ಜಿಲ್ಲಾ ಸುದ್ದಿತಾಜಾ ಸುದ್ದಿ

ದುರ್ಗಾಷ್ಟಮಿ ನಿಮಿತ್ತ ಪುಟ್ಟ ಬಾಲಕಿಯರಿಗೆ ದುರ್ಗಾ ಪೂಜೆ…

Share Below Link

ನ್ಯಾಮತಿ : ಹಿಂದೂಗಳ ಪವಿತ್ರ ಹಬ್ಬ ದಸರಾ ನ್ಯಾಮತಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಹಳ ವೈಶಿಷ್ಟ್ಯದಿಂದ ಆಚರಿಸಲಾ ಗುತ್ತದೆ. ನ್ಯಾಮತಿ ಪಟ್ಟಣದ ಬನಶಂಕರಿದೇವಿ ದೇವಸ್ಥಾನ, ಅಮ್ಮನಮರದ ದೇವಳ, ಮೂಕಾಂಬಿಕ ದೇವಿ, ಕಾಳಿಕಾದೇವಿ ಬೀದಿಯ ಶ್ರೀ ಕಾಳಿಕಾಂಬ ದೇವಳ, ಕುರುವ ಗೆಡ್ಡೆಯ ರಾಮೇಶ್ವರ ದೇವಳ, ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಮಠ ಸೇರಿದಂತೆ ಹಲವಾರು ದೇಗುಲಗಳಲ್ಲಿ , ಪ್ರತಿ ಮನೆಯಲ್ಲೂ ಪರಂಪರಾನುಗತ ವಾಗಿ ವೈದಿಕರ ಮನೆಯ ದೇವರ ಪೀಠದಲ್ಲಿ ನೆಲೆಸಿದ ದೇವಿಯನ್ನು ಪ್ರತ್ಯೇಕ ಪೀಠದಲ್ಲಿ ಕುಳ್ಳಿರಿಸಿ ಘಟಸ್ಥಾಪನೆ ಮಾಡಿ `ಘಟ (ಕಲಶ) ಸ್ಥಾಪನೆ’ ಯೊಂದಿಗೆ ಘಟ ಸ್ಥಾಪಿಸಿ ೯ದಿನಗಳ ಕಾಲ ದೇವಿ ಹೆಸರಿನಲ್ಲಿ ನಂದಾದೀಪೋತ್ಸವ ಕಾರ್ಯಕ್ರಮ ಶಕ್ತಿ ದೇಗುಲಗಳಲ್ಲಿ ದೇಗುಲಗಳಲ್ಲಿ ಪ್ರತಿದಿನ ಬೆಳಿಗ್ಗೆ ಪಂಚಾಮತ ಅಭಿಷೇಕ , ದುರ್ಗಾ ಹೋಮ ವಿಶೇಷ ಪೂಜ, ರಾತ್ರಿ ವಿಶೆಷ ಪೂಜೆ, ಉಡಿ ತುಂಬು ವುದು, ಕುಂಕುಮಾರ್ಚನೆ, ಮಹಾಪೂಜೆ, ದೇವಿ ಉಪಾಸನೆ ಮತ್ತು ಶ್ರೀದೇವಿಪುರಾಣ ಪ್ರವಚನ, ವಿಶೇಷ ಪೂಜೆ ಪ್ರಾರ್ಥನೆ ನಡೆಯು ತ್ತಿದೆ. ೧೦ನೇ ದಿನಕ್ಕೆ ವಿಜಯ ದಶಮಿದಂದು ಕುರುವ ಗೆಡ್ಡೆ, ಗೋವಿನಕೋವಿ, ದಾಸರಹಟ್ಟಿ, ಕುಂಕುವ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ದೇವಿಯ ಮತ್ತು ಗ್ರಾಮದೇವತೆಗಳ ಉತ್ಸವ ಮೂರ್ತಿ ಗಳ ಮೆರವಣಿಗೆ ನಡೆಯುತ್ತದೆ.
೯ ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಹಬ್ಬ ವೈಭವದಿಂದ ನ್ಯಾಮತಿ ಪಟ್ಟಣದ ಕಾಳಿಕಾದೇವಿ ಬೀದಿಯ ಶ್ರೀ ಕಾಳಿಕಾಂಬ ದೇಗುಲದಲ್ಲಿ ಜರುಗು ತ್ತಿವೆ ಪಟ್ಟಣವಲ್ಲದೆ ವಿವಿಧಡೆ ಯಿಂದ ಇಲ್ಲಿ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಮಹಿಳೆ ಯರು ಮಕ್ಕಳು ಕಾಲ್ನಡಿಗೆಯಲ್ಲಿ ಬಂದು ತಮ್ಮ ಇಷ್ಟಾರ್ಥ ಪೂರೈಸು ತ್ತಾರೆ. ಭಕ್ತರು ಬಂದು ಹರಕೆ ತೀರಿಸು ತ್ತಾರೆ. ಹಬ್ಬದ ಮರುದಿನ ಹಬ್ಬದ ಕೊನೆಯ ದಿನ. ಶ್ರೀ ಕಾಳಿಕಾಂಬ ದೇವಿಯ ಶರನ್ನವರಾತ್ರಿ , ದಸರಾ, ವಿಜಯ ದಶಮಿಯ ಮೊರನೇಯ ದಿನ ಏಕಾದಶಿಯದಂದು ಅಂಬಾರಿ ಮಹೋತ್ಸವವನ್ನು ಬಹಳ ವೈಶಿಷ್ಟ್ಯ ದಿಂದ ವೈಭವಯುತ್ತವಾಗಿ ಆಚರಿಸ ಲಾಗುತ್ತದೆ. ಈ ಸಂದರ್ಭದಲ್ಲಿ ದಸರಾ, ಅಂಬಾರಿ ಮಹೋತ್ಸವದ ಅಂಗವಾಗಿ ಶುಕ್ರವಾರ ವೈಭವದ ದುರ್ಗಾಷ್ಟಮಿಯಲ್ಲಿ ಪುಟ್ಟ ಬಾಲಕಿಯರಿಗೆ ದುರ್ಗಾ ಪೂಜೆ ನಡೆಸಲಾಯಿತು.