ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಎಲೆಕ್ಷನ್: ಶಿವಮೊಗ್ಗ ಕ್ಷೇತ್ರದಲ್ಲಿ ನೋಟಾ ಚಲಾವಣೆಗೆ ನಿರ್ಧಾರ…

Share Below Link

ಶಿವಮೊಗ್ಗ: ಆಲ್ಕೊಳದ ಮಂಗಳ ಮಂದಿರ ಹತ್ತಿರದ ಗಜನನ ಲೇಔಟ್ ಮತ್ತು ಸುeನ ಲೇಔಟ್‌ನಲ್ಲಿ ಕುಡಿಯುವ ನೀರಿನ ತೊಂದರೆ ಇದ್ದು, ಸಮಸ್ಯೆಯನ್ನು ಬಗೆಹರಿಸದಿದ್ದರೆ ಅಲ್ಲಿನ ಮತದಾರರು ಈ ಬಾರಿಯ ಚುನಾವಣೆಯಲ್ಲಿ ನೋಟಾ ಹಕ್ಕನ್ನು ಚಲಾಯಿಸಲು ನಿರ್ಧರಿಸಲಾಗಿದೆ ಎಂದು ಅಲ್ಲಿನ ನಾಗರಿಕ ಸಮಿತಿ ಸುದ್ದಿಗಷ್ಟಿಯಲ್ಲಿ ಎಚ್ಚರಿಸಿದೆ.
ಈ ಎರಡೂ ಬಡಾವಣೆಗಳು ನಿರ್ಮಾಣವಾಗಿ ೧೫ ವರ್ಷಗಳು ಕಳೆದಿವೆ. ಕಳೆದ ಏಳು ವರ್ಷಗಳಿಂದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದೆ. ಆದರೂ ಕೂಡ ಇಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲ. ಮುಖ್ಯವಾಗಿ ಕುಡಿಯಲು ನೀರಿಲ್ಲ ಈ ಮೊದಲು ಬೋರ್ ನೀರನ್ನು ಬಳಸುತ್ತಿzವು.ಆದರೆ ಅದೂ ಈಗ ಕುಡಿಯಲು ಯೋಗ್ಯವಾಗಿಲ್ಲ. ಬಡಾವಣೆಗೆ ಪಾಲಿಕೆ ವ್ಯಾಪ್ತಿಯಿಂದ ನೀರಿನ ಸಂಪರ್ಕದ ನಳಗಳನ್ನು ಜೋಡಿಸಲಾಗಿದೆ. ಒಮ್ಮೆ ನೀರು ಕೂಡ ಹರಿಸಲಾಗಿತ್ತು. ಆದರೆ ಅದೇ ಕೊನೆ ಮತ್ತೆ ಕೊಳಾಯಿ ಮೂಲಕ ನೀರು ಬಿಟ್ಟಿಲ್ಲ. ಇದರಿಂದ ಆ ಭಾಗದ ಜನರಿಗೆ ತುಂಬಾ ತೊಂದರೆ ಯಾಗಿದೆ ಎಂದು ಬಡಾವಣೆಯ ನಾಗರೀಕರು ಆರೋಪಿಸಿದರು.
ಇದಕ್ಕೆ ಸಂಬಂಧಿಸಿದಂತೆ ಜಿಧಿಕಾರಿಗಳಿಗೆ, ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಮತ್ತು ಸಮಯಕ್ಕೆ ಸರಿಯಾಗಿ ಇಲ್ಲಿನ ನಿವಾಸಿಗಳು ಸಂಬಂಧಪಟ್ಟ ಎ ತೆರಿಗೆಗಳನ್ನು ಪಾವತಿಸಿದ್ದೇವೆ. ಇಲ್ಲಿ ವಾಸವಾಗಿರುವವರು ಬಹುತೇಕ ಎಲ್ಲರೂ ನಿವೃತ್ತ ಅಧಿಕಾರಿಗಳೇ ಆಗಿzರೆ. ಸುಮಾರು ೨೦೦ ಕುಟುಂಬಗಳು ಇಲ್ಲಿ ವಾಸವಾಗಿವೆ. ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ತೊಂದರೆಯಾಗಿದೆ ಜೊತೆಗೆ ರಸ್ತೆ ಡಾಂಬರೀಕರಣ, ಬೀದಿದೀಪ ನಿರ್ವಹಣೆ ಇಲ್ಲ. ರಾತ್ರಿ ಸಮಯ ದಲ್ಲಿ ಓಡಾಡಲು ಭಯವಾಗುತ್ತದೆ. ಆದ್ದರಿಂದ ಕುಡಿಯುವ ನೀರು ಸೇರಿದಂತೆ ಈ ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಇಲ್ಲದಿದ್ದರೆ ಚುನಾವಣೆಯಲ್ಲಿ ನೋಟಾದ ಹಕ್ಕನ್ನು ಚಲಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಡಾವಣೆ ನಿವಾಸಿಗಳಾದ ರಾಘವೇಂದ್ರ , ಶಶಿಧರ್, ದೇವರಾಜ್, ನಾಗಪ್ಪ, ಶಶಿಧರ್ ರಾನಡೆ ಇನ್ನಿತರರು ಉಪಸ್ಥಿತರಿದ್ದರು.