ಜಿಲ್ಲಾ ಸುದ್ದಿತಾಜಾ ಸುದ್ದಿ

ದೀಪವಾಗಿ ಬೆಳಗಿ ಬೆಂಕಿಯಾಗಿ ಉರಿಯಬೇಡಿ …

Share Below Link

ಶಿವಮೊಗ್ಗ: ದೀಪವಾಗಿ ಬೆಳಗಿ ಬೆಂಕಿಯಾಗಿ ಉರಿಯಬೇಡಿ ಎಂದು ಮಾಚೇನಹಳ್ಳಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಕಮಾಡಂಟ್ ಎಸ್. ಯುವಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಹ್ಯಾದ್ರಿ ಕಲಾ ಕಾಲೇಜ್, ಹಳೆ ವಿದ್ಯಾರ್ಥಿಗಳ ಸಂಘ, ಎನ್‌ಎಸ್ ಎಸ್ ಆಶ್ರಯದಲ್ಲಿ ಆಯೋಜಿಸಿದ್ದ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಅವಕಾಶ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳ ಬದುಕೇ ಒಂದು ಕಂಪ್ಯೂಟರ್ ಇದ್ದ ಹಾಗೆ. ಇದನ್ನು ಅತ್ಯಂತ ಸೂಕ್ಷ್ಮವಾಗಿ ಬಳಸಬೇಕು. ವೈರಸ್‌ಗಳು ಸಹಜ. ಅದನ್ನು ತಡೆಯಲು ಆಂಟಿ ವೈರಸ್‌ಗಳು ಹೇಗೇ ಮುಖ್ಯವೋ ಹಾಗೆಯೇ ವಿದ್ಯಾರ್ಥಿಗಳು ಕೂಡ ತಮ್ಮ ಕೆಟ್ಟ ಆಲೋಚನೆಗಳನ್ನು ದೂರ ಮಾಡಬೇಕು. ವಿದ್ಯಾರ್ಥಿ ಜೀವನವನ್ನು ಹತೋಟಿಯಲ್ಲಿಟ್ಟು ಕೊಳ್ಳಬೇಕು. ಪರೀಕ್ಷೆಗಾಗಿಯೇ ಓದಬೇಡಿ, ನಾನು ಓದಿದ್ದರಿಂದ ಎಷ್ಟು ಅಂಕಗಳು ಬಂದಿವೆ ಎಂದು ತಿಳಿದುಕೊಳ್ಳಿ. ಒಳ್ಳೆಯ ಆಲೋ ಚನೆಗಳಿಂದ ಸಮಾಜಕ್ಕೆ ಆಸ್ತಿ ಯಾಗುತ್ತೀರಿ. ಇಲ್ಲದಿದ್ದರೆ ಅಸ್ತಿ ಯಾಗುತ್ತೀರಿ ಎಂದು ಎಚ್ಚರಿಸಿ ದರು.
ಪ್ರಾಂಶುಪಾಲ ಡಾ. ಸೈಯದ್ ಸನಾವುಲ್ಲ ಅವರು ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗ ಮಾಡು ವಾಗಲೇ ಒಂದು ಗುರಿ ಇಟ್ಟುಕೊಳ್ಳ ಬೇಕು. ಕೆಲಸಕ್ಕೆ ಸೇರಬೇಕು ಎನ್ನುವ ಭಾವನೆ ಬೆಳೆಸಿ ಕೊಳ್ಳಬೇಕು. ಸರ್ಕಾರಿ ಉದ್ಯೋಗಗಳಂತೂ ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಂದಲೇ ದಕ್ಕಲೂ ಸಾಧ್ಯ. ಆದ್ದರಿಂದ ಕಷ್ಟಪಟ್ಟು ಓದಿ. ಜನ ಸಂಪಾದಿಸಿ, ವಿದ್ಯಾರ್ಥಿಗಳು ಕೆಲವು ವರ್ಷ ಓದಿದರೆ ಹಲವು ವರ್ಷಗಳು ಸುಖ ದಿಂದ ಇರಬಹುದು ಎಂದರು.
ಹಳೆ ವಿದ್ಯಾರ್ಥಿಗಳ ಸಂಘದ ಸಂಚಾಲಕ ಹಾಗೂ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಎನ್. ಮಂಜು ನಾಥ್ ಪ್ರಾಸ್ತಾವಿಕವಾಗಿ ಮಾತ ನಾಡಿ, ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನ ಎನ್ನುತ್ತಾರೆ. ಆದರೆ, ಅದನ್ನು ಪಡೆಯಲು ಶ್ರದ್ಧೆ, ಸಾಧನೆ ಮುಖ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಕಷ್ಟಪಡಬೇಕಾಗಿದೆ. ಉದ್ಯೋಗ ಇಂದಿನ ಆದ್ಯತೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪ ನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಮಲ್ನಾಡ್ ಕೋಚಿ ಂಗ್ ಸೆಂಟರ್ ನಿರ್ದೇಶಕ ತೀರ್ಥ ಹಳ್ಳಿ ಕೇಶವಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು ಅತಿ ಮುಖ್ಯ. ಸರ್ಕಾರಿ ಉದ್ಯೋಗ ಗಳು ಲಭಿಸಲು ಇಂದು ಕಷ್ಟ ಪಡಬೇಕಾಗಿದೆ. ಮಲ್ನಾಡ್ ಕೋಚಿಂಗ್ ಸೆಂಟರ್ ಲಕ್ಷಾಂತರ ಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದೆ. ವಿದ್ಯಾ ರ್ಥಿಗಳು ದೊಡ್ಡ ದೊಡ್ಡ ಪರೀಕ್ಷೆ ಗಳನ್ನು ಪಾಸ್ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂಬ ಕೀಳರಿಮೆ, ಸೋಮಾರಿತನ ಬಿಟ್ಟು ಸಾಮಾಜಿಕ ಜಲತಾಣಗಳ ದಾಸರಾಗದೇ ಪರೀಕ್ಷೆಗಳನ್ನು ಎದುರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಂಎ ಇಂಗ್ಲಿಷ್ ನಲ್ಲಿ ಅತಿ ಹೆಚ್ಚು ಅಂಕ ಪಡೆದ ಸಲ್ಮಾ ತಬಸುಮ್ ಅವರಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ಕಾರ್‍ಯಕ್ರಮದಲ್ಲಿ ಎನ್‌ಎಸ್ ಎಸ್ ಘಟಕ ೧ ರ ಕಾರ್ಯ ಕ್ರಮಾಧಿಕಾರಿ ಡಾ. ಬಿ.ಎನ್. ಪ್ರಕಾಶ್ ಮರ್ಗನಳ್ಳಿ, ಘಟಕ ೨ರ ಅಧಿಕಾರಿ ಡಾ. ಮುದುಕಪ್ಪ, ಆನಂದಪುರ ಜನಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಡಾ. ಆರ್. ಸುರೇಶ್, ಸಹ್ಯಾದ್ರಿ ಕಾಲೇಜಿನ ಹಳೆಯ ವಿದ್ಯಾರ್ಥಿ ವೈ.ಹೆಚ್. ನಾಗರಾಜ್, ಪ್ರೊ. ಸಿರಾಜ್ ಅಹಮ್ಮದ್, ಡಾ. ಹಾಲಮ್ಮ, ಜಿ.ಆರ್. ಲವ ಮುಂತಾದವರಿ ದ್ದರು.