ಜಿಲ್ಲಾ ಸುದ್ದಿತಾಜಾ ಸುದ್ದಿ

ಆಕ್ಸ್ ಫರ್ಡ್ ಇಂಗ್ಲಿಷ್ ಶಾಲೆಯಲ್ಲಿ ಕಣ್ಮನ ಸೆಳೆದ ದಸರಾ ಗೊಂಬೆಗಳ ಹಬ್ಬ

Share Below Link

ಶಿವಮೊಗ್ಗ : ಬಸವೇಶ್ವರ ನಗರದ ಆಕ್ಸ್ ಫರ್ಡ್ ಇಂಗ್ಲಿಷ್ ಶಾಲೆಯಲ್ಲಿ ಗೊಂಬೆಗಳ ಹಬ್ಬವನ್ನು ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸ ಲಾಯಿತು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷ ಶ್ರೀನಿವಾಸ್ ವಹಿ ಸಿದ್ದರು. ಮುಖ್ಯ ಅತಿಥಿಯಾಗಿ ಶಾಲೆಯ ಪ್ರಾಂಶುಪಾಲೆ ಬಿ.ಜಿ. ಅಮೃತಾ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾ ಡಿದ ಶಾಲೆಯ ಪ್ರಮುಖ ಶಿಕ್ಷಕರು ಮಕ್ಕಳಿಗೆ ದಸರಾ ಗೊಂಬೆಗಳ ಕುರಿ ತಾದ ಮಾಹಿತಿ ಗಳನ್ನು ಕ್ರಮವಾಗಿ ತಿಳಿಸಿದರು.


ಗೊಂಬೆಗಳ ಹಬ್ಬದ ಮಹತ್ವ:
ದುರ್ಗಾ ದೇವಿಯನ್ನು ೯ ದಿನಗಳ ಕಾಲ ೯ ರೂಪಗಳಲ್ಲಿ ಅಲಂಕರಿಸಿ ಭಕ್ತಿಯಿಂದ ಪೂಜಿಸುವ ಮೂಲಕ ದಸರಾವನ್ನು ಆಚರಿಸಲಾ ಗುತ್ತದೆ. ೧೦ನೇ ದಿನ ವಿಜಯ ದಶಮಿ ಹಬ್ಬವನ್ನು ಆಚರಿಸ ಲಾಗು ತ್ತದೆ. ಮಹಾ ಭಾರತದಲ್ಲಿ ಅeತ ವಾಸಕ್ಕಿಂತ ಮೊದಲು ಪಾಂಡವರು ತಮ್ಮ ಎ ಆಯುಧ ಗಳನ್ನು ಬನ್ನಿ ಮರದ ಮೇಲೆ ಇರಿಸಿದ್ದರ ಪರಿಣಾ ಮ ಅವರಿಗೆ ಯುದ್ಧದ ಸಂದರ್ಭ ದಲ್ಲಿ ಜಯ ಸಾಧಿಸಲು ಸಾಧ್ಯವಾ ಯಿತು. ಹೀಗಾಗಿ ವಿಜಯದ ಶಮಿಯ ದಿನದಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದು ಸಂಪ್ರದಾಯ.
ದಸರಾ ಹಬ್ಬದ ಸಮಯದಲ್ಲಿ ಹಲವೆಡೆ ಜನರು ಗೊಂಬೆಗಳನ್ನು ಕೂರಿಸುವ ಸಂಪ್ರದಾಯವನ್ನು ಅನುಸರಿಸುತ್ತಾರೆ. ೭, ೯ ಅಥವಾ ೧೧ ಮೆಟ್ಟಿಲುಗಳಲ್ಲಿ ಗೊಂಬೆ ಗಳನ್ನು ಇಟ್ಟು ಪೂಜಿಸಲಾಗುತ್ತದೆ.
ಈ ಸಮಯದಲ್ಲಿ ಶ್ರೀ ವಿಷ್ಣು ಮೂರ್ತಿ, ಕೃಷ್ಣ ಲೀಲೆ, ತ್ರಿಮೂರ್ತಿಗಳ ದಶಾವತಾರ, ಶ್ರೀರಾಮ ಪರಿವಾರ, ಶಿವ ಪರಿವಾರ, ಕೃಷ್ಣ ಬೃಂದಾವನ, ಕುಚೇಲ ಸ್ನೇಹ, ಶಿವ ಪಾರ್ವತಿ ಕಲ್ಯಾಣ, ರಾಮಾಯಣ ಕಥೆಗಳನ್ನು ಬಿಂಬಿಸುವ ಗೊಂಬೆಗಳನ್ನು ಇಡಲಾಗುತ್ತದೆ. ಭವಿಷ್ಯದ ಪೀಳಿಗೆಗೆ ನಮ್ಮ ಭಾರತೀಯ ಪದ್ಧತಿಗಳು, ಸಂಪ್ರದಾಯಗಳು ಮತ್ತು ಪರಂಪರೆಯ ಮೌಲ್ಯಗಳನ್ನು ತಿಳಿಸುವುದು ಇದರ ಗುರಿಯಾಗಿದೆ. ಹೀಗಾಗಿ ಇದನ್ನು ಗೊಂಬೆಗಳ ಹಬ್ಬ ಎಂದು ಕರೆಯಲಾಗುತ್ತದೆ.
ನವ ವಧುವಿಗೆ : ಈ ಹಬ್ಬದ ಸಂದರ್ಭದಲ್ಲಿ ಈ ಗೊಂಬೆಗಳನ್ನು ನವವಿವಾಹಿತ ವಧುವಿಗೆ ಆಕೆಯ ಪೋಷಕರು ಗಂಡನ ಮನೆಯಲ್ಲಿ ಕುಟುಂಬವನ್ನು ಪ್ರಾರಂಭಿಸಲು ಮತ್ತು ಹಬ್ಬದ ಸಂಪ್ರದಾಯವನ್ನು ಮುಂದುವರಿಸಲು ಉಡುಗೊರೆ ಯಾಗಿ ನೀಡುತ್ತಾರೆ. ಈ ಗೊಂಬೆ ಗಳನ್ನು ಪಟ್ಟದ ಗೊಂಬೆ ಎಂದು ಕರೆಯಲಾಗುತ್ತದೆ.
ಒಂಬತ್ತು ರೂಪಗಳಲ್ಲಿ : ಪಟ್ಟದ ಗೊಂಬೆ ಎಂಬುದು ಮರ ದಿಂದ ಮಾಡಿದ ಸಾಂಪ್ರದಾಯಿಕ ಗೊಂಬೆ ಯಾಗಿದೆ. ಕಾಗದ ಅಥವಾ ರೇಷ್ಮೆ ಬಳಸಿ ವರ್ಣರಂಜಿತವಾಗಿ ಇದನ್ನು ತಯಾರಿಸಲಾಗುತ್ತದೆ. ಈ ಮುಖ್ಯ ಜೋಡಿ ಗೊಂಬೆಗಳು ಯಾವಾ ಗಲೂ ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸಲಾಗುತ್ತದೆ. ಸಾಮಾನ್ಯ ವಾಗಿ ಈ ಹಬ್ಬದಲ್ಲಿ ರಾಮ, ಲಕ್ಷ್ಮಣ, ಸೀತೆ, ಕೃಷ್ಣ, ರಾಧಾ, ಶಿವ, ವಿಷ್ಣು, ದುರ್ಗಾ, ಲಕ್ಷ್ಮಿ, ಸರಸ್ವತಿ ಇತ್ಯಾದಿ ಮೂರ್ತಿಗಳನ್ನು ಬಳಸಲಾಗುತ್ತದೆ.
ಗೊಂಬೆ ಉತ್ಸವದ ಇತಿಹಾಸ : ಪುರಾಣಗಳ ಪ್ರಕಾರ, ಮಹಿಷಾ ಸುರನನ್ನು ಕೊಲ್ಲಲು ದೇವತೆಗಳು ದುರ್ಗಾ ದೇವಿಗೆ ಎ ಶಕ್ತಿಗಳನ್ನು ನೀಡಿದರು. ಈ ಸಮಯದಲ್ಲಿ ದೇವತೆಗಳು ದುರ್ಬಲರಾದರು. ಆದರೆ ೧೦ನೇ ದಿನ ದುರ್ಗಾದೇವಿ ಮಹಿಷಾಸುರನ ಮೇಲೆ ವಿಜಯ ಸಾಧಿಸಿದಳು. ದೇವತೆಗಳ ಆತ್ಮತ್ಯಾಗ ವನ್ನು ಗೌರವಿಸಲು ಗೊಂಬೆಗಳ ರೂಪದಲ್ಲಿ ದೇವತೆ ಗಳನ್ನು ಪೂಜಿ ಸುವ ಮೂಲಕ ಗೊಂಬೆಗಳ ಹಬ್ಬ ವನ್ನು ಆಚರಿಸಲಾಗುತ್ತದೆ. ವಿಜಯ ನಗರ ಸಾಮ್ರಾಜ್ಯದ ಅಸ್ತಿತ್ವದಿಂದ ಲೂ ಈ ಪದ್ಧತಿ ಚಾಲ್ತಿಯಲ್ಲಿದೆ ಎಂದು ಹಲವರು ನಂಬುತ್ತಾರೆ.
ಗೊಂಬೆ ಹಬ್ಬದ ಮಹತ್ವ : ಈ ಗೊಂಬೆ ಹಬ್ಬವನ್ನು ಕರ್ನಾಟಕದಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ. ಈ ಮೂಲಕ ಹೊಸ ಪೀಳಿಗೆಗೆ ಸ್ಥಳೀಯ ಶ್ರೀಮಂತ ಸಂಸ್ಕೃತಿ ಮತ್ತು ಪುರಾಣಗಳನ್ನು ಪರಿಚಯಿಸ ಲಾಗು ತ್ತದೆ. ದಸರಾ ಹಬ್ಬದ ಸಮಯದಲ್ಲಿ ದೈವಿಕ ಆಶೀರ್ವಾದ ವನ್ನು ಪಡೆ ಯಲು ಮತ್ತು ಮಕ್ಕಳನ್ನು ರಂಜಿ ಸಲು ಇದು ಒಂದು ಮಾರ್ಗ ವಾಗಿದೆ. ಆದರೆ ಸಾಂಪ್ರದಾಯಿಕ ಆಟಿಕೆ ತಯಾರಿಕೆ ದಿನದಿಂದ ದಿನಕ್ಕೆ ಕಡಿಮೆಯಾಗು ತ್ತಿದೆ. ಹೀಗಾಗಿ ಹಬ್ಬದ ಸಮಯದಲ್ಲಿ ಮಣ್ಣಿನ ಗೊಂಬೆ ತಯಾರಿಕೆಯನ್ನು ಜೀವ ಂತವಾಗಿಡಲು ಪ್ರೋತ್ಸಾಹಿಸ ಲಾಗುತ್ತದೆ.
ಮುರುಳೀಧರ್ ಹೆಚ್.ಸಿ.
ಪತ್ರಕರ್ತರು, ಶಿವಮೊಗ್ಗ.