ಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಮಾಜಿಕ ಸೇವೆಗೆ ಅನ್ವರ್ಥಕ ನಾಮ ಡಾ ಹೆಗಡೆ: ಪ್ರೊ| ಕೆಂಪರಾಜು

Share Below Link

ಶಿವಮೊಗ್ಗ: ವೃತ್ತಿಯ ಜತೆಗೆ ಪ್ರತಿಯೊಬ್ಬರೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳು ವುದು ಇಂದಿನ ಅಗತ್ಯವಾಗಿದೆ ಎಂದು ಡಾ.ಬಾಲಕೃಷ್ಣ ಹೆಗಡೆ ಅವರ ಅಭಿಮಾನಿ ಗೆಳೆಯರ ಬಳಗದ ಮುಖ್ಯಸ್ಥರಾದ ಪ್ರೊ.ಬಿ.ಕೆ. ಕೆಂಪರಾಜು ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾಗಿದ್ದ ಆಚಾರ್ಯರತ್ನ ಡಾ.ಬಾಲಕೃಷ್ಣ ಹೆಗಡೆ ಅವರಿಗೆ ಅತ್ಯುತ್ತಮ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಅವರನ್ನು ಅಭಿಮಾನಿ ಬಳಗದ ಪರವಾಗಿ ಸನ್ಮಾನಿಸಿ ಮಾತನಾಡುತ್ತಿದ್ದರು.
ಡಾ.ಹೆಗಡೆ ಅವರು ಅತ್ಯಂತ ಕಡು ಬಡತನದಿಂದ ಶಿಕ್ಷಣವನ್ನು ಪೂರೈಸಿದವರು. ಆರಂಭದಲ್ಲಿ ಕೆಲಸ ಸಮಯ ಖಾಸಗಿ ಕಂಪನಿಯಲ್ಲಿ ಮಾರಾಟ ಅಧಿಕಾರಿಗಳಾಗಿ ಉತ್ತಮ ಹೆಸರು ಮಾಡಿದ್ದರು. ಬಳಿಕ ತಮ್ಮ ಸಲಹೆ ಮೇರೆಗೆ ಹುಬ್ಬಳ್ಳಿಯ ನೆಹರು ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿಗೆ ಪದಾರ್ಪಣೆ ಮಾಡಿದರು. ಕೆಲ ಕಾಲ ಶಿರಸಿಯ ಎಂ.ಎಂ. ಕಾಲೇಜಿನಲ್ಲಿಯೂ ಸೇವೆ ಸಲ್ಲಿಸಿದ್ದ ಇವರು, ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಈಗ ಅತ್ಯುತ್ತಮ ಎನ್.ಎಸ್.ಎಸ್. ಕಾರ್ಯ ಕ್ರಮಾಧಿಕಾರಿ ಪ್ರಶಸ್ತಿಗೆ ಭಾಜನ ರಾಗಿದ್ದಲ್ಲದೆ ಸಾರ್ಥಕ ಸೇವಾ ನಿವೃತ್ತಿಯನ್ನೂ ಹೊಂದಿzರೆ. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ ಅತ್ಯುತ್ತಮ ಪ್ರಾಧ್ಯಾಪಕ ಎಂಬ ಮನ್ನಣೆಗೂ ಪಾತ್ರರಾಗಿzರೆ ಎಂದು ಹೇಳಿದರು.
ಬಹು ಭಾಷಾ ಪಾಂಡಿತ್ಯವನ್ನು ಹೊಂದಿದ ಡಾ|ಹೆಗಡೆ ಅವರು ಕಲೆ, ಸಂಸ್ಕೃತಿ, ಸಂಶೋಧನೆ, ಸಾಹಿತ್ಯ ಹೀಗೆ ಹತ್ತು ಹಲವು ಕ್ಷೇತ್ರ ಗಳಲ್ಲಿ ಸಾಧನೆ ಮಾಡಿ ವಿದ್ಯಾರ್ಥಿ ಗಳ ಮೆಚ್ಚುಗೆಗೆ ಪಾತ್ರರಾಗಿzರೆ. ಸಾಮಾಜಿಕ ಸೇವಾ ಬದ್ಧತೆಯನ್ನು ಹೊಂದಿದವರಾಗಿzರೆ. ಅವರ ಸ್ನೇಹಮಯ ವ್ಯಕ್ತಿತ್ವದ, ಸಾಮಾಜಿಕ ಸೇವಾ ತುಡಿತದ ಲಾಭ ಸಮಾಜಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ದೊರ ಕಲಿ ಎಂದು ಅವರು ಆಶಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೆಳೆಯರ ಬಳಗದ ಪ್ರೊ| ಎಸ್.ಎಂ.ಕಮನಳ್ಳಿ ಮಾತನಾಡಿ, ಡಾ.ಹೆಗಡೆ ಅವರು ಮೊದಲಿಂದಲೂ ತಾಳ್ಮೆ, ಸಂಯಮ ವ್ಯಕ್ತಿತ್ವದವರು. ಯಾವುದನ್ನಾದರೂ ಪರಾಮರ್ಶಿಸಿಯೇ ಪ್ರತಿಕ್ರಿಯೆ ನೀಡುವ ಸ್ವಭಾವದವರು. ಎಲ್ಲರನ್ನೂ ಸೇರಿಸಿಕೊಂಡು ಕೆಲಸ ಮಾಡುವ ಸೃಜನಶೀಲ ವ್ಯಕ್ತಿಗಳು. ವಿದ್ಯಾರ್ಥಿನಿಯರನ್ನು ಸಮಾಜ ಸೇವಾ ಕಾರ್ಯದೆಡೆಗೆ ಬರುವಂತೆ ಪ್ರೇರೇಪಣೆ ನೀಡಿದವರು ಎಂದು ಬಣ್ಣಿಸಿದರು.
ಎನ್.ಎಸ್.ಎಸ್.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ಆರ್.ವೈ. ಖಾನ್ ಮಾತನಾಡಿ, ಮನುಷ್ಯನಿಗೆ ಹಣಕ್ಕಿಂತ ಗುಣ ದೊಡ್ಡದು ಮತ್ತು ಅತಿ ಮಹತ್ವzಗಿದೆ. ಡಾ.ಹೆಗಡೆ ಅವರಲ್ಲಿ ಒಳ್ಳೆಯ ಗುಣವನ್ನು ಕಾಣಬಹುದು. ಯಾರಿಗೂ ಮನ ನೋಯುವ ರೀತಿಯಲ್ಲಿ ಮಾತಾಡಿದ್ದೇ ತಾವು ನೋಡಿಲ್ಲ ಎಂದು ಡಾ.ಹೆಗಡೆ ಅವರ ಗುಣಗಾನ ಮಾಡಿದರು.
ಗೆಳೆಯರ ಬಳಗದ ಇನ್ನೋರ್ವ ಸದಸ್ಯರಾದ ಪ್ರೊ.ಕೆ.ಎಸ್.ಗೌಡರ್, ಮನುವಿಕಾಸದ ಗಣಪತಿ ಭಟ್, ಬಾಲಾಜಿ ದೇಶಪಾಂಡೆ, ಶಿವಕುಮಾರ ಮತ್ತಿತರರು ಡಾ.ಹೆಗಡೆ ಅವರ ಕುರಿತು ಮಾತನಾಡಿದರು. ಪಾರ್ವತಿ ಮಂಜನಾಥ ಹೆಗಡೆ, ಶುಭಾ ನಾಗಪತಿ ಹೆಗಡೆ ಉಪಸ್ಥಿತರಿದ್ದರು. ಡಾ.ಸೌಮ್ಯಶ್ರೀ ಎನ್.ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.