ಸೋಲಾರ್ ದೀಪಗಳ ವಿತರಣೆ…
ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ಶೇಕಡ ೨೪.೧ ರ ಯೋಜನೆಯಡಿಯಲ್ಲಿ ಪರಿಶಿಷ್ಟ ಜತಿ/ಪರಿಶಿಷ್ಟ ಪಂಗಡದ ಬಡ ಕುಟುಂಬದ ಮನೆಗಳಿಗೆ ಸೋಲಾರ್ ದೀಪ ವಿತರಿಸುತ್ತಿದ್ದು, ಇದರ ಅಂಗವಾಗಿ ಇಂದು ವಾರ್ಡ್ ನಂಬರ್ ೪ರ ಶಾಂತಿನಗರದ ಫಲಾನುಭವಿಗಳಿಗೆ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್ ಸೋಲಾರ್ ದೀಪಗ ಳನ್ನು ವಿತರಿಸಿದರು. ಸೋಲಾರ್ ದೀಪ ಅಂದರೆ ಒಂದು ಸೋಲಾರ್ ಪ್ಯಾನೆಲ್, ಚಾರ್ಜರ್ ಹಾಗೂ ಮೂರು ಲೈಟ್ ಗಳನ್ನು ಒಳಗೊಂ ಡಿದ್ದು, ಸುಮಾರು ೧೦ ಸಾವಿರ ರೂಪಾಯಿ ಬೆಲೆಬಾಳುವ ಸೋಲಾರ್ ಲೈಟ್ ಇದಾಗಿ ರುತ್ತದೆ. ೧೩ ಫಲಾನುಭವಿಗಳಿಗೆ ಸುಮಾರು ೧,೩೦.೦೦೦ ರೂ. ಬೆಲೆಯ ಸೋಲಾರ್ ಲೈಟ್ ಗಳನ್ನು ವಿತರಿಸಿದರು.
ಅರ್ಹ ಫಲಾನುಭವಿಗಳು ಮೇಲಿನ ದಾಖಲೆಗಳು ನೀಡಿ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಸೋಲಾರ್ ಲೈಟ್ ಅನ್ನು ಪಡೆದುಕೊಳ್ಳಿ ಎಂದು ತಿಳಿಸಿದರು, ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ಹೆಚ್.ಎಂ. ಮಹದೇವ್, , ಮಹಾನಗರ ಪಾಲಿಕೆ ಅಧಿಕಾರಿ ಗಳಾದ ಲೋಕೇಶಪ್ಪ, ರೇಣು, ಪ್ರದೀಪ್ ಹಾಗೂ ಸುದೀಪ್ ಉಪಸ್ಥಿತರಿದ್ದರು.