರು.
ಗಾಡಿಕೊಪ್ಪದ ಶಾಲೆಯ ಆವ ರಣದಲ್ಲಿ ಜಿ.ಪಂ ಸಿಇಓ, ಅರಣ್ಯ ಇಲಾಖೆ ಆರೆಫ್‌ಓ, ಡಿಡಿಪಿಐ, ಬಿಇಓ ಸೇರಿದಂತೆ ಗಣ್ಯರು ವಿವಿಧ ಗಿಡಗಳನ್ನು ನೆಟ್ಟು ನೀರೆರದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಆರೆಫ್‌ಓ ಪ್ರದೀಪ್ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ್, ಶಾಲಾ ಮುಖ್ಯೋಪಾಧ್ಯಾಯಿನಿ ಭುವನೇ ಶ್ವರಿ, ಡಿಡಿಪಿಐ ಕಚೇರಿ ತಾಂತ್ರಿಕ ಸಹಾಯಕಿ ಲಕ್ಷ್ಮಿ ಹೆಚ್ ಸಿ, ಸಿಆರ್‍ಪಿ ಶೈಲಶ್ರೀ, ಶಿಕ್ಷಕರು, ವಿದ್ಯಾರ್ಥಿ ಗಳು ಹಾಜರಿದ್ದರು.