ಜಿಲ್ಲಾ ಸುದ್ದಿತಾಜಾ ಸುದ್ದಿ

ಸ್ವಾರ್ಥಕ್ಕಾಗಿ ಬದುಕದೆ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಬದುಕಿ: ನಿರ್ಮಲ ಸ್ವರೂಪ್ ಜೀ

Share Below Link

ಶಿವಮೊಗ್ಗ: ಆಧುನಿಕ ಜಗತ್ತಿ ನಲ್ಲಿ ಮನುಷ್ಯ ಸಮಾಜಕ್ಕಾಗಿ ಬದು ಕದೆ ಸ್ವಾರ್ಥಕ್ಕಾಗಿ ಬದುಕುತ್ತಿzನೆ. ಇದರಿಂದಾಗಿ ಮನುಷ್ಯನ ಮನ ಸ್ಸಿಗೆ ನೆಮ್ಮದಿ ಇಲ್ಲದಂತಾಗಿದ್ದು, ಒತ್ತಡದಲ್ಲಿ ಜೀವನ ನಡೆಸುವಂ ತಾಗಿದೆ. ಇದರಿಂದ ಹೊರಬರಲು ಸಂಘ, ಸಂಸ್ಥೆಗಳ ಮೂಲಕ ಸಾಮಾ ಜಿಕ ಸೇವೆ ನಡೆಸಿದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ಜಮ್ಮು ವಿನ ಅಖಿಲ ಭಾರತ ವರ್ಷೀಯ ವೈದಿಕ್ ಧರ್ಮ ಪ್ರಚಾರ ಆಶ್ರಮದ ನಿರ್ಮಲ ಸ್ವರೂಪ್ ಜೀ ಮಹಾರಾಜ್ ಅವರು ಹೇಳಿದರು.
ಪರೋಪಕಾರಂ ಕುಟುಂಬದ ವತಿಯಿಂದ ಗಣಪತಿ ಹಬ್ಬದ ತಯಾರಿಗಾಗಿ ಇಂದು ಬೆಳಿಗ್ಗೆ ಇಲ್ಲಿನ ಗುಂಡಪ್ಪ ಶೆಡ್‌ನ ಮುಸ್ಸಂಜೆ ಉದ್ಯಾನವನದಲ್ಲಿ ಹಮ್ಮಿಕೊಂ ಡಿದ್ದ ಸ್ವಚ್ಚತಾ ಕಾರ್ಯಕ್ರಮದ ಸಂದರ್ಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನುಷ್ಯ ತನ್ನ ಬದುಕಿನು ದ್ದಕ್ಕೂ ಸಂಸ್ಕೃತಿ ಮತ್ತ ಸಂಸ್ಕಾರ ಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಮನುಷ್ಯ ಸಮಾ ಜಮುಖಿಯಾಗಿ ಬದುಕದಿದ್ದಲ್ಲಿ ಸಂಬಂಧಗಳು ಸಂಕೀರ್ಣವಾ ಗುತ್ತವೆ ಎಂದರು.
ಪರೋಪಕಾರಂ ಕುಟುಂಬವು ಯಾವುದೇ ಪ್ರತಿಫಲಾಪೇಕ್ಷೆ, ಅಧಿಕಾರ, ಸ್ವಾರ್ಥತೆ ಇಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿ ರುವುದು ಮಾದರಿಯಾಗಿದೆ. ದೇಶಾದ್ಯಂತ ಇಂತಹ ಸಂಘಟನೆ ಗಳು ಸಕ್ರಿಯವಾದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊ ಳ್ಳಬಹುದು ಎಂದು ತಿಳಿಸಿದರು.
ಪರೋಪಕಾರಂ ಕುಟುಂಬದ ಕಟ್ಟಾಳು ಶ್ರೀಧರ್ ಎನ್.ಎಂ., ಲೀಲಾಬಾಯಿ ಎನ್.ಎಂ, ಅನಿಲ್ ಹೆಗಡೆ, ಓಂಪ್ರಕಾಶ್, ಕಾರ್ಪೆಂ ಟರ್ ಕುಮಾರ್, ವಕೀಲ ನಾಗಭೂ ಷಣ ಸ್ವಾಮಿ, ನಿವೃತ್ತ ಯೋಧ ಕೆ.ಎಸ್. ವೆಂಕಟೇಶ್, ರಾಘವೇಂದ್ರ ಎನ್.ಎಂ., ಕಿರಣ್ ಆರ್., ಕೀರ್ತಿ ಕಿರಣ್, ಪ್ರಕಾಶ್, ಮೋಹನ್, ನರಪತ್ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.