ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಕ್ರಮ ಅನುಸರಿಸಲು ಜಿಲ್ಲಾ ಎಸ್‌ಪಿ ಸೂಚನೆ

Share Below Link

ಶಿವಮೊಗ್ಗ: ಕೈಗಾರಿಕಾ ಪ್ರದೇಶದಲ್ಲಿ ಸುರಕ್ಷತೆ ದೃಷ್ಠಿಯಿಂದ ಉದ್ಯಮಿಗಳು ಎಲ್ಲ ರೀತಿ ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಪೊಲೀಸ್ ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ಕುಮಾರ್ ಹೇಳಿದರು.
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಜಿ ರಕ್ಷಣಾಧಿಕಾರಿಗಳೊಂದಿಗೆ ಕೈಗಾರಿಕೋದ್ಯಮಿ ಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗಾರಿಕಾ ಪ್ರದೇಶವು ಸಾವಿರಾರು ಕುಟುಂಬ ಗಳಿಗೆ ಉದ್ಯೋಗ ನೀಡುವ ಮೂಲಕ ಜೀವನ ರೂಪಿಸಿಕೊಳ್ಳು ವಂತೆಮಾಡಿದೆ. ಎಲ್ಲ ಉದ್ಯಮಿಗಳ ಸೇವೆಯು ಸಾರ್ಥಕತೆಯಿಂದ ಕೂಡಿದೆ. ಶಿವಮೊಗ್ಗ ಜಿಯ ಆರ್ಥಿಕ ಶಕ್ತಿಸಾಮಾರ್ಥ್ಯ ವೃದ್ಧಿಸು ವಲ್ಲಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಕೊಡುಗೆ ಬಹಳಷ್ಟಿದೆ ಎಂದು ತಿಳಿಸಿದರು.
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುರಕ್ಷತೆ ದೃಷ್ಠಿಯಿಂದ ಯಾವುದೇ ಮಾಹಿತಿ, ಘಟನೆ ನಡೆದರೂ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ತುರ್ತು ಸಂದರ್ಭಗಳಲ್ಲಿ ಹತ್ತಿರದ ಠಾಣೆಯ ಸಂಖ್ಯೆ ಅಥವಾ ೧೧೨ಕ್ಕೆ ಕರೆಮಾಡಿ ಕೂಡಲೇ ಮಾಹಿತಿ ನೀಡಬೇಕು. ಅಪರಾಧ ಕೃತ್ಯಗಳನ್ನು ನಿಯಂತ್ರಿ ಸುವ ದೃಷ್ಠಿಯಿಂದ ಪೊಲೀಸ್ ಇಲಾಖೆ ಸಂಪೂರ್ಣ ಕ್ರಮವಹಿಸಲಿದೆ ಎಂದರು.
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಸಂಸ್ಥೆಯ ಅಧ್ಯಕ್ಷ ಎಂ.ಎ. ರಮೇಶ್ ಹೆಗ್ಡೆ ಅವರು ಮಾತ ನಾಡಿ, ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕೆಲಸಗಾರರು ಓಡಾಟ ಮಾಡುವುದರಿಂದ ಪೊಲೀಸ್ ಔಟ್ ಪೋಸ್ಟ್ ಅವಶ್ಯಕತೆ ಇದೆ. ಈ ಬಗ್ಗೆ ಗೃಹಸಚಿವರ ಗಮನಕ್ಕೂ ತರಲಾಗಿದೆ. ಮುಂದಿನ ದಿನಗಳಲ್ಲಿ ಶೀಘ್ರ ಪೊಲೀಸ್ ಔಟ್ ಪೋಸ್ಟ್ ತೆರೆಯಲು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಕೈಗಾರಿಕಾ ಪ್ರದೇಶದ ಚಲನವಲನಗಳ ಬಗ್ಗೆ ಗಮನ ಹರಿಸಲಾಗುತ್ತಿದೆ. ಅಪರಾಧ ಕತ್ಯಗಳ ನಿಯಂತ್ರಣ ದೃಷ್ಠಿಯಿಂದ ಸಿಸಿ ಕ್ಯಾಮೆರಾ ಅಳವಡಿಸಿರುವುದು ಉಪಯುಕ್ತವಾಗಲಿದೆ. ಕೈಗಾರಿಕಾ ಉದ್ಯಮಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಸಿದರು.
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಸಂಸ್ಥೆಯ ಕಾರ್ಯದರ್ಶಿ ಕಿರಣ್ ಕುಮಾರ್, ನಿರ್ದೇಶಕ ಕೆ.ವಿ.ನಾರಾಯಣ, ಡಿ.ಜಿ. ಬೆನಕಪ್ಪ, ಪರಮಶೇಖರ್, ಎಂ.ರಾಜು, ಎಂ.ಎನ್.ಸುರೇಶ್, ಡಿ.ಬಿ.ಅಶೋಕ್, ವಿಶ್ವೇಶ್ವರಯ್ಯ, ನಂದನ್, ಜೈಕರ್, ಶಾಂತಪ್ಪ ಮತ್ತಿತರರು ಉಪಸ್ಥಿತರಿದ್ದರು.