ಕೈಗಾರಿಕಾ ಅಭಿವೃದ್ದಿ ನಿಗಮದಿಂದ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ:ಗಾಯತ್ರಿದೇವಿ
ಶಿಕಾರಿಪುರ : ಕರ್ನಾಟಕ ರಾಜ್ಯ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ದಿ ನಿಗಮ ರಾಜ್ಯದಲ್ಲಿ ಬಹು ದೊಡ್ಡ ಕೈಗಾರಿ ಕೆಗಳ ಸ್ಥಾಪನೆಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡುವ ಜತೆಗೆ ಹಲವು ಸಾಫ್ಟ್‌ವೇರ್ ಕಂಪನಿಗಳನ್ನು ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟದಲ್ಲಿ ಪರಿಚಯಿಸಿದ ಹಿರಿಮೆಯನ್ನು ಹೊಂದಿದೆ ಎಂದು ನಿಗಮದ ನಿರ್ದೇಶಕಿ ಗಾಯತ್ರಿದೇವಿ ಮಲ್ಲಪ್ಪ ತಿಳಿಸಿದರು.
ಬುಧವಾರ ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,೧೯೬೪ ರಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿ ವೃದ್ದಿ ನಿಗಮ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು,ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ಅನುದಾನ ನೀಡುವ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯ ಬಹು ಮಹತ್ವದ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ ಅವರು ಜಗತಿಕ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಇನೋಸಿಸ್ ಸಂಸ್ಥೆಗೆ ಆರಂಭದಲ್ಲಿ ನಿಗಮ ಸಾಲ ನೀಡಿದ್ದು ನಿಗಮದ ಸಹಕಾರವನ್ನು ಇನೋಸಿಸ್ ಸಂಸ್ಥಾಪಕರಾದ ಪದ್ಮಶ್ರೀ ಪುರಸ್ಕತ ಸುಧಾ ನಾರಾ ಯಣಮೂರ್ತಿ ಎಲ್ಲ ವಿಶೇಷ ಸಂದರ್ಭದಲ್ಲಿ ಸ್ಮರಿಸುತ್ತಾರೆ ಎಂದು ತಿಳಿಸಿದರು.
ರಾಜ್ಯದ ಪ್ರಸಿದ್ದ ಜಿಂದಾಲ್ ಸ್ಟೀಲ್,ಎಂಎಸ್‌ಐಎಲ್,ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಶೇರು ಹೊಂದಿರುವ ನಿಗಮ ಬೆಂಗಳೂ ರಿನಲ್ಲಿ ಖನಿಜ ಭವನ,ಐಟಿಬಿಟಿ ಪಾರ್ಕನ ಮಾಲಿಕತ್ವ ಹೊಂದಿದ್ದು ಮಾಸಿಕ ರೂ ೪೭.೫ ಕೋಟಿ ಬಾಡಿಗೆ ಮೂಲಕ ಆದಾಯ ಗಳಿ ಸುತ್ತಿದೆ ಎಂದು ತಿಳಿಸಿದ ಅವರು ರಾಜ್ಯದ ಹಲವು ವಿಮಾನ ನಿಲ್ದಾಣದ ಮೂಲಸೌಕರ್ಯ ಅಭಿವೃದ್ದಿ ಹಾಗೂ ನಿರ್ವಹಣೆಗೆ ಕೇಂದ್ರದಿಂದ ಮಂಜೂರಾತಿ ದೊರೆ ತಿದ್ದು ಈ ದಿಸೆಯಲ್ಲಿ ಬೀದರ್, ವಿಜಯಪುರ, ಗುಲ್ಬರ್ಗ ವಿಮಾನ ನಿಲ್ದಾಣಕ್ಕೆ ವಾರ್ಷಿಕ ರೂ.೨೦ ಕೋಟಿ ವೆಚ್ಚದಲ್ಲಿ ನಿಗಮಕ್ಕೆ ವಹಿಸಲಾಗಿದೆ ಹಾಸನ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿದ್ದು ಶಿವಮೊಗ್ಗದ ವಿಮಾನ ನಿಲ್ದಾಣ ಶೀಘ್ರದಲ್ಲಿಯೇ ನಿಗಮಕ್ಕೆ ವಹಿಸು ವ ಸಾಧತೆ ಇದೆ ಎಂದರು.
ನಿಗಮದ ವಾರ್ಷಿಕ ಆದಾಯದಲ್ಲಿನ ಶೇ.೨ ಸಿಎಸ್‌ಆರ್ ಅನುದಾನದಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಅಗತ್ಯ ಉಪಕರಣಗಳ ಖರೀದಿ ಗಾಗಿ ರೂ.೧೦ ಲಕ್ಷ ನೀಡಲಾಗಿದ್ದು ಇದರೊಂದಿಗೆ ಕರೋನಾ ಸಂದರ್ಬದಲ್ಲಿ ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಬೀದರ್ ಸಾರ್ವ ಜನಿಕ ಆಸ್ಪತ್ರೆಗೆ ರೂ.೧ ಕೋಟಿ, ಬೈಂದೂರು, ಮೈಸೂರು ಜೆಎಸ್ ಎಸ್ ಆಸ್ಪತ್ರೆ,ರಾಣೆಬೆನ್ನೂರು, ಬೀದರ್,ಹೊಸಪೇಟೆ ಆಸ್ಪತ್ರೆಗೆ ಆಂಬ್ಯುಲೆನ್ಸ್ ಖರೀದಿಗೆ ರೂ.೬೧ ಲಕ್ಷ ನೀಡಲಾಗಿದೆ ಎಂದು ತಿಳಿಸಿದ ಅವರು ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.೨.೫ ಕೋಟಿ ನೀಡಲಾಗಿದೆ ಎಂದು ತಿಳಿಸಿದರು.
ಇಂತಹ ಪ್ರತಿಷ್ಠಿತ ನಿಗಮದಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಟ್ಟ ನಿಕಟಪೂರ್ವ ಸಿಎಂ ಯಡಿ ಯೂರಪ್ಪ,ಸಂಸದ ರಾಘವೇಂದ್ರ ಸೂಕ್ತ ಮಾರ್ಗದರ್ಶನ ನೀಡಿದ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಸಹಿತ ಬಿಜೆಪಿ ಮುಖಂಡರಿಗೆ ಧನ್ಯ ವಾದ ಸಲ್ಲಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಕೆಎಸ್‌ಡಿಎಲ್ ನಿರ್ದೇಶಕಿ ನಿವೇದಿತಾ ರಾಜು ಉಪಸ್ಥಿತರಿದ್ದರು.