ಶಿವಮೊಗ್ಗ ಸೇರಿದಂತೆ ರಾಜ್ಯದ ಏಳು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಿ…
ಶಿವಮೊಗ್ಗ : ರಾಜ್ಯ ಸರ್ಕಾರ ಕೂಡಲೇ ಶಿವಮೊಗ್ಗ ಸೇರಿದಂತೆ ರಾಜ್ಯದ ೭ ಮಹಾನಗರ ಪಾಲಿಕೆಗಳಿಗೆ ಚುನಾ ವಣೆ ನಡೆಸಲು ಮುಂದಾಗಬೇಕು ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಇತ್ತೀಚೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ಎಚ್ಚರಿಕೆ ನೀಡಿzರೆ. ಚುನಾಯಿತ ಪ್ರತಿನಿಧಿಗಳು ಇಲ್ಲದೆ ಶಿವಮೊಗ್ಗ ನಗರ ಎಷ್ಟರ ಮಟ್ಟಿಗೆ ಕಸದ ತೊಟ್ಟಿ ಯಾಗಿದೆ ಎಂದು ಹೇಳಿzರೆ. ಈಗಲಾದರೂ ಸರ್ಕಾರ ಎಚ್ಚೆತು ಕೊಳ್ಳಬೇಕು. ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸುವುದು ಇಷ್ಟವಿಲ್ಲ ಎಂದು ತೋರುತ್ತದೆ. ಕೂಡಲೇ ಚುನಾವಣೆ ನಡೆಸಲು ಮುಂದಾಗಬೇಕು ಎಂದರು.

ಈಗಾಗಲೇ ಚುನಾವಣಾಧಿಕಾರಿಗಳು ಮಹಾನಗರ ಪಾಲಿಕೆಗಳ ಚುನಾವಣೆಗೆ ಸಿದ್ಧತೆ ನಡೆಸಿP ಳ್ಳಬೇಕು ಎಂದು ಹೇಳಿದೆ. ಈ ಬಗ್ಗೆ ನ್ಯಾಯಾಲಯವು ಕೂಡ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದೆ. ಆದರೂ ಕೂಡ ರಾಜ್ಯಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯ ಸರ್ಕಾರ ಮೀಸಲಾತಿ ಘೋಷಿಸಿದರೆ ಸರಿ. ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಚಿವ ರಾಜಣ್ಣನ ನೀಚತನ: ಕೆಂಗಲ್ ಹನುಮಂತಯ್ಯ ಅವರು ವಿಧಾನ ಸೌಧವನ್ನು ಕಟ್ಟಿದ್ದಂತವರು. ವಿಧಾನ ಸೌಧವನ್ನೇ ಇಷ್ಟು ಕೀಳು ಮಟ್ಟದ ರಾಜಕೀಯ ಚರ್ಚೆ ವಿಧಾನ ಸೌಧದಲ್ಲಿ ಆಗಿಲ್ಲ. ಒಬ್ಬ ಮಂತ್ರಿಯೂ ಆಗಿರುವಂತಹ ರಾಜಣ್ಣ ಅವರು ಬಳಸಿದ ಪದ ಗಳನ್ನು ನೋಡಿದರೆ ಅಸಹ್ಯ ವಾಗುತ್ತದೆ. ರಾಜಣ್ಣನ ನೀಚತನ ದಿಂದ ಇಂದು ಟಿವಿ ನೋಡುವುದೇ ಕಷ್ಟವಾಗಿದೆ. ಕರ್ನಾಟಕದಲ್ಲಿ ಇಂತಹ ಮಂತ್ರಿಗಳಿzರೆಯೇ ಎಂದು ನಾಚಿಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭಾಧ್ಯಕ್ಷ ಖಾದರ್ ಅವರು ೧೮ ಜನ ಶಾಸಕರನ್ನು ಹೊರ ಹಾಕುವುದರ ಮೂಲಕ ತಮ್ಮ ಖದರ್ ತೋರಿಸಿzರೆ. ವಿಧಾನ ಸೌಧ ಪ್ರಜ ಪ್ರಭುತ್ವದ ದೇವಾಲಯ. ಅಶ್ಲೀಲ ಪದಗಳನ್ನು ಬಳಸಿದ ಮಂತ್ರಿಯನ್ನು ಹೊರ ಹಾಕದೆ ಪ್ರಜ ಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿzರೆ. ಮುಖ್ಯಮಂತ್ರಿಯಾಗಿ ಡಿಕೆ ಶಿವ ಕುಮಾರ್ ಬರದೇ ಸಿದ್ದರಾಮಯ್ಯ ನವರೇ ಉಳಿಯಬೇಕು ಎನ್ನುವ ಉದ್ದೇಶದಿಂದ ಈ ರೀತಿ ಮಾಡಿ zರೆ. ಪ್ರಜ ಪ್ರಭುತ್ವ ದೇವಾಲಯ ವನ್ನು ಕಳಂಕಿತ ಮಾಡಿzರೆ. ಇದಕ್ಕೆ ಮುಖ್ಯ ಮಂತ್ರಿಗಳು ಕ್ಷಮೆ ಕೇಳಬೇಕು ಎಂದರು.
ಧರ್ಮಾಧರಿತ ಮೀಸಲಾತಿ ತಪ್ಪು : ಗುತ್ತಿಗೆ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ.೪ ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿರುವುದು ಸಂವಿಧಾನ ವಿರೋಧಿಯಾಗಿದೆ. ಇದನ್ನು ತುಂಬಾ ಸ್ಪಷ್ಟವಾಗಿ ಸಂವಿಧಾನ ಹೇಳಿದೆ. ಇದು ಅಂಬೇಡ್ಕರ್ ಅವರಿಗೂ ಸಂವಿಧಾನಕ್ಕೂ ಮಾಡಿರುವ ದ್ರೋಹವಾಗಿದೆ ಎಂದರು.
ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕೂಡ ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಸಂವಿಧಾನವನ್ನು ತಿದ್ದುಪಡಿ ಮಾಡಿಯಾದರೂ ಮುಸ್ಲಿಂರಿಗೆ ಮೀಸಲಾತಿ ನೀಡುತ್ತೇವೆ ಎಂಬ ಗರ್ವದ ಮಾತುಗಳನ್ನು ಅವರು ಆಡಿzರೆ. ಆದರೆ ಈಗ ನಾನು ಆ ಮಾತು ಹೇಳೇ ಇಲ್ಲ ಎನ್ನುತ್ತಾರೆ. ದೇಶದ ಜನ ಕುರುಡರು ಅಥವಾ ಇವರು ಕುರುಡರು ಗೊತ್ತಾಗುತ್ತಿಲ್ಲ ಎಂದರು.
ಪ್ರಮುಖರಾದ ಈ. ವಿಶ್ವಾಸ್, ಮೋಹನ್ ಜಧವ್, ಚನ್ನಬಸಪ್ಪ, ರಾಜು, ಶಿವು, ಕುಬೇರಪ್ಪ, ದೊರೆ, ಪ್ರಶಾಂತ್, ಬೇಳೂರು ಗೋವಿಂದಪ್ಪ, ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


