ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿ: ಡಿಸಿ

Share Below Link

ಶಿವಮೊಗ್ಗ : ಭಾರತೀಯ ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಿಸಿದ್ದು, ಮಾ.೨೯ರಿಂದಲೇ ಜಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತಿಯನ್ನು ಕಟುನಿಟ್ಟಿನಿಂದ ಜರಿಗೊಳಿಸಲಾಗಿದೆ ಎಂದು ಜಿಧಿಕಾರಿ ಡಾ.ಸೆಲ್ವಮಣಿ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಶಿವಮೊಗ್ಗ ಜಿಯಲ್ಲಿ ಒಟ್ಟು ೧೪,೫೮,೬೮೦ ಮತದಾರರು ನೋಂದಾಯಿಸಿಕೊಂಡಿzರೆ. ೭,೨೨,೦೮೦ ಪುರುಷ, ೭,೩೬,೫೭೪ ಮಹಿಳೆ, ೧೪,೭೭೩ ಪಿಡಬ್ಲ್ಯುಡಿ (ಪರ್ಸನ್ಸ್ ವಿತ್ ಡಿಸ್‌ಎಬಿಲಿಟಿ) ೨೬ ಇತರೆ ಮತದಾರರಿzರೆ ಎಂದು ವಿವರಿಸಿದರು.
ಚುನಾವಣಾ ವೇಳಾಪಟ್ಟಿ : ಏ.೧೩ ಚುನಾವಣಾ ಅಧಿಸೂಚನೆ ದಿನಾಂಕವಾಗಿದ್ದು, ಏ.೨೦ ಉಮೇದುವಾರಿಕೆ ಸಲ್ಲಿಕೆಗೆ ಕಡೆಯ ದಿನವಾಗಿರುತ್ತದೆ. ಏ. ೨೧ ಉಮೇದುವಾರಿಕೆ ಪರಿಶೀಲನೆ ದಿನವಾಗಿದ್ದು, ಏ. ೨೪ ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿರುತ್ತದೆ. ಮೇ ೧೦ರಂದು ಮತದಾನದ ನಡೆಯಲಿದ್ದು, ಮೇ ೧೩ರಂದು ಮತ ಎಣಿಕೆ ನಡೆಯಲಿದೆ. ಮೇ ೧೫ ಮತದಾನ ಮುಕ್ತಾಯ ದಿನ ಎಂದು ವಿವರಿಸಿದರು.
ಮತಗಟ್ಟೆ ವಿವರ : ಶಿವಮೊಗ್ಗ ಗ್ರಾಮಾಂತರ -೧೧೧ರಲ್ಲಿ ೨೪೭ ಮತಗಟ್ಟೆಗಳು, ಭದ್ರಾವತಿ-೧೧೨ ರಲ್ಲಿ ೨೫೩ ಮತಗಟ್ಟೆಗಳು, ಶಿವಮೊಗ್ಗ-೧೧೩ರಲ್ಲಿ ೨೮೨ ಮತಗಟ್ಟೆಗಳು, ತೀರ್ಥಹಳ್ಳಿ-೧೧೪ ರಲ್ಲಿ ೨೫೮, ಶಿಕಾರಿಪುರ-೧೧೫ ರಲ್ಲಿ ೨೩೨, ಸೊರಬ-೧೧೬ ರಲ್ಲಿ ೨೩೯, ಸಾಗರ-೧೧೭ ರಲ್ಲಿ ೨೬೪ ಒಟ್ಟು ೧೭೭೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.
ಶಿವಮೊಗ್ಗ ಗ್ರಾಮಾಂತರ -೧೧೧ಕ್ಕೆ ಕೊಟ್ರೇಶ್ ಹೆಚ್ (ಮೊ. ೯೬೧೧೦೭೯೪೧೬). ಭದ್ರಾವತಿ-೧೧೨ಗೆ ರವಿಚಂದ್ರ ನಾಯ್ಕ್ (ಮೊ. ೯೯೧೬೮೨೧೧೨೩) ಶಿವಮೊಗ್ಗ-೧೧೩ಕ್ಕೆ ಶಿವಾನಂದ (ಮೊ.೯೪೮೦೨೪೧೦೮೮), ತೀರ್ಥಹಳ್ಳಿ-೧೧೪ಗೆ ಮಲ್ಲಪ್ಪ ಕೆ ತೊದಲಬಾಗಿ (ಮೊ. ೯೪೮೦೮೭೬೦೧೦), ಶಿಕಾರಿಪುರ-೧೧೫ಕ್ಕೆ ನಾಗೇಶ್ ಎ ರಾಯ್ಕರ್, (ಮೊ. ೯೪೮೦೮೭೬೦೦೧), ಸೊರಬ-೧೧೬ಕ್ಕೆ ಪ್ರವೀಣ್ ಜೈನ್ (ಮೊ.೭೩೫೩೩೨೪೭೭೧), ಸಾಗರ-೧೧೭ಕ್ಕೆ ಪಲ್ಲವಿ ಸಾಥೇನಹಳ್ಳಿ (ಮೊ. ೯೪೮೦೭೬೦೬೦೨) ಇವರುಗಳನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ವಿವಿಧ ತಂಡಗಳ ರಚನೆ : ಒಟ್ಟು ಸೆಕ್ಟರ್ ಆಫೀಸರ್-೧೬೬, ಅಸಿಸ್ಟೆಂಟ್ ಎಕ್ಸ್‌ಪೆಂಡಿಚರ್ ಅಬ್ಸರ್ವರ್-೭, ಅಕೌಂಟಿಂಗ್ ಟೀಂ-೭, ಫ್ಲೈಯಿಂಗ್ ಸ್ಕ್ವಾಡ್-೪೪, ಸ್ಟಾಟಿಕ್ ಸರ್ವೆಲೆನ್ಸ್ ಟೀಂ-೩೬, ಎಂಸಿಸಿ-೭, ವಿಡಿಯೋ ಸರ್ವೆಲೆನ್ಸ್ ಟೀಂ-೪೪, ವಿಡಿಯೋ ವ್ಯೂವಿಂಗ್ ಟೀಂ-೭.
ನೋಡಲ್ ಅಧಿಕಾರಿಗಳು: ಕಾನೂನು ಮತ್ತು ಸುವ್ಯವಸ್ಥೆ, ವಿಎಂ ಮತ್ತು ಸುಭದ್ರತೆ ಯೋಜನೆಗೆ ನೋಡಲ್ ಅಧಿಕಾರಿಗಳಾಗಿ ಎಸ್‌ಪಿ ಜಿ.ಕೆ. ಮಿಥನ್ ಕುಮಾರ್ (ಮೊ.೯೪೮೦೮೦೩೩೦೧), ಸ್ವೀಪ್(ಎಸ್‌ವಿಇಇಪಿ) ಮತ್ತು ಎಂಸಿಸಿಗೆ ನೋಡಲ್ ಅಧಿಕಾರಿಗಳಾಗಿ ಜಿಪಂ ಸಿಇಓ ಎನ್.ಡಿ.ಪ್ರಕಾಶ್ (ಮೊ. ೯೪೮೦೮೭೬೦೦೦), ಸಾಮಗ್ರಿ ನಿರ್ವಹಣೆಗೆ ಸ್ಮಾರ್ಟ್‌ಸಿಟಿ ಎಂಡಿ ಚಿದಾನಂದ ವಟಾರೆ (ಮೊ. ೯೫೯೧೪೧೯೮೧೭), ತರಬೇತಿ ನಿರ್ವಹಣೆಗೆ ಸಿಮ್ಸ್ ಸಿಎಓ ಶಿವಕುಮಾರ್ ಕೆ.ಹೆಚ್ (ಮೊ. ೯೪೪೮೩೫೭೪೯೦) ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಸಿ.ಪೂರ್ಣಿಮ (ಮೊ. ೮೨೭೭೯೩೨೬೦೦), ವೆಚ್ಚ ಮೇಲ್ವಿಚಾರಣೆಗೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಜಿ.ಪ್ರಶಾಂತ ನಾಯಕ್ (ಮೊ. ೯೪೮೦೮೭೬೦೦೩), ಇವಿಎಂ ನಿರ್ವಹಣೆಗೆ ಭೂದಾಖಲೆಗಳ ಉಪನಿರ್ದೇಶಕ ನಾರಾಯಣಸ್ವಾಮಿ (ಮೊ.೯೪೪೮೮೯೫೮೩೬), ದೂರು ಪರಿಹಾರ ಮತ್ತು ವೋಟರ್ ಹೆಲ್ಪ್ ಲೈನ್‌ಗೆ ಆಹಾರ ಇಲಾಖೆ ಉಪನಿರ್ದೇಶಕ ಅವಿನ್ ಆರ್. (ಮೊ. ೯೮೮೬೯೦೭೪೫೫), ಮ್ಯಾನ್‌ಪವರ್ ಮ್ಯಾನೇಜ್‌ಮೆಂಟ್ ನೋಡಲ್ ಅಧಿಕಾರಿಗಳಾಗಿ ಜಿ ಸಾಂಖ್ಯಿಕ ಅಧಿಕಾರಿ ಮಹೇಶ್ವರ್ (ಮೊ.೯೪೮೫೯೬೩೧೬೫), ಜಿಪಂ ಸಹಾಯಕ ಯೋಜನಾಧಿಕಾರಿ ಎನ್.ತಾರಾ (ಮೊ. ೯೪೮೦೮೭೬೦೦೫), ಸಾರಿಗೆ ನಿರ್ವಹಣೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಗಂಗಾಧರ ಜಿ.ಪಿ (ಮೊ. ೯೪೪೮೬೪೦೧೪), ಗಣಕೀಕರಣ, ಸೈಬರ್ ಭದ್ರತೆ ಐಟಿಗೆ ಡಿಸ್ಟ್ರಿಕ್ಟ್ ಇನ್‌ಫರ್ಮಾಟಿಕ್ಸ್ ಅಧಿಕಾರಿ ವೆಂಕಟೇಶ್ ಬೆಣಕಟ್ಟಿ (ಮೊ.೯೨೪೨೪೧೩೦೫೦), ಬ್ಯಾಲಟ್ ಪೇಪರ್, ಪೋಸ್ಟಲ್ ಬ್ಯಾಲಟ್, ಇಟಿಪಿಬಿಎಸ್‌ಗೆ ಡಿಯುಡಿಸಿ ಅಧಿಕಾರಿ ಕರಿಭೀಮಣ್ಣನವರ್ (ಮೊ. ೯೯೮೦೧೨೫೪೪೯), ಮೀಡಿಯಾ ನೋಡಲ್ ಅಧಿಕಾರಿಗಳಾಗಿ ಕೃಷಿ ಇಲಾಖೆ ಉಪನಿರ್ದೇಶಕ ಡಿ.ಟಿ.ಮಂಜುನಾಥ್ (ಮೊ.೮೨೭೭೯೩೨೬೦೧), ಕಮ್ಯುನಿಕೇಷನ್ ಪ್ಲಾನಿಂಗ್‌ಗೆ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಜಿ.ಶ್ರೀನಿವಾಸ (ಮೊ. ೯೪೮೦೮೪೩೦೪೪), ಎಲೆಕ್ಟೊರೊಲ್ ರೋಲ್ ನೋಡಲ್ ಅಧಿಕಾರಿಗಳಾಗಿ ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ್, (ಮೊ.೯೯೧೬ ೮೨೧೧೨೩), ಅಬ್ಸರ್ವರ್ಸ್ ನೋಡಲ್ ಅಧಿಕಾರಿಗಳಾಗಿ ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಸಂಪತ್ ಕುಮಾರ್ ಪಿಂಗಳೆ ಎಂ, (ಮೊ.೯೯೮೬೮೪೩೬೦೧) ಇವರುಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು.
ಕಂಟ್ರೋಲ್ ರೂಂ ವಿವರ : ಜಿಯಲ್ಲಿ ೧೯೫೦ ಸಹಾಯ ವಾಣಿಯೊಂದಿಗೆ ಶಿವಮೊಗ್ಗ ಗ್ರಾಮಾಂತರ -೧೧೧ ಫೋ: ೦೮೧೮೨ -೨೦೦೫೦೮. ಭದ್ರಾವತಿ -೧೧೨ ೦೮೨೮೨-೨೬೩೪೬೬, ಶಿವಮೊಗ್ಗ-೧೧೩ ೦೮೧೮೨-೨೭೭೯೦೬ ತೀರ್ಥಹಳ್ಳಿ-೧೧೪ ಫೋ: ೦೮೧೮೧-೨೦೦೯೨೫. ಶಿಕಾರಿಪುರ-೧೧೫ ಫೋ: ೦೮೧೮೭-೨೨೨೨೩೯. ಸೊರಬ-೧೧೬ ಫೋ: ೦೮೧೮೪ -೨೭೨೨೪೧., ಸಾಗರ-೧೧೭ ಫೋ: ೦೮೧೮೩-೨೨೬೬೦೧.
ಮಸ್ಟರಿಂಗ್, ಡಿಮಸ್ಟರಿಂಗ್ ಮತ್ತು ಮತ ಎಣಿಕೆ ಸ್ಥಳ : ಶಿವಮೊಗ್ಗ ಗ್ರಾಮಾಂತರ -೧೧೧ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಹೆಚ್ ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಶಿವಮೊಗ್ಗ. ಭದ್ರಾವತಿ-೧೧೨ ಸಂಚಿ ಹೊನ್ನಮ್ಮ ಬಾಲಿಕ ಪಪೂ ಕಾಲೇಜು ಭದ್ರಾವತಿ. ಶಿವಮೊಗ್ಗ-೧೧೩ ಸಹ್ಯಾದ್ರಿ ವಾಣಿಜ್ಯ ಕಾಲೇಜ್ ಶಿವಮೊಗ್ಗ. ತೀರ್ಥಹಳ್ಳಿ-೧೧೪ ಯುಆರ್ ಅನಂತಮೂರ್ತಿ ಕಾಲೇಜು ತೀರ್ಥಹಳ್ಳಿ. ಶಿಕಾರಿಪುರ-೧೧೫ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ. ಸೊರಬ-೧೧೬ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ. ಸಾಗರ -೧೧೭ ಸರ್ಕಾರಿ ಪದವಿಪೂರ್ವ ಕಾಲೇಜು ಸಾಗರ. ಮತ ಎಣಿಕೆ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ.
ಜಿಯಲ್ಲಿ ೨೦೨೩ ರ ವಿಧಾನ ಸಭಾ ಚುನಾವಣೆಯನ್ನು ವಿದ್ಯುನ್ಮಾನ ಮತಯಂತ್ರ ಬಳಸಿ ನಿರ್ವಹಿಸಲಾಗುತ್ತಿದ್ದು, ಜಿಯಲ್ಲಿ ೩೩೫೦ ಬ್ಯಾಲೆಟ್ ಯೂನಿಟ್‌ಗಳು, ೨೩೫೨ ಕಂಟ್ರೋಲ್ ಯುನಿಟ್ ಹಾಗೂ ೨೪೧೭ ವಿವಿ ಪ್ಯಾಟ್ ಲಭ್ಯವಿರುತ್ತದೆ. ಜಿಯಲ್ಲಿ ಚುನಾವಣಾ ದಿನದಂದು ಚುನಾವಣಾ ಕಾರ್ಯ ನಿರ್ವಹಿಸಲು ೮೫೨೦ ಅಧಿಕಾರಿ/ಸಿಬ್ಬಂದಿಗಳ ಅವಶ್ಯಕತೆ ಇದ್ದು ಈಗಾಗಲೇ ೧೦,೭೦೦ ಸಿಬ್ಬಂದಿಗಳ ಮಾಹಿತಿ ಸಂಗ್ರಹಿಸಲಾಗಿದೆ.
ಉಮೇದುವಾರಿಕೆ ಸಲ್ಲಿಕೆಯ ಅವಧಿಯವರೆಗೆ ಅಂದರೆ ಏ. ೨೦ ರವರೆಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು ಹಾಗೂ ನಮೂನೆ ೮ರಲ್ಲಿ ತಿದ್ದುಪಡಿಗೆ ಅವಕಾಶವಿರುತ್ತದೆ.
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಮಾತನಾಡಿ, ಜಿಯಲ್ಲಿ ೩೬ ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದು, ೭ ಚೆಕ್‌ಪೋಸ್ಟ್ ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಚುನಾವಣೆಗೆ ೬ ಸಿಆರ್‌ಪಿಎಫ್ ತಂಡಗಳು ಬರಲಿವೆ. ಸ್ಟ್ರಾಂಗ್ ರೂಂ, ಮತ ಎಣಿಕೆ ಕೇಂದ್ರಗಳಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಳೆದ ತಿಂಗಳಿಂದ ಜಿಯಲ್ಲಿ ೫೫ ಜನರಿಗೆ ಗಡೀಪಾರು ಆದೇಶ ಮತ್ತು ಕಳೆದ ೫-೬ ತಿಂಗಳಿಂದ ೬ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚುನಾವಣೆಗೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ವಹಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಧಿಕಾರಿ ಎಸ್.ಎಸ್. ಬಿರಾದರ್ ಉಪಸ್ಥಿತರಿದ್ದರು.