ಜಿಲ್ಲಾ ಸುದ್ದಿತಾಜಾ ಸುದ್ದಿ

ಪೌರ ಕಾರ್ಮಿಕರ ದಸರಾ ಅನುಕರಣೀಯ…

Share Below Link

ಶಿವಮೊಗ್ಗ : ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ದಸರಾ ಆಯೋಜನೆ ಮಾಡಲಾಗಿದೆ. ಇದು ಅತ್ಯಂತ ಸಂತೋಷದ ಸಂಗತಿ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಹೇಳಿದರು.


ಇಂದು ಕುವೆಂಪು ರಂಗಮಂದಿರ ದಲ್ಲಿ ದಸರಾ ಪ್ರಯುಕ್ತ ಆಯೋಜಿಸಿದ್ದ ಪೌರಕಾರ್ಮಿಕರ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರ ದಸರಾವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಗುತ್ತಿ ರುವುದು ಹೆಮ್ಮೆಯ ವಿಷಯ. ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ದಸರಾ ಆಯೋಜನೆ ಮಾಡಲಾಗಿದೆ. ಇದು ಅತ್ಯಂತ ಸಂತೋಷದ ವಿಷಯ ಎಂದರು.
ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಾತನಾಡಿ, ಮೊಟ್ಟ ಮೊದಲ ಪೌರ ಕಾರ್ಮಿಕರ ದಸರಾ ಮಾಡಲಾಗಿದೆ. ಪೌರ ಕಾರ್ಮಿಕರ ದಸರಾವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಾವಿರಕ್ಕಿಂತ ಹೆಚ್ಚು ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವೊಂದು ಕಾರ್ಯಕ್ರಮಗಳು ಇನ್ನು ಬಾಕಿ ಇದ್ದು, ಗೃಹ ಭಾಗ್ಯ, ಸಮುದಾಯ ಭವನವನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್ ಮಾತನಾಡಿ, ದೇಶದ ಏಳಿಗೆಗಾಗಿ ಶ್ರಮಿಸುತ್ತಿರು ವವರು ಪೌರ ಕಾರ್ಮಿಕರು. ಬೆಳಗ್ಗೆ ಸೂರ್ಯ ಹುಟ್ಟುವುದಕ್ಕೂ ಮುಂಚೆ ಎದ್ದು ಕಾರ್ಯನಿರ್ವಹಿಸುವಂತವರು ಪೌರ ಕಾರ್ಮಿಕರು. ಪೌರ ಕಾರ್ಮಿಕರ ದಸರಾ ೨೦೨೪ ರಲ್ಲಿ ಈ ಕಾರ್ಯಕ್ರಮ ಆರಂಭಗೊಂಡಿದ್ದು, ಸೂರ್ಯ ಚಂದ್ರ ಇರುವವರೆಗೆ ಮುಂದುವರೆಯಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಪೌರ ಕಾರ್ಮಿಕರ ದಸರಾ ರಾಜ್ಯಕ್ಕೆ ವಿಸ್ತಾರವಾಗಿದೆ. ಯಾವುದೇ ಹಬ್ಬ ಹರಿದಿನಗಳು ಬರಲಿ ಪೌರ ಕಾರ್ಮಿಕರು ಇಲ್ಲದೆ ಆಗುವುದಿಲ್ಲ. ಯಾವುದೇ ಕಾರ್ಯಕ್ರಮ ಯಶಸ್ವಿ ಯಾಗಲು ಪೌರ ಕಾರ್ಮಿಕರು ಕಾರಣ. ಅವರ ಸೇವೆ ಅತ್ಯಂತ ಪ್ರಮುಖ. ಜನರ ಆರೋಗ್ಯ ಕಾಪಾಡುವ ವೈದ್ಯರು ಪೌರ ಕಾರ್ಮಿಕರು. ಪೌರ ಕಾರ್ಮಿಕರ ಉಪಯೋಗಕ್ಕೆ ಇಟ್ಟಂತಹ ಒಂದು ವರ್ಷದ ಸಂಪೂರ್ಣ ಹಣವನ್ನು ನೆರೆ ಪರಿಹಾರಕ್ಕೆ ಕೊಟ್ಟಂತಹವರು ಪೌರ ಕಾರ್ಮಿಕರು ಎಂದು ಶ್ಲಾಘಿಸಿದರು.
ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇಣುಗೋಪಾಲ್ ಸ್ವಾಗತಿಸಿದರು. ಪಾಲಿಕೆಯ ಅಮೋಘ, ಸಾಯಿ ಶಂಕರ್, ನರಸಿಂಹ, ಗಂಗಾಧರ್, ಹರೀಶ್, ಶ್ರೀಧರ್, ಮಂಜಣ್ಣ, ಸುನೀಲ್, ವಸಂತ್, ಶೈಲಜ ಸೇರಿದಂತೆ ಇನ್ನಿತರರಿದ್ದರು.