ಶ್ರೀ ಕಾನೂರು ದುರ್ಗಮ್ಮನವರ ದೇವಸ್ಥಾನದಲ್ಲಿ ದುರ್ಗಾಷ್ಟಮಿಯ ವಿಶೇಷ ಪೂಜೆ…
ಶಿಕಾರಿಪುರ : ಪಟ್ಟಣದ ಪುರಾತನ ಪ್ರಸಿದ್ದ ಜಗೃತ ಸ್ಥಾನವಾದ ಶ್ರೀ ಕಾನೂರು ದುರ್ಗಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ದುರ್ಗಾಷ್ಟಮಿಯ ಮಂಗಳವಾರ ಶ್ರೀ ದೇವಿಗೆ ಅಭಿಷೇಕ ಪೂಜ, ವಿಶೇಷ ಪೂಜ, ದುರ್ಗಾ ಹೋಮ, ದುರ್ಗಾ ಮಂಡಲ, ದೀಪ ಸ್ತಂಭ ಪೂಜ, ದೀಪ ನಮಸ್ಕಾರ ಸಹಿತ ವಿವಿಧ ಧಾರ್ಮಿಕ ಆಚರಣೆ ಅತ್ಯಂತ ಶ್ರz ಭಕ್ತಿಯಿಂದ ನೂರಾರು ಭಕ್ತಾಧಿಗಳ ಸಮ್ಮುಖ ದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಪುರೋಹಿತ ವಾದಿರಾಜಚಾರ್ಯ ಅವರ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿವಿಧಾನದಲ್ಲಿ ದೇವಸ್ಥಾನದ ಅರ್ಚಕ ಹರೀಶ್, ಹನುಮಂತಾಚಾರ್, ವಿಶ್ವನಾಥ ಭಟ್ಟರವರು ಸಹಕರಿಸಿದರು. ನಂತರದಲ್ಲಿ ಆಗಮಿಸಿದ್ದ ಅಸಂಖ್ಯಾತ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಜಿ ವಸಂತಗೌಡ, ಕಾರ್ಯದರ್ಶಿ ಬಿ.ಪಿ ಶಿವನಗೌಡ, ಖಜಂಚಿ ವಿಶ್ವನಾಥಸ್ವಾಮಿ, ಸದಸ್ಯ ಹಾಗೂ ಪುರಸಭಾ ಸದಸ್ಯ ಗೋಣಿ ಪ್ರಕಾಶ್, ಪ್ರಮುಖರಾದ ಸಿ.ನಾಗರಾಜಪ್ಪ, ಸುರೇಶ್ ರಾವ್, ಶ್ರೀಕಾಂತ್, ಎಚ್.ಆರ್ ಮಂಜುನಾಥ್, ಚಿಕ್ಕಣ್ಣ, ಲಕ್ಷ್ಮಣ ಕಾನಳ್ಳಿ, ಮಂಜೋಜಿರಾವ್, ಚನ್ನವೀರಪ್ಪ, ಪ್ರಸನ್ನಕುಮಾರ್ ಮತ್ತಿತರರು ಆಗಮಿಸಿ ದೇವಿಯ ದರ್ಶನದ ಜತೆಗೆ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಭಕ್ತಿ ಬಾವದಲ್ಲಿ ಮಿಂದು ಧನ್ಯತಾ ಭಾವನೆಯನ್ನು ಹೊಂದಿದರು.


