ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ಹೂವು ನೀಡಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ ಶಿಕ್ಷಣ ಸಚಿವ ಮಧುಬಂಗಾರಪ್ಪ…

Share Below Link

ಬೆಂಗಳೂರು : ರಾಜದ್ಯಂತ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾದ ಎಸ್‌ಎಸ್‌ಎಲ್‌ಸಿ ನಂತರ ವೃತ್ತಿಪರ ಕಲಿಕೆಗೆ ಈ ಪರೀಕ್ಷೆ ಹೆzರಿಯಾಗಿದೆ. ರಾಜ್ಯದ ಪರೀಕ್ಷಾ ಕೇಂದ್ರದ ಮುಂದೆ ಬೆಳಿಗ್ಗೆ ೮ ರಿಂದಲೇ ಜಮಾಯಿಸಿದ ವಿದ್ಯಾರ್ಥಿಗಳು ಸಹಪಾಠಿ ಗಳೊಂದಿಗೆ ಅಂತಿಮ ಮನನದಲ್ಲಿ ತೊಡಗಿದ್ದರು.
ಮೊದಲ ಬಾರಿಗೆ ಸಾರ್ವತ್ರಿಕ ಪರೀಕ್ಷೆಯನ್ನು ಬರೆಯುತ್ತಿರುವ ಹಿನ್ನೆಲೆಯಲ್ಲಿ ಮೊದಲ ದಿನ ಸ್ವಲ್ಪ ಮಟ್ಟಿನ ಆತಂಕ ಇದ್ದರೂ ಕೂಡ ಪರೀಕ್ಷಾ ಕೇಂದ್ರದ ಬಳಿ ಗುಲಾಬಿ ಹೂಗಳನ್ನು ನೀಡಿ ಸಿಹಿ ಹಂಚಿ ಅವರಲ್ಲಿ ಉತ್ಸಾಹ ಮೂಡಿಸಲಾಯಿತು. ಪರೀಕ್ಷೆ ಭಯ ಬಿಟ್ಟು ಚೆನ್ನಾಗಿ ಉತ್ತರ ಬರೆಯಿರಿ ಎಂದು ಅವರಿಗೆ ಪ್ರೋತ್ಸಾಹ ನೀಡುತ್ತಿರುವ ದೃಶ್ಯ ಹಲವೆಡೆ ಕಂಡು ಬಂತು.
ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಬೆಳಿಗ್ಗೆಯೇ ಹಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ರಾಜ್ಯದ ೧೫,೮೮೧ ಪರೀಕ್ಷಾ ಕೇಂದ್ರಗಳಲ್ಲಿ ಇಂದು ೮ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಇಂದು ಪ್ರಥಮ ಭಾಷೆ ಪರೀಕ್ಷೆಯನ್ನು ಬರೆದಿzರೆ.
ಎಲ್ಲೂ ಕೂಡ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಿಲ್ಲ. ಪ್ರಶ್ನೆ ಪತ್ರಿಕೆಗಳನ್ನು ಪೊಲೀಸ್ ಭದ್ರತೆಗಳೊಂದಿಗೆ ಆಯಾ ಕೇಂದ್ರಗಳಿಗೆ ಹಂಚಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್, ಸಿಸಿ ಟಿವಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರeನಗಳನ್ನು ಬಳಸಿಕೊಂಡು ಕ್ಷಣ ಕ್ಷಣದ ಮಾಹಿತಿ ಪಡೆಯಲಾಗುತ್ತಿತ್ತು. ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದಲೇ ಇಂದು ಪರೀಕ್ಷೆಯನ್ನು ಎದುರಿಸಿದ್ದು, ಶಿಕ್ಷಣ ಇಲಾಖೆ ಎಲ್ಲಾ ಜಿಲ್ಲೆಜಿಗಳಲ್ಲಿ ಪರೀಕ್ಷೆಗೆ ಬೇಕಾಗಿದ್ದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಯಶಸ್ವಿಯಾಗಿ ನಿಭಾಯಿಸಿತ್ತು.

Leave a Reply

Your email address will not be published. Required fields are marked *