ಲಂಚ ನೀಡಬೇಡಿ; ಚಂದಾ ಕೇಳಬೇಡಿ; ತಾಪಂ ಇಒ ನಡೆಗೆ ಸಾರ್ವಜನಿಕರ ಮೆಚ್ಚುಗೆ…
ಹೊನ್ನಾಳಿ: ಕೈತುಂಬಾ ಸಂಬಳ, ನಿಗದಿತ ಅವಧಿಯ ಕೆಲಸ, ಸಾಕಷ್ಟು ಸೌಲಭ್ಯಗಳಿದ್ದರೂ ಸರ್ಕಾರಿ ಅಧಿಕಾರಿಗಳು ಲಂಚದ ಹಣಕ್ಕೆ ಕೈಚಾಚು ವುದು ಇತ್ತೀಚೆಗೆ ಜಸ್ತಿಯಾಗುತ್ತಲೇ ಇದೆ.
ಸರ್ಕಾರಗಳು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದರೂ ಅವುಗಳ ಅನುಷ್ಠಾನ ಅಸಾಧ್ಯ ಎನ್ನುವ ಮಟ್ಟಿಗೆ ಪರಿಸ್ಥಿತಿಗಳು ನಿರ್ಮಾಣವಾಗಿವೆ. ಹಣ ಕೊಡದೇ ಇದ್ದರೆ ತಮ್ಮ ಕೆಲಸವೇ ಆಗುವುದಿಲ್ಲ ವೇನೋ ಎಂಬ ಮನಸ್ಥಿತಿಗೆ ಸಾರ್ವಜನಿಕರು, ರೈತ ಮತ್ತು ಕಾರ್ಮಿಕ ವರ್ಗ ಬಂದಾ ಗಿದೆ. ತಮ್ಮ ಕೆಲಸಕ್ಕೆ ಅರ್ಜಿ ಹಾಕು ವಾಗಲೇ ಅಧಿಕಾರಿಗಳ ಕೈಬಿಸಿ ಮಾಡುವ ಪರಿಪಾಠ ಬೆಳೆಯುವ ಮಟ್ಟಿಗೆ ಭ್ರಷ್ಟಾಚಾರ ನಮ್ಮ ಸಮಾಜದಲ್ಲಿ ಬೇರೂರಿಬಿಟ್ಟಿದೆ.
ಇದಕ್ಕೆ ಅಪವಾದವೆಂಬಂತೆ ಇತ್ತೀಚೆಗೆ ಹೊನ್ನಾಳಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹ ಣಾಧಿಕಾರಿಗಳಾಗಿ ಬಂದಿರುವ ಎಚ್.ವಿ. ರಾಘವೇಂದ್ರ ಅವರು ತಮ್ಮ ಅಧಿಕಾರಾವಧಿಯಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ತಂದು ಸಾರ್ವಜನಿಕ ವಲಯ ಗಳಲ್ಲಿ ಮೆಚ್ಚುಗೆ ಪಾತ್ರರಾಗಿzರೆ. ನ್ಯಾಮತಿ ತಾಪಂಗೂ ಹೆಚ್ಚುವರಿ ಇಒ ಆಗಿ ಕೆಲಸ ನಿರ್ವಹಿಸುತ್ತಿzರೆ.
ತಮ್ಮ ಕಛೇರಿಯ ಮುಂಭಾಗ ದಲ್ಲಿ ಮತ್ತು ಕಛೇರಿಯ ಒಳಗಡೆ ನಿಮ್ಮ ಕೆಲಸವಾದ ನಂತರ ಬೇರೆಯವರಿಗೆ ಅವಕಾಶ ಮಾಡಿ ಕೊಡಿ- ಲಂಚ ನೀಡಬೇಡಿ, ಚಂದಾ ಕೇಳಬೇಡಿ ಈ ಬೋರ್ಡ್ ಅಳವಡಿಸಿದ್ದು ಇವರ ಈ ದಿಟ್ಟ ಕ್ರಮದಿಂದ ಸಾರ್ವಜನಿಕರು, ರೈತ ಮತ್ತು ಕಾರ್ಮಿಕ ವರ್ಗದವರು ಈ ಭೀಕರ ಬರಗಾಲದಲ್ಲಿ ನಿಟ್ಟುಸಿರು ಬಿಡುವಂತಾಗಿದೆ.
ಇಂತಹ ಕ್ರಮವನ್ನು ಎ ಇಲಾಖೆಗಳ ಅಧಿಕಾರಿಗಳು ತೆಗೆದುಕೊಂಡರೆ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತು ಹಾಕಬ ಹುದು. ಹಿಂದಿನ ಸರ್ಕಾರದ ಅವಧಿಯಲ್ಲಿ ತಾಪಂ ಸೇರಿದಂತೆ ಬಹುತೇಕ ಎ ಸರ್ಕಾರಿ ಕಛೇರಿ ಗಳಲ್ಲೂ ಸಾರ್ವಜನಿಕರ ಕೆಲಸಗಳು ಸರಿಯಾಗಿ ಆಗದೇ ದೊಡ್ಡಮಟ್ಟ ದಲ್ಲಿ ಭ್ರಷ್ಟಾಚಾರ ತಾಂಡವಾಡುವು ದರ ಜೊತೆಗೆ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದ್ದವು ಎಂಬ ದೂರುಗಳು ಪದೆ-ಪದೇ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದವು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ರಾಘವೇಂದ್ರ ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿ, ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗದಿದ್ದರೂ ತಾವು ಪ್ರಾಮಾಣಿಕ ಪ್ರಯತ್ನ ಮಾಡಿ ರೈತರಿಗೆ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅವರ ಕೆಲಸ ಕಾರ್ಯಗಳನ್ನು ಸುಗಮವಾಗಿ ನಿಯಮಾನುಸಾರ ಸಕಾಲದಲ್ಲಿ ಮಾಡಿಕೊಡಲು ಎ ಅಗತ್ಯ ಕ್ರಮಗಳನ್ನು ತೆಗೆದು ಕೊಂಡಿರುವುದಾಗಿ ತಿಳಿಸಿದರು.
ಈ ವರ್ಷ ಬರಗಾಲ ತಲೆ ದೋರಿದ್ದು ನರೇಗಾ ಯೋಜನೆ ಯಡಿ ಬರಗಾಲ ತಡೆಗಟ್ಟಲು ಕೂಲಿ ಕಾರ್ಮಿಕರಿಗೆ ಹೆಚ್ಚಿನ ಕೆಲಸ ನೀಡಲು ಕ್ರಮ ಜರುಗಿಸಲಾಗುವುದು. ಬರಗಾಲ ತಡೆಗಟ್ಟಲು ಮಳೆ ನೀರು ಇಂಗುವಿಕೆ, ಅಂತರ್ಜಲ ಹೆಚ್ಚಳ ಮತ್ತು ಮಣ್ಣಿನ ಸವಕಳಿಯನ್ನು ತಡೆಗಟ್ಟಲು ರೈತ ಸಮುದಾಯಕ್ಕೆ ಅನುಕೂಲವಾಗುವಂತಹ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ವರ್ಷಕ್ಕೆ ೧೦೦ ಮಾನವ ದಿನಗಳಲ್ಲಿ ದಿನಕ್ಕೆ ೩೧೬ ರೂ.ಗಳಂತೆ ಕೆಲಸ ಮಾಡಲು ಅವಕಾಶವಿದ್ದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ ಅವರು ರಾಜ್ಯದಲ್ಲಿ ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿಗೆ ೫೦ ಮಾನವ ದಿನಗಳಿಗೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದು ಶೀಘ್ರದಲ್ಲಿಯೇ ೧೫೦ ಮಾನವ ದಿನಗಳು ಲಭ್ಯವಾಗಿ ಕೂಲಿ ಕಾರ್ಮಿಕರ ಕೈಗೆ ಕೆಲಸ ಲಭ್ಯವಾಗಲಿದೆ ಎಂದು ತಿಳಿಸಿದರು.
ವಾರಕ್ಕೊಂದು ಪಂಚಾಯಿತಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆ ಗಳನ್ನು ಬಗೆಹರಿಸಲು ಚಿಂತನೆ ನಡೆಸಿದ್ದು ಯಾರಾದರೂ ಲಂಚದ ಹಣಕ್ಕೆ ಬೇಡಿಕೆಯಿಟ್ಟರೆ ನೇರವಾಗಿ ತಮ್ಮ ಗಮನಕ್ಕೆ ತಂದರೆ ಸಮಸ್ಯೆ ಬಗೆಹರಿಸುವುದರ ಜೊತೆಗೆ ಅಂತಹ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.
ಬರಗಾಲವಿರುವ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಗುಳೆ ಹೋಗದೇ ಅರ್ಜಿ ನಮೂನೆ-೬ ರಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿ ನರೇಗಾ ಯೋಜನೆಯಡಿ ಕೆಲಸ ಮಾಡು ವಂತೆ ಮನವಿ ಮಾಡಿzರೆ.