ಜಿಲ್ಲಾ ಸುದ್ದಿತಾಜಾ ಸುದ್ದಿ

ಜನರನ್ನು ದಾರಿತಪ್ಪಿಸುವಂತಹ ಪಾತ್ರದಲ್ಲಿ ಡಾ.ರಾಜ್‌ಕುಮಾರ್ ಎಂದಿಗೂ ನಟಿಸಲಿಲ್ಲ…

Share Below Link

ಶಿಕಾರಿಪುರ : ಸಮಾಜದ ಜನರನ್ನು ದಾರಿತಪ್ಪಿಸುವಂತಹ ಪಾತ್ರದಲ್ಲಿ ಡಾ.ರಾಜ್ ಕುಮಾರ್ ಎಂದಿಗೂ ನಟಿಸಲಿಲ್ಲ ಮಲ್ಯ ಯುತವಾದ ಅವರ ನಟನೆ ಪ್ರತಿ ಯೊಬ್ಬರಲ್ಲಿ ಗಾಡ ಪ್ರಭಾವ ಬೀರಿದೆ ಎಂದು ಸಾಗರ ಲೇಖಕ ಸರ್ಫ್ರಾಜ್ ಚಂದ್ರಗುತ್ತಿ ಶ್ಲಾಘಿಸಿ ದರು.
ನಿನ್ನೆ ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಸಾಪ ,ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಭಾಷಾ ವಿಭಾಗ ಆಯೋಜಿಸಿದ್ದ ಡಾ. ರಾಜ್ ಕುಮಾರ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಹಾಗೂ ಕನ್ನಡ ಸಂಸ್ಕೃತಿ ವಿಷಯ ಕುರಿತು ಮಾತನಾಡಿದ ಅವರು,ರಾಜ್ಯದಲ್ಲಿ ನಡೆದ ಚಳು ವಳಿಗಳ ಹಿಂದೆ ಡಾ.ರಾಜ್ ಕುಮಾರ್ ನಟಿಸಿದ ಸಿನಿಮಾಗಳು ಪ್ರೇರಣೆಯಾಗಿದ್ದವು.ಗೋಕಾಕ್ ಚಳುವಳಿಯ ನೇತೃತ್ವವನ್ನು ಡಾ.ರಾಜ್ ಕುಮಾರ್ ವಹಿಸಿ ನಾಡಿಗಾಗಿ ಹೋರಾಟ ನಡೆಸಿ ದ್ದರು. ಅವರ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ,ತಮ್ಮ ಬದುಕನ್ನು ಕನ್ನಡತನ ಹಾಗೂ ಕನ್ನಡ ಸಂಸ್ಕೃತಿ ಗಾಗಿ ಅರ್ಪಿಸಿದ್ದರು.ರಾಜ್ ಕುಮಾರ್ ಸಮಾಜದ ಜನರಿಗೆ ಮಾದರಿಯಾಗಿ ಕಾಣುತ್ತಾರೆ. ರಾಜ್ ಕುಮಾರ್ ಜಹೀರಾತು ಸಂಸ್ಕೃತಿಯಿಂದ ದೂರವಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ರಘು ಮಾತನಾಡಿ, ಯುವಪೀಳಿಗೆ ರಾಜ್ ಕುಮಾರ್ ಸಿನಿಮಾದಲ್ಲಿದ್ದ ಸಾಮಾಜಿಕ ಕಳಕಳಿ ಬಗ್ಗೆ ತಿಳಿದುಕೊಳ್ಳಬೇಕು. ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಜ್ ಕುಮಾರ್ ನಟಿಸುವ ಮೂಲಕ ಸಮಾಜಕ್ಕೆ ಉತ್ತಮ ಮಲ್ಯ ಹಾಗೂ ಸಂದೇಶ ಸಾರುವ ಕಾರ್ಯವನ್ನು ಮಾಡಿದ್ದರು. ವಿದ್ಯಾರ್ಥಿಗಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಜಿ.ಆರ್. ಹೆಗಡೆ, ೧೯೧೫ ರಿಂದ ಆರಂಭವಾದ ಕಸಾಪ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದೆ. ರಾಜ್ಯ,ಜಿ,ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಾಹಿತ್ಯ ಪರ ಕಾರ್ಯಕ್ರಮ ಆಯೋಜಿಸಿ ತ್ತಿದೆ.ದತ್ತಿ ಉಪನ್ಯಾಸ ಕಾರ್ಯ ಕ್ರಮಗಳ ಮೂಲಕ ಸಾಹಿತ್ಯದ ಅಭಿರುಚಿಯನ್ನು ಜನರಲ್ಲಿ ಬೆಳೆಸುತ್ತಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಶಿವರಂಜನಿ ಸುದರ್ಶನ್ ಹಾಗೂ ಹಿರಿಯ ಸದಸ್ಯ ಚೋರಡಿ ಗಿಡ್ಡಪ್ಪ ರಾಜ್ ಕುಮಾರ್ ಕುರಿತು ಸ್ವರಚಿತ ಕವನ ವಾಚಿಸಿದರು.
ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಕೋಟೋಜಿರಾವ್, ವಾಣಿಜ್ಯ ವಿಭಾಗ ಮುಖ್ಯಸ್ಥ ಕೆ.ಸಿ. ರವೀಂದ್ರ, ವಿeನ ವಿಭಾಗ ಮುಖ್ಯಸ್ಥ ಟಿ.ಆರ್. ಪರಶು ರಾಮ್, ಉಪನ್ಯಾಸಕರಾದ ಕಾರ್ತೀಕ್, ಬಾಲಾಜಿ, ಅಕ್ಷತಾ, ಮನೋಜ್, ಅಕ್ಷಯರಾವ್, ಕಸಾಪ ಸದಸ್ಯ ಎಸ್.ಎನ್. ನರಸಿಂಹಸ್ವಾಮಿ ಉಪಸ್ಥಿತರಿದ್ದರು.