ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಡಾ| ಸರ್ಜಿ ಗೆಲುವು ಖಚಿತ : ಅರುಣ್ ವಿಶ್ವಾಸ

Share Below Link

ಕೊಡಗು : ನೈರುತ್ಯ ಪದವೀಧರ ಕ್ಷೇತ್ರದ ಐದು ಜಿಲ್ಲೆಯ ಹಾಗೂ ಮೂರು ತಾಲೂಕಿನ ಬಿಜೆಪಿ ಕಾರ್ಯ ಕರ್ತರು ಶಕ್ತಿಮೀರಿ ಕೆಲಸ ಮಾಡು ತ್ತಿದ್ದು, ಈ ಬಾರಿಯು ಬಿಜೆಪಿ ಅಭ್ಯರ್ಥಿ ಡಾ| ಧನಂಜಯ ಸರ್ಜಿ ಅವರು ಅತಿ ಹೆಚ್ಚು ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು. ಕೊಡಗು ಜಿಲ್ಲಾ ಬಿಜೆಪಿ ಕಚೇರಿ ಯಲ್ಲಿ ನಿನ್ನೆ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಕಾರ್ಯಕರ್ತರ ಮತ್ತು ಪ್ರಮು ಖರ ಸಭೆಯಲ್ಲಿ ಅವರು ಮಾತ ನಾಡಿ, ೧೯೮೮ರಲ್ಲಿ ಪ್ರಾರಂಭವಾದ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಇಲ್ಲಿಯವರೆಗೆ ನಡೆದ ಆರು ಬಾರಿ ಚುನಾವಣೆ ಯಲ್ಲಿ ಆರು ಬಾರಿಯೂ ಬಿಜೆಪಿ ಗೆದ್ದಿದೆ. ಡಾ| ಧನಂಜಯ ಸರ್ಜಿ ಅವರು ಒಂದು ರೈತಾಪಿ ಕುಟುಂಬ ವರ್ಗದಲ್ಲಿ ಬೆಳೆದು, ೧೦ನೇ ವರ್ಷಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿ ಸಂಘದ ಎಲ್ಲಾ ಜವಾಬ್ದಾರಿಗಳನ್ನು ಅದ್ಭುತ ವಾಗಿ ನಿರ್ವಹಿಸಿ ಆ ವಯಸ್ಸಿನಲ್ಲಿ ಸಂಘಟನೆ ಶಿಸ್ತನ್ನು ಪಡೆದುಕೊಂಡ ವರು, ಪದವೀಧರರ ಹಿತಕಾ ಯಲು ಅವರು ಸದಾ ಬದ್ಧರಾಗಿದ್ದಾರೆ ಎಂದರು. ನೈರುತ್ಯ ಪದವಿಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂ ಜಯ ಸರ್ಜಿ ಅವರು ಮಾತ ನಾಡಿ, ಕಾರ್ಯಕರ್ತರು ಭಾರ ತೀಯ ಜನತಾ ಪಾರ್ಟಿಯ ಬಹು ದೊಡ್ಡ ಶಕ್ತಿ, ನೈರುತ್ಯ ಪದವಿಧರರ ಚುನಾವಣೆಗೆ ಕಾರ್ಯಕರ್ತರೇ ಅಭ್ಯರ್ಥಿಗಳು. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಾನು ಪದವೀಧರರ ಸಮಸ್ಯೆಯನ್ನು ಅತಿ ಹತ್ತಿರದಿಂದ ಬಲ್ಲವನು. ನಾನು ಒಬ್ಬ ವೈದ್ಯನಾಗಿ ಪದವೀಧರ ಕ್ಷೇತ್ರದ ಸಮಸ್ಯೆಗಳ ಸಂಪೂರ್ಣ ಅರಿವಿದೆ, ಸ್ಪಂದಿಸುವ ಇಚ್ಛಾ ಸಕ್ತಿಯೂ ನನಗಿದ್ದು, ವಿದ್ಯಾವಂತ ಹಾಗೂ ಪ್ರಜವಂತ ಮತದಾ ರರು ಬೆಂಬಲಿಸಿ, ತಮ್ಮ ಸೇವೆ ಯನ್ನು ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಇನ್ನಿತರ ಬಿಜೆಪಿ ಪ್ರಮುಖರು ಉಪಸ್ಥಿತರಿ ದ್ದರು.