ಡಾ.ಸಿಪಿಕೆ ಕಾವ್ಯ ಪ್ರಶಸ್ತಿ ಪಡೆದ ಶಿ.ಜು.ಪಾಶ…
ಶಿವಮೊಗ್ಗ; ಮೈಸೂರಿನ ಸ್ಪಂದನ ಸಾಂಸ್ಕತಿಕ ಪರಿಷತ್ತು ಇದೇ ಪ್ರಥಮ ಬಾರಿಗೆ ನೀಡಿದ ಡಾ. ಸಿಪಿಕೆ ಕಾವ್ಯ ಪ್ರಶಸ್ತಿಯನ್ನು ಶಿವಮೊಗ್ಗದ ಪತ್ರಕರ್ತ, ಸಾಹಿತಿ ಶಿ.ಜು.ಪಾಶ ಭಾನುವಾರದಂದು ಸಂಜೆ ಮೈಸೂರಿನ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಬಹುಶ್ರುತ ವಿದ್ವಾಂಸ ಡಾ.ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ), ಖ್ಯಾತ ಕವಯತ್ರಿ ಹಾಗೂ ಸ್ತ್ರೀವಾದಿ ಚಿಂತಕರಾದ ಶ್ರೀಮತಿ ಶಶಿಕಲಾ ವಸ್ತ್ರದ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಹೆಚ್ಚುವರಿ ಜಿಧಿಕಾರಿ ಹಾಗೂ ಸಾಹಿತಿ ಪಿ.ಶಿವರಾಜ್, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಟಿ.ಆರ್. ಚಂದ್ರಶೇಖರ್ ಹಾಗೂ ಕರ್ನಾಟಕ ಕಾವಲುಪಡೆಯ ರಾಜಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡರವರ ಉಪಸ್ಥಿತಿಯಲ್ಲಿ ಶಿವಮೊಗ್ಗದ ಶಿ.ಜು.ಪಾಶರವರಿಗೆ ಡಾ.ಸಿಪಿಕೆ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.