ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಕುಷ್ಟರೋಗ ಕುರಿತು ಆತಂಕ ಬೇಡ-ಸೂಕ್ತ ಚಿಕಿತ್ಸೆಯಿಂದ ಪೂರ್ಣ ಗುಣ ಸಾಧ್ಯ…

Share Below Link

ಶಿವಮೊಗ್ಗ: ಬಡವ, ಶ್ರೀಮಂತ, ಗಂಡು, ಹೆಣ್ಣು ಎಂಬ ಬೇಧವಿಲ್ಲದೆ ಯಾರಲ್ಲಿ ಬೇಕಾದರೂ ಕುಷ್ಟರೋಗ ಬರಬಹುದಾಗಿದ್ದು ರೋಗಲಕ್ಷಣಗಳು ಕಂಡು ಬಂದ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯು ವುದರಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ಡಿಹೆಚ್‌ಓ ಡಾ.ನಟರಾಜ್ ತಿಳಿಸಿದರು.
ಜಿಡಳಿತ, ಜಿಪಂ, ಪೋಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಇಲಾಖೆ ಆಶ್ರಯದಲ್ಲಿಂದು ಬೆಳಿಗ್ಗೆ ಆರ್.ಎಮ್.ಎಲ್ ನಗರದ ಕನಕ ವಿದ್ಯಾ ಸಂಸ್ಥೆಯ ಮುಂಭಾಗದಿಂದ ಏರ್ಪಡಿಸಲಾಗಿದ್ದ ಕುಷ್ಠರೋಗ ಜಗೃತಿ ಜಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕುಷ್ಟರೋಗಕ್ಕೆ ಬಹುವಿಧ ಔಷಧ(ಎಂಡಿಟಿ) ಚಿಕಿತ್ಸೆಯು ಎ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಹಾಗೂ ಸಹಾಯಕ ಔಷಧಿಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಕುಷ್ಟರೋಗದಿಂದ ಅಂಗವೈಕಲ್ಯಕ್ಕೆ ಒಳಗಾದವರಿಗೆ ರಿ-ಕನ್ಷ್ರಟ್ರಕ್ಟಿವ್ ಶಸ್ತ್ರಚಿಕಿತ್ಸೆಯನ್ನು ಆಯ್ದ ಆಸ್ಪತ್ರೆ ಗಳಲ್ಲಿ ಉಚಿತವಾಗಿ ನಡೆಸಲಾಗುವುದು ಎಂದರು.


ಮಚ್ಚೆಗಳನ್ನು ಗುಪ್ತವಾಗಿರಸದೇ ವೈದ್ಯರಲ್ಲಿ ತೋರಿಸಿಕೊಂಡು, ಪ್ರಾರಂಭಿಕ ಹಂತದಲ್ಲಿಯೇ ತೋರಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದರೆ ಅಂಗವೈಕಲ್ಯ ತಡೆಯ ಬಹುದಾಗಿದ್ದು, ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರೋಗಮುಕ್ತರಾಗಬೇಕೆಂದು ಹಾಗೂ ರೋಗ ಕಳಂಕವೆಂದು ಭಾವಿಸಬಾರದು. ಮಢ್ಯತೆಯಿಂದ ಹೊರಬರಬೇಕೆಂದು ಕರೆ ನೀಡಿದರು.
ಡಿಎಲ್‌ಓ ಡಾ.ಕಿರಣ್ ಮಾತನಾಡಿ, ಸುಮಾರು ೮೦ ರಿಂದ ೯೦ ವರ್ಷಗಳ ಹಿಂದೆ ಕುಷ್ಟರೋಗಕ್ಕೆ ಯಾವುದೇ ಔಷಧಿಗಳಿರಲಿಲ್ಲ. ಆಗ ಜನರ ಮನಸ್ಸಿನಲ್ಲಿ ಈ ರೋಗದ ಕುರಿತು ದೊಡ್ಡ ಮಢ್ಯತೆ ಇತ್ತು. ಇದು ಹಿಂದಿನ ಜನ್ಮದ ಪಾಪವೆಂದು ಪರಿಗಣಿಸಿದ್ದರು. ಅಂದಿನ ದಿನಮಾನದಲ್ಲಿ ಮಹಾತ್ಮಾ ಗಾಂಧೀಜಿಯವರು ತಮ್ಮ ಸಾಬರಮತಿ ಆಶ್ರಮದಲ್ಲಿ ಈ ರೋಗಿಗಳಿಗೆ ಆರೈಕೆ ಮಾಡಿ ಚಿಕಿತ್ಸೆ ಕೊಡಿಸಿ ಗುಣಮುಖರಾಗಿಸು ತ್ತಿದ್ದರು. ಇದರ ಸ್ಮರಣಾರ್ಥ ಜ.೩೦ ಗಾಂಧೀಜಿಯವರು ಹುತಾತ್ಮರಾದ ದಿನವನ್ನು ಸರ್ಕಾರವು ಕುಷ್ಟರೋಗ ನಿರ್ಮೂಲನೆ ದಿನವನ್ನಾಗಿ ಆಚರಿಸುತ್ತಿದೆ ಎಂದರು.
ಜ.೩೦ ರಿಂದ ಫೆ.೧೩ ರವರೆಗೆ ೧೫ ದಿನಗಳ ಕಾಲ ಕುಷ್ಟರೋಗ ಪತ್ತೆ ಹಚ್ಚುವ ಆಂದೋಲನ ಮಾಡಲಾ ಗುತ್ತಿದೆ. ಕುಷ್ಟರೋಗವು ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ ಎಂಬ ಸೂಕ್ಷ್ಮಾಣುವಿನಿಂದ ಬರುವ ಕಾಯಿಲೆಯಾಗಿದ್ದು ನಿಧಾನವಾಗಿ ಸೋಂಕು ಹರಡುತ್ತದೆ. ಪ್ರಾಥಮಿಕ ವಾಗಿ ಚರ್ಮ, ನರಗಳ ಮೇಲೆ ಪರಿಣಾಮ ಬೀರುತದೆ. ರೋಗ ಇರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ರೋಗ ಹರಡುತ್ತದೆ. ಈ ರೋಗ ವಂಶಪಾರಂಪರ್ಯವಲ್ಲ. ಕುಷ್ಟ ರೋಗದ ಬಗ್ಗೆ ಯಾವುದೇ ಬೇಧ, ತಾರತಮ್ಯ ಬೇಡ. ಚರ್ಮದ ಮೇಲೆ ತಿಳಿಬಿಳಿ ಅಥವಾ ಕೆಂಪು ಇಲ್ಲವೇ ತಾಮ್ರ ವರ್ಣದ ಸ್ಪರ್ಷeನವಿಲ್ಲದ ಮಚ್ಚೆಗಳು, ಹುಬ್ಬು ಕಣ್ಣರೆಪ್ಪೆ ನಷ್ಟ, ಕೈ ಅಥವಾ ಕಾಲಿನ ಸ್ಪರ್ಶeನ ಕಡಿಮೆ ಯಾಗುವುದು, ಕೈ ಬೆರಳುಗಳು, ಪಾದಗಳಲ್ಲಿ ನಿಶ್ಯಕ್ತಿ ರೋಗ ಲಕ್ಷಣ ಗಳಾಗಿವೆ. ರೋಗ ತೀವ್ರತೆ ಮೇಲೆ ಪಿಬಿ ಮತ್ತು ಎಂಬಿ ಎಂದು ವರ್ಗೀಕರಿಸಲಾಗಿದ್ದು, ಪಿಬಿಗೆ ೬ ತಿಂಗಳ ಕಾಲ ಉಚಿತ ಬಹುಔಷಧಿ ಚಿಕಿತ್ಸೆ, ಎಂಬಿ ಗೆ ೧೨ ತಿಂಗಳ ಕಾಲ ಔಷಧಿ ನೀಡಲಾಗುತ್ತದೆ. ಸೂಕ್ತ ಚಿಕಿತ್ಸೆಯಿಂದ ಈ ರೋಗವನ್ನು ಸಂಪೂರ್ಣವಾಗಿ ಗುಣ ಹೊಂದ ಬಹುದು ಎಂದರು. ಕುಷ್ಟರೋಗದಿಂದ ಸಂಪೂರ್ಣರಾಗಿ ಗುಣಮು ಖರಾದ ಶಿವಪ್ಪ, ಲಕ್ಷ್ಮಣ, ಇಕ್ಬಾಲ್ ಮತ್ತು ಮೊಹಮ್ಮದ್ ಜಮೀರ್‌ರನ್ನು ವಿಶೇಷ ಆಹ್ವಾನಿತ ರಾಗಿ ಆಹ್ವಾನಿಸಿದ್ದು, ಈ ವೇಳೆ ಸನ್ಮಾನಿಸಿ ಅಭಿನಂದಿಸಲಾಯಿತು. ಇವರು ಜಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಲ್ಲಿ ಜಗೃತಿ ಮೂಡಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ, ಊರುಗಡೂರು ಪಿಹೆಚ್‌ಸಿ ವೈದ್ಯಾಧಿಕಾರಿ ಡಾ. ಕಾಂಚನ, ಮಾಜಿ ಪಾಲಿಕೆ ಸದಸ್ಯರಾದ ರಾಜು, ಸ್ಥಳೀಯ ಮುಖಂಡರಾದ ಪ್ರಸನ್ನಕುಮಾರ್, ಮೂರ್ತಿ, ನೇತಾಜಿ, ಪೂಜ ಚಾರಿಟಬಲ್ ಟ್ರಸ್ಟ್, ಅಂಬೇಡ್ಕರ್ ಜನಪದ ಕಲಾ ತಂಡ, ನೇಸರ ಕಲಾ ತಂಡ, ಸಿಮ್ಸ್ ನರ್ಸಿಂಗ್ ವಿದ್ಯಾರ್ಥಿಗಳು, ಸಿಬ್ಬಂದಿಗಳಿದ್ದರು.