ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರಕ್ತ ಕೊಟ್ಟೇವು ಭೂಮಿ ಬಿಡೆವು ಎಂದು ಹೋರಾಟಕ್ಕೆ ಸಿದ್ದರಾದ ಅನ್ನದಾತರು…

Share Below Link

ಶಿಕಾರಿಪುರ: ರಾಷ್ಟ್ರೀಯ ಹೆzರಿಗೆ ಬೈಪಾಸ್ ನಿರ್ಮಿಸಲು ಪಟ್ಟಣದ ಸುತ್ತಮುತ್ತಲಿನ ರೈತರ ಬೆಲೆಬಾಳುವ ಜಮೀನು ವಶಪಡಿಸಿ ಕೊಳ್ಳುವ ಹುನ್ನಾರ ರೂಪಿಸಲಾ ಗಿದ್ದು, ಎಂತಹ ಸಂದರ್ಭ ದಲ್ಲಿಯೂ ರಕ್ತ ಕೊಟ್ಟೇವು ಭೂಮಿ ನೀಡುವುದಿಲ್ಲ ಜಮೀನು ಉಳಿಸಿಕೊಳ್ಳಲು ಎಲ್ಲ ಹೋರಾಟಕ್ಕೆ ರೈತರು ಸಿದ್ದವಾಗಿದ್ದು ಅವೈeನಿಕ ವಾಗಿ ರೂಪಿಸಲಾದ ಯೋಜನೆ ಯನ್ನು ಕೈಬಿಟ್ಟು ಹೊರವಲಯ ದಲ್ಲಿನ ಸರ್ಕಾರಿ ಭೂಮಿ, ಬಂಜರು ಭೂಮಿಯಲ್ಲಿ ಬೈಪಾಸ್ ರಸ್ತೆ ನಿರ್ಮಿಸುವಂತೆ ಪುರಸಭಾ ಸದಸ್ಯ, ಪರಾಜಿತ ವಿಧಾನಸಭಾ ಅಭ್ಯರ್ಥಿ ನಾಗರಾಜಗೌಡ ಎಚ್ಚರಿಸಿದರು.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತ ಸಮುದಾಯ ಅನಾವೃಷ್ಠಿಯಿಂದ ತತ್ತರಿಸಿದ್ದು ಇದರೊಂದಿಗೆ ಗೊಬ್ಬರದ ಬೆಲೆ ಹೆಚ್ಚಳ ಮತ್ತಿತರ ಹಲವು ಸಮಸ್ಯೆ ಮದ್ಯೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಯಥಾಪ್ರಕಾರ ಸಾಲಗಾರನ ಪಟ್ಟ ಮಾತ್ರ ಶಾಶ್ವತ ವಾಗಿದೆ. ಈ ಸ್ಥಿತಿಯಲ್ಲಿ ವಾಣಿಜ್ಯ ಬೆಳೆ ಅಡಿಕೆ ತೋಟವನ್ನು ಕಷ್ಟಪಟ್ಟು ಉಳಿಸಿಕೊಂಡಿರುವ ಕೆಲವರು ಮಾತ್ರ ನೆಮ್ಮದಿಯನ್ನು ಕಾಣುತ್ತಿ zರೆ. ಕ್ಲಿಷ್ಟಕರ ಸಂದರ್ಬದಲ್ಲಿ ರಾಷ್ಟ್ರೀಯ ಹೆzರಿಗೆ ಬೈಪಾಸ್ ನಿರ್ಮಿಸಲು ಪಟ್ಟಣದ ಸುತ್ತಮುತ್ತ ಲಿನ ಬೆಲೆಬಾಳುವ ಜಮೀನು ವಶಪಡಿಸಿಕೊಳ್ಳಲು ಎಲ್ಲ ಸಿದ್ದತೆ ಕೈಗೊಳ್ಳಲಾಗಿದೆ. ಈಗಾಗಲೇ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ನೀಡಲಾದ ಜಗವನ್ನು ಇಂಡೀಕರಣದ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಹಿಂದಿನ ಸರ್ಕಾರ ಯೋಜನೆ ರೂಪಿಸಿದ್ದು ಇದೀಗ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಲ್ಲಿ ನೀಡಿದ ಪರಿಹಾರ ಮುಗ್ದ ರೈತರು ಅರಿವಿಲ್ಲದೆ ವೃಥಾ ಖರ್ಚು ಮಾಡಿ ಯಥಾಪ್ರಕಾರ ಬೆಂಗಳೂರಿನ ದೊಡ್ಡ ಆಸ್ಪತ್ರೆ, ಕಾರ್ಖಾನೆಗಳಲ್ಲಿ ರಕ್ಷಣಾ ಸಿಬ್ಬಂದಿಯಾಗಿ ಬಾಗಿಲು ಕಾಯುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ತಾವು ಅಭಿವೃದ್ದಿಯನ್ನು ವಿರೋಧಿಸುವ ಜಯಮಾನ ಹೊಂದಿಲ್ಲ. ಆದರೆ ಅಭಿವೃದ್ದಿಯ ನೆಪದಲ್ಲಿ ರೈತರ ಕೈಕಾಲು ಮುರಿದು ಕೂರಿಸದಂತೆ ಆಕ್ರೋಶ ವ್ಯಕ್ತಪಡಿಸಿದ ಅವರು, ಏತ ನೀರಾವರಿ ಯೋಜನೆಯಡಿ ಸಾವಿರಾರು ಕೋಟಿ ವ್ಯಯಿಸಿ ಇದೀಗ ರೈತರ ಭೂಮಿ ವಶಪಡಿಸಿ ಕೊಳ್ಳುವುದು ಅನ್ಯಾಯದ ಪರಮಾವಧಿ. ಕೆಲ ರೈತರಿಗೆ ಮಾತ್ರ ನೋಟೀಸ್ ನೀಡಿ ಸಣ್ಣ ರೈತರ ಜಮೀನು ವಶಪಡೆದು ಒಡೆದಾಳುವ ನೀತಿ ಅನುಸರಿಸ ದಂತೆ ತಿಳಿಸಿದ ಅವರು, ಈ ಬಗ್ಗೆ ಸೋಮವಾರ ನೆಲವಾಗಿಲು ಗ್ರಾ.ಪಂ ಯಲ್ಲಿ ಸಭೆ ಆಯೋಜಿಸಿ ಉಪವಿಭಾಗಾಧಿಕಾರಿ, ಹೆzರಿ ಅಭಿವೃದ್ದಿ ಪ್ರಾಧಿಕಾರದ ಎಇಇ, ತಹಸೀಲ್ದಾರ್ ಮತ್ತಿತರರು ಹಾಜರಾಗದೆ ರೈತರನ್ನು ಮೋಸ ಗೊಳಿಸುವ ಸಂಚು ರೂಪಿಸಲಾಗಿದೆ ಈ ದಿಸೆಯಲ್ಲಿ ಪಕ್ಷಾತೀತವಾಗಿ ಎಲ್ಲ ರೈತರ ಪರವಾಗಿ ಹೋರಾಟಕ್ಕೆ ಬೆಂಬಲ ಘೋಷಿಸಿದರು.
ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್ ಈಶ್ವರಪ್ಪ ಮಾತನಾಡಿ, ಸೋಮವಾರ ನೆಲವಾಗಿಲು ಗ್ರಾ.ಪಂ ಕಚೇರಿಯಲ್ಲಿ ಆಯೋಜಿಸ ಲಾದ ಸಭೆಗೆ ಪಟ್ಟಣದ ಸುತ್ತಮುತ್ತಲಿನ ೩೦೦ಕ್ಕೂ ಅಧಿಕ ರೈತರು ಧಾವಿಸಿದ್ದು ಕಡ್ಡಾಯವಾಗಿ ಹಾಜರಾಗಬೇಕಾದ ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಿಂದ ಬೇಸತ್ತು ಸಭೆ ಬಹಿಷ್ಕರಿಸಿ ವಾಪಾಸಾಗಿzಗಿ ತಿಳಿಸಿದರು.
ಕಳೆದ ೩ ತಿಂಗಳ ಹಿಂದೆ ನಡೆದ ಸಭೆಯಲ್ಲಿ ಜಮೀನು ನೀಡಲು ಅಸಾದ್ಯ ಎಂದು ಖಂಡತುಂಡವಾಗಿ ಒಕ್ಕೊರಲಿನಿಂದ ತಿಳಿಸಿದ್ದು ಪಟ್ಟಣದ ಸುತ್ತಮುತ್ತಲಿನ ೫ ಕಿ.ಮೀ ವ್ಯಾಪ್ತಿ ಯಲ್ಲಿ ಜಮೀನು ವಶಪಡೆಯದಂತೆ ಸ್ಪಷ್ಟವಾದ ಕಾಯ್ದೆಯನ್ನು ಧಿಕ್ಕರಿಸಲಾ ಗುತ್ತಿದೆ ಬೈಂದೂರು ರಾಣೆ ಬೆನ್ನೂರು, ಬೈಂದೂರು ಹೊಸಪೇಟೆ ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದು ಕಾಮಗಾರಿ ಕುರುಹು ಇಲ್ಲ ಇದೀಗ ಹೊಸ ಯೋಜನೆ ಸಿದ್ದವಾಗಿದೆ. ರಕ್ತ ಕೊಟ್ಟೇವು ಜಮೀನು ಮಾತ್ರ ನೀಡಲು ಸಾಧ್ಯವಿಲ್ಲ ಎಲ್ಲ ಹೋರಾಟಕ್ಕೆ ಸಿದ್ದವಿರುವುದಾಗಿ ಘೋಷಿಸಿದರು.
ಪುರಸಭಾ ಮಾಜಿ ಸದಸ್ಯ ಶಿವರಾಂ ಪಾರಿವಾಳದ ಮಾತ ನಾಡಿ, ಯಾವುದೇ ಯೋಜನೆ ಯಲ್ಲಿ ಕ್ಷೇತ್ರದ ಶಾಸಕರು, ಸಂಸದರ ಗುಂಟೆ ಜಮೀನಿಗೆ ಧಕ್ಕೆಯಾಗು ವುದಿಲ್ಲ ಅವರು ಎಕರೆ ಜಮೀನು ನೀಡಲಿ ನಾವು ೨ ಎಕರೆ ನೀಡಲು ಸಿದ್ದ ಎಂದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಪುರಸಭಾ ಮಾಜಿ ಸದಸ್ಯ ರೇವಣಸಿದ್ದಪ್ಪ ಸಿರಿಯಣ್ಣಾರ ಹಿರಿಯ ರೈತ ಮುರ್ಲೇರ ಶಿವಪ್ಪ, ಜಯಲಿಂಗಪ್ಪ, ಗಣೇಶ ಪಾರಿವಾಳದ, ಚಿಟ್ಟೂರು ಬಸವರಾಜಪ್ಪ, ಮಂಜು ಜಮೀನ್ದಾರ್, ಗುಡ್ಡಳ್ಳಿ ಕೃಷ್ಣ ಸಹಿತ ಹಲವರು ಉಪಸ್ಥಿತರಿದ್ದರು.