ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ದೇವಸ್ಥಾನ ಕಾಮಗಾರಿಗೆ ಡಾ| ವೀರೇಂದ್ರ ಹೆಗ್ಡೆರಿಂದ ದೇಣಿಗೆ

Share Below Link

ಹೊನ್ನಾಳಿ: ತಾಲೂಕಿನ ಚಿಕ್ಕಗೋಣಗೇರಿ ಗ್ರಾಮದ ಗ್ರಾಮ ದೇವತೆ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಣದ ರೂಪದ ಪ್ರಸಾದ ಕಳಿಸಿzರೆ ಎಂದು ಸುದ್ದಿ ತಿಳಿದು ಯೋಜನಾಧಿಕಾರಿಯ ಸ್ವಾಗತಕ್ಕೆ ಕಮಿಟಿಯವರು ದೇವ ಸ್ಥಾನ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಾಲೂಕು ಯೋಜನಾಧಿಕಾರಿ ನವೀನ್ ಅವರು ದೀಪ ಬೆಳಗಿಸುವುದರ ಮೂಲಕ ಚೆಕ್ ವಿತರಣೆಯ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪೂಜ್ಯ ಡಾ| ವೀರೇಂದ್ರ ಹೆಗ್ಡೆಯವರು ಧರ್ಮದ ಕಾರ್ಯಕ್ಕೆ ಜತ್ಯಾತೀತವಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ ಭೇದವಿಲ್ಲದೆ ಧರ್ಮದ ಕಾರ್ಯಕ್ಕೆ ಸದಾ ಬೆಂಬಲ ಕೊಡುತ್ತಾ ಬಂದಿzರೆ. ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನ ಕಮಿಟಿಯವರು ಶ್ರೀಗಳ ಬಳಿ ಬಂದು ಮನವಿ ಮೇರೆಗೆ ಪೂಜ್ಯ ರಿಂದ ೧,೫೦,೦೦೦ ರೂ ದೇವ ಸ್ಥಾನಕ್ಕೆ ಪ್ರಸಾದ ರೂಪದಲ್ಲಿ ಕೊಟ್ಟಿ zರೆ. ಧರ್ಮದ ಕಾರ್‍ಯಪೂರ್ಣ ಗೊಳ್ಳದಿದ್ದರೆ ಪೂಜ್ಯರನ್ನ ಪುನಃ ಭೇಟಿಯಾಗಬಹುದು ಎಂದರು.
ದೇವಸ್ಥಾನ ಕಮಿಟಿಯ ಕಾರ್ಯದರ್ಶಿ ಶಿವಮೂರ್ತಿ ಮಾತನಾಡಿ, ಚಿಕ್ಕಗೋಣಗೇರಿ ಚಿಕ್ಕ ಗ್ರಾಮವಾದರೂ ಪ್ರತಿಯೊ ಂದು ಮನೆಯವರು ಕೊಟ್ಟಂತಹ ಹಣ ೫ ಲಕ್ಷ ರೂಗಳು ಆಗಿತ್ತು. ಈ ಹಣದಿಂದ ಪ್ರಾರಂಭಗೊಂಡ ಕಟ್ಟಡ ಆರ್ ಸಿ ಸಿ ಆಗಿ ಅಪೂರ್ಣ ಗೊಂಡಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಯವರ ಬಳಿ ಕಾಣಲಿಕ್ಕೆ ಕಮಿಟಿಯ ವರುದಾಖಲೆ ಸಮೇತ ತೆರಳಿ ದೇವಸ್ಥಾನ ವಿಚಾರವನ್ನು ಅವರ ಬಳಿ ತಿಳಿಸಿದಾಗ ಅಂದು ನಮ್ಮ ಮನವಿಗೆ ತಕ್ಷಣ ಸ್ಪಂದಿಸಿದ ಪೂಜ್ಯರು ಇಂದು ತಮ್ಮ ಯೋಜ ನಾಧಿಕಾರಿಯವರನ್ನು ಕಳಿಸಿ ರೂ.೧, ೫೦,೦೦೦ರೂ ಪ್ರಸಾದ ರೂಪದಲ್ಲಿ ಕೊಟ್ಟಂತಹ ಹಣ ದೇವಸ್ಥಾನಕ್ಕೆ ಸಂಜೀವಿನಿಯಾಗಿದೆ. ಪೂಜ್ಯರಿಗೆ ದೇವರು ಆಯಸ್ಸು, ಆರೋಗ್ಯ ಅಷ್ಟೈಶ್ವರ್ಯದೊಂದಿಗೆ ಇನ್ನಷ್ಟು ನೂರು ಕಾಲ ಬಾಳಲಿ ಎಂದು ನಮ್ಮ ಗ್ರಾಮಸ್ಥರು ಪರ ವಾಗಿ ಶ್ರೀ ಧರ್ಮಸ್ಥಳ ಮಂಜು ನಾಥ ಸ್ವಾಮಿಯಲ್ಲಿ ಹಾಗೂ ಶ್ರೀ ಗಂಗಾಪರಮೇಶ್ವರಿ ದೇವಿಯ ಆಶೀರ್ವಾದ ಸದಾ ಪೂಜ್ಯರ ಮೇಲೆ ಇರಲಿ ಎಂದು ಹಾರೈಕೆಯ ನುಡಿಯನ್ನು ನುಡಿದರು.
ಈ ಸಂದರ್ಭದಲ್ಲಿ ಜಿ ಜನಜಗೃತಿ ವೇದಿಕೆಯ ನಿರ್ದೇಶಕ ಕುಮಾರ್, ಅಧ್ಯಕ್ಷರಾದ ಬಸವರಾಜಪ್ಪ ವಿ ಕಾರ್ಯದರ್ಶಿ ಶಿವಮೂರ್ತಿ ಕೆ ಕೋಶಾಧಿಕಾರಿ ಹನುಮಂತಪ್ಪ ನಿರ್ದೇಶಕ ಚಂದ್ರಪ್ಪ ಎಚ್, ಬಸವಣ್ಣಪ್ಪ ಸುರೇಶ್ ಹೊನ್ನಾಳಿ ಮೇಲ್ವಿಚಾರಕ ರಾದ ನೇತ್ರಾವತಿ ಜಿ ಗ್ರಾಮಸ್ಥರು ಸಹ ಉಪಸ್ಥಿತಿಯಲ್ಲಿದ್ದರು.