ತಾಜಾ ಸುದ್ದಿಲೇಖನಗಳು

ಕತ್ತಲೆ ಕಳೆದು ಬೆಳಕಿನ ಹಣತೆ ಬೆಳಗುವ ದೀಪಾವಳಿ…

Share Below Link

ಬೆಳಕಿನ ಹಬ್ಬ ದೀಪಾವಳಿ ದೀಪಗಳ ಹಬ್ಬ, ಹಟ್ಟಿಯ ಹಬ್ಬ, ಬೆಳಕಿನ ಹಬ್ಬ ಹೀಗೆ ವಿವಿಧ ರೀತಿಗಳಲ್ಲಿ ಕರೆಯುವ ವಾಡಿಕೆಯಿದೆ. ಹಬ್ಬ ಬಂತೆಂದರೆ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ಪಟಾಕಿಗಳ ನೆನಪು ಬರುವುದು. ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂಗಮಯ ಎಂಬ ಉಪನಿಷತ್ ವಾಣಿಯಂತೆ ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆ, ಮೃತ್ಯುವಿನಿಂದ ಅಮೃತದೆಡೆ ಒಯ್ಯುವ ಬೆಳಕಿನ ಹಬ್ಬ ದೀಪಾವಳಿ.
ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೆ ಪ್ರಾಂತ ಭೇದವಿಲ್ಲದೆ ಎ ಹಿಂದೂಗಳು ಬಂಧು- ಬಾಂಧವ ರೊಂದಿಗೆ ಉತ್ಸಾಹದಿಂದ ಆಚರಿಸುವ ದೊಡ್ಡ ಹಬ್ಬ ದೀಪಾವಳಿ. ಈ ಹಬ್ಬದ ವೇಳೆಗೆ ಮುಂಗಾರು ಬೆಳೆ ಧಾನ್ಯ, ಲಕ್ಷ್ಮಿಯ ರೂಪದಲ್ಲಿ ರೈತನ ಕೈ ಸೇರುತ್ತದೆ. ಮನೆ-ಮನೆಯ, ಮನ -ಮನದ ಕತ್ತಲೆಯನ್ನು ಹೋಗಲಾಡಿಸುವ ಈ ಹಬ್ಬದಲ್ಲಿ ಬಂಧು – ಬಾಂಧವರ ಸುಮಧುರ ಮಿಲನ, ನವ ವಸಧಾರನ, ಸುಗ್ರಾಸ ಭೋಜನ ಎಲ್ಲವನ್ನು ಕಾಣಬಹುದು ಇಂತಹ ಸಂತೋಷದ ಸಮಯದಲ್ಲಿ ಬಲಿಚಕ್ರವರ್ತಿ ತನ್ನ ರಾಜ್ಯವನ್ನು ನೋಡಿ ಆನಂದ ಗೊಳ್ಳುವುದರಲ್ಲಿ ಸಂದೇಹವಿಲ್ಲ.


ಚಂದ್ರೋದಯದವರೆಗೆ ತಿಥಿ ವ್ಯಾಪ್ತಿ ಇರುವ ಆಶ್ವೀಜ ಬಹುಳ ಚತುರ್ದಶಿಯಂದು ನರಕ ಬೀರು ಗಳಾದ ಮನುಷ್ಯರು ಎಳ್ಳೆಣ್ಣೆಯಿಂದ ಅಭ್ಯಂಜನ ಸ್ನಾನ ಮಾಡಿದ ನಂತರ ಹಣೆಗೆ ತಿಲಕಾದಿಗಳನ್ನಿಟ್ಟು ಕಾರ್ತಿಕ ಸ್ಥಾನವನ್ನು ಮಾಡಬೇಕು. ನಂತರ ಯುವ ತರ್ಪಣಾದಿ ಗಳನ್ನು ಕೊಡಬೇಕು. ಸಂಜೆ ಮನೆ, ಮಠ, ದೇವಾಲಯ, ಗೋಶಾಲೆ ಮುಂತಾದೆಡೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ದೀಪಗಳ ಆವಲೆ ಎಂದರೆ ದೀಪಗಳ ಸಾಲು ರಾರಾಜಿಸಬೇಕು. ದೀಪಾವಳಿಯಲ್ಲಿ ದೀಪ ಎಂದರೆ ಪಾಪ ಉರಿದಂತೆ. ಆ ಮನೆಯಲ್ಲಿ ಅಪಮೃತ್ಯು ಇರುವುದಿಲ, ಸಕಲ ಸಂಪತ್ತು ನೆಲೆಸುತ್ತದೆ. ಮಹಾಲಕ್ಷ್ಮಿಯು ಜ್ಯೋತಿ ಸ್ವರೂಪಿಣಿ ಆದ್ದರಿಂದ ದೀಪಾವಳಿಯಲ್ಲಿ ಲಕ್ಷ್ಮೀಪೂಜೆಗೆ ಅಷ್ಟೇ ಮಹತ್ವದ ಸ್ಥಾನ.
ನರಕ ಚತುರ್ದಶಿ ಆಶ್ವೀಜ ಬಹುಳ ೧೪ನೆಯ ದಿನವಾದ ಈ ನರಕಚತುರ್ದಶಿಯ ಬಗೆಗೆ ಪೌರಾಣಿಕ ಕಥೆ ಹೀಗಿದೆ. ನರಕಾಸುರ ಭೂದೇವಿಯ ಪುತ್ರ, ಕಾಮರೂಪ (ಅಸ್ಸಾಂ) ದೇಶದ ಪ್ರಾಜ್ಯೋತಿಷಪುರ ಅವನ ರಾಜಧಾನಿ. ಮಹಾ ಬಲಿಷ್ಠನಾದ ಈತನು ತಪಸ್ಸಿನಿಂದ ಬ್ರಹ್ಮನನ್ನು ಒಲಿಸಿಕೊಂಡು ಅವನ ಅನುಗ್ರಹ ದಿಂದ ದೇವಾಸುರರನ್ನೆಲ್ಲ ಜಯಿಸಿದ. ಭೂಲೋಕದ ರಾಜರನ್ನೆ ಗೆದ್ದು, ಅವರ ೧೬ ಸಾವಿರ ಸುಂದರ ಕನ್ಯೆಯರನ್ನು ತನ್ನ ಸೆರೆಯಲ್ಲಿಟ್ಟಿದ್ದ ತಷಟ್ರವಿನ ಮಗಳಾದ ಚತುರ್ದಶಿ ಯನ್ನು ಅಪಹರಿಸಿದ್ದ. ದೇವತೆಗಳ ತಾಯಿಯಾದ ಅದಿತಿಯ ಕರ್ಣ ಕುಂಡಲಗಳನ್ನು ಕಿತ್ತು ತಂದಿದ್ದ, ಇಂದ್ರನ ಪತ್ರ ಚಾಮಾರಗಳನ್ನು ವಶಪಡಿಸಿಕೊಂಡಿದ್ದ ದೇವತೆಗಳ ಪ್ರಾರ್ಥನೆಯ ಮೇರೆಗೆ ಲೋಕ ಕ್ಷೇಮಕ್ಕಾಗಿ ಅವತರಿಸಿದ. ಶ್ರೀಕೃಷ್ಣನು ನರಕಾಸುರನನ್ನು ಆಶ್ವೀಜ ಕೃಷ್ಣ ಚತುರ್ದಶಿಯ ನಡುರಾತ್ರಿಯಲ್ಲಿ ಸಂಹರಿಸಿದ. ಅವನ ಸೆರೆಯಲ್ಲಿದ್ದ ಚತುರ್ದಶಿಯನ್ನು ಮತ್ತು ೧೬ ಸಾವಿರ ರಾಜಕುಮಾರಿಯರನ್ನು ಬಿಡಿಸಿ, ದೇವತೆಗಳ ಅಸಗಳನ್ನು ಆದಿತಿಯ ಕರ್ಣಕುಂಡಲಗಳನ್ನು ಹಿಂದಿರುಗಿಸಿದ, ನರಕಾಸುರನನ್ನು ಜಯಿಸಿದ ಶ್ರೀಕೃಷ್ಣನಿಗೆ ಸೆರೆ ಮುಕ್ತರಾದ ನಾರಿಯರೆಲ್ಲ ಆರತಿ ಬೆಳಗಿದರು. ನರಕಾಸುರನ ತಾಯಿ ಭೂದೇವಿಯ ಅಪೇಕ್ಷೆಯಂತೆ ವರ್ಷದಮ್ಮೆ ಅವನನ್ನು ಸ್ಮರಿಸುವ ರೀತಿಯಲ್ಲಿ ಶ್ರೀಕೃಷ್ಣನು ಹಬ್ಬವನ್ನು ನೆಲೆಗೊಳಿಸಿದನು. ಹೀಗೆ ನರಕ ಸಂಹಾರ ಮತ್ತು ಚತುರ್ದಶಿಯು ಬಂಧ ಮುಕ್ತವಾದ ದಿನವೇ ನರಕ ಚತುರ್ದಶಿ. ಇಲ್ಲಿ ಒಂದು ಸಾಂಕೇತಿಕವಾದ ಅರ್ಥವನ್ನು ಕಾಣಬಹುದು ನರಕ ಎಂದರೆ ಸಾಮಾನ್ಯವಾಗಿ ಕತ್ತಲೆ, ಕಷ್ಟ, ಪೀಡೆ , ಅeನ ಎಂದು ಅರ್ಥ ಮಾಡಬಹುದು. ಅಲ್ಲಿ ತಾಮಸ ಗುಣಕ್ಕೆ ಪ್ರಾಧಾನ್ಯ ಸಂಭವಾಮಿ ಯುಗೇ ಯುಗೇ….. ಎಂಬಂತೆ ಸಜ್ಜನರ ರಕ್ಷಣೆಗಾಗಿ ಅವತರಿಸಿದ ಶ್ರೀಕೃಷ್ಣ ಅeನಾಂಧಕಾರ ರೂಪದ ನರಕನನ್ನು ನಿಗ್ರಹಿಸಿದ. ಹಾಗೆಯೇ ಇಲ್ಲಿ ಚತುರ್ದಶಿ ಎನ್ನುವುದು ಯುದ್ಧಗೆ ಸಹ ಪರ್ಯಾಯವಾದ ಇನ್ನೊಂದು ಹೆಸರು ಶಿಕ, ಕಲ್ಪ, ವ್ಯಾಕರಣ, ನಿರುಕ್ತ, ಜ್ಯೋತಿಷ್ಯ, ಛಂದಸ್ಸು, ನಾಲ್ಕು ವೇದಗಳು ಧರ್ಮಶಾಸ, ಪುರಾಣ, ವೀಮಾಂಶ ತರ್ಕಗಳನ್ನು ೧೪ ವಿದ್ಯೆಗಳೆಂದು ಕರೆಯಲಾಗಿದೆ. ನರಕಾಸುರ ಅಪಹರಿಸಿದ ಚತುರ್ದಶಿ ಎಂದರೆ ಈ ೧೪ ವಿದ್ಯೆಗಳು ಮಾಯವಾಗಿ ಅeನಾಂಧಕಾರ ಎಲ್ಲೂ ತುಂಬಿದಾಗ ಶ್ರೀಕೃಷ್ಣ ಅವತರಿಸಿ ನರಕವನ್ನು ಕಳೆದು ವಿದ್ಯೆ ಪ್ರಸಾರ ಮಾಡಿದ ಸುದಿನವೆಂದು ಈ ದಿನವನ್ನು ಅರ್ಥೈಸಬಹುದು. eನದ ಸಂಕೇತವಾಗಿ ದೀಪವನ್ನು ಬೆಳಗುವ ಪದ್ಧತಿ ಬೆಳೆದು ಬಂದಿರಬಹುದು .


ದೀಪಾವಳಿ ಅಮಾವಾಸ್ಯೆ ಅಮಾವಾಸ್ಯೆಯ ಕಗ್ಗತ್ತಲೆಯ ಈ ರಾತ್ರಿ ದೀಪಗಳ ಸಾಲು ರಾರಾಜಿಸಿ ದಾಗ ಅದಕ್ಕೆ ಎಲ್ಲಿಲ್ಲದ ಕಾಂತಿ ತುಂಬುತ್ತದೆ. ಇದು ವಿಷ್ಣು- ಲಕ್ಷ್ಮಿಯರ ವಾರ್ಷಿಕ ಪುನರ್ಮಿಲನದ ದಿನ. ಆದ್ದರಿಂದ ಈ ದಿನ ಲಕ್ಷ್ಮೀ ಪೂಜೆಗೆ ಅತ್ಯಂತ ಪ್ರಶಸ್ತವಾದ ಮುಹೂರ್ತ. ಈದಿನ ಮುಂಜನೆ ಅರಳಿ, ಮಾವು, ಹತ್ತಿ, ಆಲ ಮತ್ತು ನೇರಳೆಗಳ ಪರಾಸ ಪಲ್ಲವ ಗಳಿಂದ ಕೂಡಿದ ನೀರಿನಲ್ಲಿ ಸ್ನಾನಮಾಡಬೇಕು. ಸಂಜೆ ತಳಿರು ತೋರಣಗಳಿಂದ ಲಕ್ಷ್ಮಿಯನ್ನು ಅಲಂಕರಿಸಿ ಪೂಜಿಸಬೇಕು. ಮಕ್ಕಳು ಪಟಾಕಿ ಸಿಡಿಮದ್ದು ಹಾರಿಸಿ ಸಂತೋಷವನ್ನು ಹೊರ ಹೊಮ್ಮಿಸುವರು. ವ್ಯಾಪಾರಸ್ಥರು ಲಕ್ಷ್ಮೀಪೂಜೆಗಾಗಿ ಮನೆ ಮಠ ಗಳನ್ನೆ ಸಿಂಗರಿಸುವದರಿಂದ ಈ ಹಬ್ಬ ಸಾಮಾಜಿಕ, ಧಾರ್ಮಿಕ ಎರಡು ದೃಷ್ಟಿಯಿಂದ ವಿಶೇಷ ಮಹತ್ವಪೂರ್ಣವಾಗಿದೆ.
ಬಲಿಪಾಡ್ಯಮಿ ಕಾರ್ತಿಕ ಶುದ್ಧ ಪ್ರತಿಪದೆಯ ದಿನ. ಮಹಾವಿಷ್ಣು ವಾಮನ ಅವತಾರ ತಾಳಿ, ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ಅಟ್ಟಿದನೆಂಬ ಪೌರಾಣಿಕ ಕಥೆ ಸುಪ್ರಸಿದ್ದ. ಬಲಿಯ ನೆನಪಿಗಾಗಿ ಹಿಟ್ಟಿನ ಇಲ್ಲವೇ ಗೋಮಿಯದ ಬಲಿಯ ಮೂರ್ತಿ ಮಾಡಿ ಪೂಜಿಸುವರು. ರಾಗಿ, ಭತ್ತ, ಗೋಧಿ, ಕಬ್ಬು ಮುಂತಾದವುಗಳ ತೆನೆಗಳನ್ನು ಹೂಮುಡಿಸಿ ಪೂಜಿಸುತ್ತಾರೆ.
ಬಲಿಚಕ್ರವರ್ತಿ ಮಹಾ ಧಾನ ವೀರ, ಮಹಾವಿಷ್ಣು ಭಕ್ತ, ಪ್ರಹ್ಲಾದನ ಮೊಮ್ಮಗನಾದ ಅವನು ಶೋಣಿತ ಪುರದಲ್ಲಿ ರಾಜ್ಯವಾಳುತ್ತಿದ್ದ ಅವನಲ್ಲಿರುವ ಸದ್ಗುಣಗಳನ್ನು ವಿಷ್ಣುವು ಮೆಚ್ಚಿದ್ದ, ಅಶ್ವಮೇಧ ಯಾಗದಲ್ಲಿ ಯಜ್ಞ ವೀಕ್ಷಿತನಾದ ಬಲಿಚಕ್ರವರ್ತಿ ಕೇಳಿದವರಿಗೆ ಕೇಳಿದ್ದನ್ನು ಕೊಡುವ ಸಂಕಲ್ಪ ಮಾಡಿದ್ದ. ವಾಮನ ರೂಪದಲ್ಲಿ ಅಲ್ಲಿಗೆ ಬಂದ ಭಗವಂತ ಅವನಲ್ಲಿ ಮೂರು ಹೆಜ್ಜೆ ಭೂಮಿ ಬೇಡಿದ. ಬಲಿ ಆಗಲಿ ಎಂದಾಗ ವಿಶ್ವಾತ್ಮನಾದ ದೇವನಿಗೆ ಆಕಾಶ ಒಂದನೇ ಹೆಜ್ಜೆ ಯಾದರೆ, ಭೂಮಿ ಇನ್ನೊಂದು ಹೆಜ್ಜೆಯಾಯಿತು, ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲೆಯೇ ಇಟ್ಟು ಪಾತಾಳಕ್ಕೆ ಅಟ್ಟಿದ, ಅವನ ಧಾನಶೂರತ್ವವನ್ನು ಮೆಚ್ಚಿದ ಮಹಾವಿಷ್ಣು ಬೇಕಾದವರ ವನ್ನು ಬೇಡು ಎಂದು ಆಗ ಬಲಿಯು ವರ್ಷದಲ್ಲಿ ಮೂರು ದಿನ ನನ್ನ ರಾಜ್ಯವನ್ನು ನೋಡುವ ಅವಕಾಶ ಕೊಡು ಎಂದ. ಈ ಮೂರು ದಿನ, ಯಾರು ದೀಪ ಬೆಳಗುತ್ತಾರೋ ಅವರ ಮನೆಯಲ್ಲಿ ನಿನ್ನ ಸಹ ಧರ್ಮಿಣಿ ಮಹಾಲಕ್ಷ್ಮಿಮಿ ಸ್ಥಿರವಾಗಿ ನೆಲಸಲಿ. ಹಾಗೆಯೇ ನನ್ನ ಮನೆಯ ಬಾಗಿಲಲ್ಲಿ ಸದಾ ನಿನ್ನ ಸಾನಿಧ್ಯವಿರು ಎಂದು ಬೇಡಿಕೊಂಡನು ಆಗ ಮಹಾವಿಷ್ಣು ತಥಾಸ್ತು ಎಂದ.
ಹೀಗೆ ತನ್ನ ಅಧಿಕಾರ ಕಳೆದುಕೊಂಡು ಆಸ್ತಿಕರ ಮನೆಗಳಲ್ಲಿ ಸದಾ ಲಕ್ಷ್ಮಿಯ ಸಾಧ್ಯವಿರುವಂತೆ ಕೇಳಿಕೊಂಡು ಪ್ರಜಹಿತ ಬಯಸಿದ ಮಹಾ ವ್ಯಕ್ತಿತ್ವ ಬಲಿಯದು. ಬಲಿಯನ್ನು ಇಕ್ಕಿ ಮೆಟ್ಟಿ ಅಲ್ಪದಲ್ಲಿ ಕಲ್ಪವನ್ನು ತೋರಿದ ದಿನವೇ ಬಲಿಪಾಡ್ಯಮಿ. ಈ ದಿನ ಜನರೆ ಹೊಸ ಬಟ್ಟೆಗಳನ್ನು ತೊಟ್ಟು, ಸಂತೋಷ – ಸಂಭ್ರಮಗಳಿಂದ ಬಲಿಯನ್ನು ಆರಾಧಿಸುತ್ತಾರೆ.
ಬಲಿಪಾಡ್ಯ ಇನ್ನೂ ಅನೇಕ ರೀತಿಯಿಂದ ಮಹತ್ವಪೂರ್ಣವಾಗಿದೆ. ದಕ್ಷಿಣದವರೆಗೆ ಯುಗಾದಿ ಇದ್ದಂತೆ, ಉತ್ತರ ಭಾರತದವರಿಗೆ ದೀಪಾವಳಿ ವರ್ಷದ ಆದಿಯ ಅತಿಸ್ರೇಷ್ಟ ಹಬ್ಬ. ಅಲ್ಲಿ ಬಳಕೆಯಲ್ಲಿರುವ ವಿಕ್ರಂ ಸಂವತ್ಸರ ಕಾರ್ತಿಕ ಪಾಂಡ್ಯದಿಂದ ಆರಂಭವಾಗುತ್ತದೆ. ಹೀಗಾಗಿ ಅವರಿಗೆ ಬಲಿಪಾಡ್ಯ ವರ್ಷಾರಂಭದ ದಿನ. ಈ ದಿನ ಲಂಕೆಯಿಂದ ಮರಳಿ ಬಂದ ಶ್ರೀರಾಮ ಪಟ್ಟಾಭಿಷೇಕಗೊಂಡ ದಿನ. ಹಾಗೆ ಪಾಂಡವರು ಅeತವಾಸ ಮುಗಿಸಿ ಪ್ರಕಟವಾದ ದಿನ.
ಭಾರತ ದೇಶದ ಬಲಿಷ್ಠ ಧರ್ಮ ಪ್ರಭುವಾದ ವಿಕ್ರಮನ ರಾಜಭಿಷೇಕ ಗೊಂಡ ದಿನ. ಶ್ರೀಕೃಷ್ಣನು ಗೋವರ್ಧನ ಪರ್ವತ ವನ್ನು ಎತ್ತಿ ಹಿಡಿದ ದಿನ, ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಇಂದು ಗೋವರ್ಧನ ಪೂಜೆ ಮಾಡಿ ಗೋವುಗಳನ್ನು ಅಲಂಕರಿಸಿ, ಹಾಲು ಹಿಂಡುವ ಪಾತ್ರೆ, ಕಡಗೋಲು ಗಳನ್ನು ಪೂಜಿಸಿ, ಗೋಶಾಲೆಯನ್ನು ದೀಪಗಳಿಂದ ಬೆಳಗಿ, ಹಸುಗಳಿಗೆ ಅಕ್ಕಿ, ಬೆಲ್ಲ, ತಿಂಡಿ -ತಿನಿಸುಗಳನ್ನು ನೀಡಿ ಅವುಗಳನ್ನು ಬೆಚ್ಚಿಸಿ ಬಿಡುವುದು ವಾಡಿಕೆ.
ಒಟ್ಟಾರೆ ಪ್ರಾಚೀನಕಾಲದ ಭಾಗ್ಯದ ಸ್ಮಾರಕವಾಗಿ, ಭವಿಷ್ಯತ್ಕಾಲದ ಸುಖದ ಸಂಕೇತ ವಾಗಿ, ವರ್ತಮಾನಕಾಲದ ಸಂಪತ್ತಿನ ಸ್ಮರಣೆಯಾಗಿ, ಆತ್ಮೋನ್ನತಿಯ ಮಾರ್ಗವಾಗಿ, ಅeನವನ್ನು ಹೊಡೆದೋಡಸಿ. ಸುeನವನ್ನು ಪಡೆಯುವ ಕುರುಹ ಆಗಿ, ಬಲೀಂದ್ರನಾಥ ತ್ಯಾಗ ಜೀವಿಯ ಸವಿನೆನಪಿಗಾಗಿ ಆಚರಿಸುವ ಬೆಳಕಿನ ಹಬ್ಬವೇ ದೀಪಾವಳಿ.
ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ