ಫೆ.3-4ರಂದು ನಾಟಕ ಪ್ರದರ್ಶನ…
ಶಿವಮೊಗ್ಗ:ಅಜೇಯ ಸಂಸ್ಕೃತಿ ಬಳಗದಿಂದ ಫೆ.೩ ಮತು ೪ರಂದು ಸಂಜೆ ೬.೪೫ಕ್ಕೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಕರಿನೀರ ವೀರ ನಾಟಕದ ಎರಡು ಪ್ರದರ್ಶನ ಆಯೋಜಿಸ ಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ವಿನಯ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಕೊಡಗಿನ ರಂಗಭೂಮಿ ಟ್ರಸ್ಟ್ ಅಭಿನಯಿಸುವ ಈ ನಾಟಕವನ್ನು ಖ್ಯಾತ ನಾಟಕಕಾರ ಅಡ್ಡಂಡ ಕಾರ್ಯಪ್ಪ ಬರೆದು ನಿರ್ದೇಶನ ಮಾಡಿದ್ದಾರೆ . ಸ್ವಾತಂತ್ರ್ಯ ವೀರ ಸಾವರ್ಕರ್ ಒಬ್ಬ ಅಸದೃಶ ಕ್ರಾಂತಿ ಪುರುಷ ಹೀಗಿದ್ದಾಗಲೂ ಸಾವ ರ್ಕರ್ ಅವರನ್ನು ಹೇಡಿ ಎಂದು ಜರೆಯುವ ಮತಿಗೇಡಿಗಳಿಗೆ ಉತ್ತರ ಈ ನಾಟಕ. ಕರಿನೀರ ವೀರ ನಾಟಕ ಒಂದು ಕಲ್ಪಿತ ಕಥೆಯಲ್ಲ. ಒಬ್ಬ ಅಸದೃಶ ವ್ಯಕ್ತಿಯ ಕಲಾಶಕ್ತಿ, ಜೀವನೋತ್ಸಾಹ ಹಾಗೂ ವಾಸ್ತವ ಇತಿಹಾಸ ಎಲ್ಲವೂ ಈ ನಾಟಕದಲ್ಲಿ ಅಡಕವಾಗಿದೆ ಎಂದರು.
ಈ ನಾಟಕಕ್ಕೆ ಪ್ರವೇಶ ಶುಲ್ಕ ೫೦೦ ಹಾಗೂ ೨೦೦ ರೂ.ಗಳನ್ನು ನಿಗಧಿಮಾಡಿದ್ದು, ಟಿಕೆಟ್‌ಗಳು ಹಾಗೂ ಮಾಹಿತಿಗೆ ಮೊ ೯೪೪೮೪ ೫೮೪೫೭, ೮೬೧೮೦ ೭೨೯೮೧ , ೯೮೪ ೪೧೫ ೫೩೪, ೮೩೧೦೮ ೭೬೨೭೭ ಅನ್ನು ಸಂಪರ್ಕಿ ಸಬಹುದಾಗಿದೆ ಎಂದರು. ಪ್ರಮುಖರಾದ ಅಚ್ಯುತ್‌ರಾವ್ ಆರ್., ನಾಗೇಶ್ ಎಸ್. ಕುಮಾರಶಾಸ್ತ್ರಿ ಕೆ.ಜೆ., ಚೇತನ್, ಡಾ.ರಂಜನಿ ಬಿದರಹಳ್ಳಿ ಇದ್ದರು.