ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಹಿಂದೂ ದೇವಳಗಳ ಕುರಿತು ದ್ವೇಷ ಹಬ್ಬಿಸಿ ಭಯೋತ್ಪಾದನೆಗೆ ಪ್ರೋತ್ಸಾಹ: ಕ್ರಮಕ್ಕೆ ಆಗ್ರಹ

Share Below Link

ಹಿಂದೂ ದೇವಳಗಳ ಕುರಿತು ದ್ವೇಷ ಹಬ್ಬಿಸಿ ಭಯೋತ್ಪಾದನೆಗೆ ಪ್ರೋತ್ಸಾಹ: ಕ್ರಮಕ್ಕೆ ಆಗ್ರಹ
ಬೆಂಗಳೂರು : ಹಿಂದೂ ದೇವಸ್ಥಾನದಲ್ಲಿ ಕೆಲಸ ಮಾಡಲು ಹೋಗುವುದು ಎಲ್ಲಕ್ಕಿಂತ ದೊಡ್ಡ ಮಹಾ ಪಾಪವಾಗಿದೆ ಹಾಗೂ ದೇವಸ್ಥಾನ ಅಥವಾ ಚರ್ಚ್‌ಗಳಿಗೆ ಹೋಗುವುದಕ್ಕಿಂತ ಸಾವಿರಾರು ಜನರನ್ನು ಕೊಲ್ಲುವ ಶಸ್ತ್ರಗಳ ತಯಾರಿಸುವ ಕಾರ್ಖಾನೆಗೆ ಹೋಗುವುದು ಹೆಚ್ಚು ಉತ್ತಮ. ದೇವಸ್ಥಾನ ಅಥವಾ ಚರ್ಚಗಳಲ್ಲಿ ಶಿರ್ಕ (ಮಹಾಪಾಪ) ಮಾಡಲಾ ಗುತ್ತದೆ. ಶಿರ್ಕ ಇದು ಇಸ್ಲಾಮಿನ ಪ್ರಕಾರ ಮಹಾ ಪಾಪವಾಗಿದೆ. ಅಹ ಸ್ಪಷ್ಟವಾಗಿ ಹೇಳಿzನೆ, ನಾನು ಯಾರನ್ನಾದರೂ ಕ್ಷಮಿಸ ಬಹುದು, ಆದರೆ ಶಿರ್ಕ ಮಾಡುವ ವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಈ ರೀತಿ ಅನೇಕ ಆಕ್ಷೇಪಾರ್ಹ ಹೇಳಿಕೆಗಳನ್ನು, ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಡಾ. ಜಾಕೀರ್ ನಾಯಕ್ ಎಂಬುವರು ಹುಡಾ ಟಿ.ವಿ. ಹೆಸರಿನ ಯುಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಹೇಳಿzರೆ.
ಈ ರೀತಿಯ ಹೇಳಿಕೆಗಳಿಂದ ಕೋಟ್ಯಾಂತರ ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ಹಿಂದೂ ದೇವಸ್ಥಾನಗಳ ಬಗ್ಗೆ ಸಮಾಜದಲ್ಲಿ ಜಾತೀಯ ದ್ವೇಷ, ತಿರಸ್ಕಾರ ಮತ್ತು ಶತ್ರುತ್ವದ ಭಾವನೆ ಮೂಡಿಸಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ದುಷ್ಕತ್ಯ ಮಾಡಿzರೆ ಎಂದು ಆರೋಪಿಸಲಾಗಿದೆ.
ಕೇಂದ್ರ ಸರಕಾರದಿಂದ ಭಯೋತ್ಪಾದಕ ಸಂಘಟನೆ ಎಂದು ನಿಷೇಧ ಹೇರಿದ ನಂತರವೂ ಜಾಕೀರ್ ನಾಯಕ್ ಮತ್ತು ಇಸ್ಲಾಮಿಕ ರಿಸರ್ಚ್ ಫೌಂಡೇಶನ್‌ನ ಫೇಸ್ಬುಕ್, ಟ್ವಿಟರ್, ಇನ್ಟಾಗ್ರಾಂ ಮುಂತಾದ ಎ ಸಾಮಾಜಿಕ ಜಲತಾಣದಲ್ಲಿನ ಅಕೌಂಟ್ ಮುಂದುವರೆದಿವೆ. ಅವುಗಳನ್ನು ತಕ್ಷಣ ನಿಲ್ಲಿಸಬೇಕು ಎಂದೂ ಈ ಮನವಿಯಲ್ಲಿ ಆಗ್ರಹಿಸಲಾಗಿದೆ.
ವಿಶ್ವ ಸಂಸ್ಥೆಯಲ್ಲಿ ಜಾಕೀರ್ ನಾಯಕ್‌ರನ್ನು ಅಂತರರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿ ಸಲು ಹಾಗೂ ಅವರನ್ನು ಭಾರತಕ್ಕೆ ಒಪ್ಪಿಸುವುದಕ್ಕಾಗಿ ಮಲೇಶಿಯಾ ಸರಕಾರದ ಮೇಲೆ ಕೇಂದ್ರ ಸರಕಾರ ಒತ್ತಡ ಹೇರ ಬೇಕೆಂದು ಹಿಂದೂ ಜನಜಗೃತಿ ಸಮಿತಿಯಿಂದ ಕೇಂದ್ರ ಗೃಹ ಸಚಿವರಿಗೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಹಿಂದೂ ಜನಜಗೃತಿ ಸಮಿತಿಯಿಂದ ಬೆಂಗಳೂರಿನ ಅಪರ ಜಿಧಿಕಾರಿ ಟಿ. ಎನ್. ಕಷ್ಣಮೂರ್ತಿ ಹಾಗೂ ಮುಂಬಯಿ ಜಿಧಿಕಾರಿಗಳ ಕಾರ್ಯಾಲಯದ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಹಿಂದೂ ಜನಜಗೃತಿ ಸಮಿತಿಯ ನೀಲೇಶ್, ಸತೀಶ ಸೋನಾರ, ರವೀಂದ್ರ ದಾಸಾರಿ, ಸಂದೀಪ್ ತುಳಸಿಕರ, ಸುಶೀಲ ಭುಜಬಳ, ವಿಲಾಸ ನಿಕಮ ಮತ್ತು ಮನೀಷ ಸೈನಿ ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif