ಪೂಜ್ಯಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳಿಂದ ಸತತ 41ನೇ ಚಾತುರ್ಮಾಸ್ಯ ವ್ರತಕ್ಕೆ ಭಕ್ತಿಪೂರ್ವಕ ಆರಂಭ…
(ವಿಶೇಷ ವರದಿ: ರಾಕೇಶ್ ಡಿಸೋಜ)
ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮೂಲ ಶ್ರೀ ಶಾರದಾ ಪೀಠಮ್ನ ೭೧ನೇ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳು ಈ ವರ್ಷ ಸತತವಾಗಿ 41ನೇ ಚಾತುರ್ಮಾಸ್ಯ ವ್ರತವನ್ನು ಮೂಲ ಪೀಠವಾದ ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಆಚರಿಸುತ್ತಿದ್ದಾರೆ.
ಗುರುಪೂರ್ಣಿಮೆಯ ಶುಭಾರಂಭ ದೊಂದಿಗೆ, ಜುಲೈ 10ರ ನಾಳೆಯಿಂದ ಈ ವ್ರತಾರಂಭವಾಗಲಿದ್ದು, ಸೆಪ್ಟೆಂಪರ್ 7ರಂದು ಕೊನೆಗೊಳ್ಳಲಿದೆ. ಈ ವ್ರತವು ಶ್ರದ್ಧೆ, ಶಿಷ್ಟಾಚಾರ ಮತ್ತು ಆತ್ಮಚಿಂತನಕ್ಕೆ ಮೀಸಲಾದ ಕಾಲವಾಗಿದ್ದು, ಸಾವಿರಾರು ಭಕ್ತರನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಸೆಳೆಯಲಿದೆ.
ಚಾತುರ್ಮಾಸ್ಯ ಎಂದರೇನು?: ಹಿಂದೂ ಸಂಪ್ರದಾಯದಲ್ಲಿ ಚಾತು ರ್ಮಾಸ್ಯವ್ರತವು ನಾಲ್ಕು ತಿಂಗಳುಗಳ ತಪಸ್ಸಿನ ಅವಧಿ. ಮಳೆಗಾಲದಲ್ಲಿ ಸನ್ಯಾಸಿಗಳು ಯಾತ್ರೆ ಯನ್ನು ಸ್ಥಗಿತಗೊಳಿಸಿ, ಒಂದು ಸ್ಥಳದಲ್ಲಿ ವಾಸ ಮಾಡಿ, ತಪಸ್ಸು, ಧ್ಯಾನ, ಜಪ, ವೇದಾಧ್ಯ ಯನ ಮತ್ತು ಧರ್ಮೋ ಪದೇಶ ಮಾಡುವ ಪರಂಪರೆ ಇದಾಗಿದೆ. ಇದು ನೈತಿಕ ಶುದ್ಧೀಕ ರಣ ಹಾಗೂ ಮಾನಸಿಕ ಸ್ಥಿರತೆಯ ಕಾಲವಾ ಗಿದ್ದು, ಜನಸಾಮಾನ್ಯರಿ ಗೂ ಆಧ್ಯಾತ್ಮಿ ಕತೆಯ ಕಡೆಗೆ ಹರಿಯುವ ಪಥವಾಗುತ್ತದೆ.
ಈ ವರ್ಷವೂ ಕೂಡಲಿಯಲ್ಲಿ ಪವಿತ್ರ ತಿಂಗಳಿನಲ್ಲಿ ಚಾತುರ್ಮಾಸ್ಯ ಆಚರಣೆ ನಡೆಯಲಿದ್ದು, ಮಹಾಸಂಸ್ಥಾನದ ಶಿಷ್ಯವೃಂದ, ಸಿಬ್ಬಂದಿ ಹಾಗೂ ಭಕ್ತ ಸಮೂಹವು ಸಿದ್ಧತೆಗಳನ್ನು ಮಾಡಿಕೊಂಡಿದೆ.
ಪ್ರತಿ ದಿನ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು: ಮಂಗಳಾರತಿ, ವೇದಪಾರಾಯಣ, ಪ್ರವಚನಗಳು, ಶ್ರೀಚಕ್ರ ಪೂಜೆ, ಗಣಪತಿ ಹೋಮ, ರುದ್ರಾಭಿಷೇಕ, ಮಹಾಭಾರತ, ಉಪನಿಷತ್ತುಗಳ ಕುರಿತ ಆಳವಾದ ಪ್ರವಚನಗಳು, ವಿಶೇಷ ಹಬ್ಬದ ದಿನಗಳಲ್ಲಿ ಮಹಾಪೂಜೆಗಳು (ಗುರುಪೂರ್ಣಿಮೆ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ), ಭಕ್ತರಿಗಾಗಿ ಹವಿಷ್ಯಾನ್ನ ಪ್ರಸಾದ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಪ್ರತಿ ವರ್ಷವೂ ಸಹಸ್ರಾರು ಸಂಖ್ಯೆಯ ಭಕ್ತರು ಶ್ರೀಮಹಾಸ್ವಾಮಿಗಳ ಸಾನ್ನಿಧ್ಯಕ್ಕಾಗಿ ಕೂಡಲಿಗೆ ಆಗಮಿಸುತ್ತಾರೆ. ಈ ಬಾರಿ ಪೂಜ್ಯರು ವಿಶೇಷವಾಗಿ ೪೨ನೇ ಚಾತು ರ್ಮಾಸ್ಯ ವ್ರತದ ಸಂದರ್ಭ ದಾಗಿರುವುದರಿ ಂದ ಇನ್ನಷ್ಟು ಭಕ್ತಸಾಗರ ಕೂಡಲಿಗೆ ಹರಿದುಬರುವ ನಿರೀಕ್ಷೆಯಿದೆ. ಭಕ್ತರಿಗೆ ಅನ್ನದಾನ, ಧಾರ್ಮಿಕ ಸಮಾಲೋಚನೆ ಹಾಗೂ ಆಧ್ಯಾತ್ಮಿಕ ಪ್ರಶ್ನೋತ್ತರಗಳಂತಹ ಸೇವೆಗಳನ್ನು ಮಹಾಸಂಸ್ಥಾನ ಒದಗಿಸಲಿದೆ.
ಸಮಾಜಮುಖಿ ಚಟುವಟಿಕೆಗಳು: ಮಹಾಸಂಸ್ಥಾನದ ವತಿಯಿಂದ ಪ್ರವಚನ ಮಾಲಿಕೆ, ಪುಸ್ತಕ ವಿತರಣೆ, ಗೋಸಂರಕ್ಷಣೆ, ಬಡವರಿಗೆ ನೆರವು ಮುಂತಾದ ಹಲವಾರು ಸಮಾಜಮುಖಿ ಚಟುವಟಿಕೆಗಳೂ ಈ ಚಾತುರ್ಮಾಸ್ಯ ಕಾಲದಲ್ಲಿ ನಡೆಯಲಿವೆ. ಧಾರ್ಮಿಕತೆಯ ಜೊತೆಗೆ ಸಮಾಜ ಸೇವೆಗೂ ಮಹತ್ವ ನೀಡುವ ಮಹಾಸಂಸ್ಥಾನದ ದೃಷ್ಟಿಕೋಣ ಜನಮಾನಸದಲ್ಲಿ ಭಕ್ತಿಭಾವನೆಗೆ ಸ್ಫೂರ್ತಿ ನೀಡುತ್ತಿದೆ.
ಸನ್ಯಾಸ ಪರಂಪರೆಯ ಸ್ಮರಣೀಯ ಸಾಧನೆ : ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮೂಲ ಶ್ರೀ ಶಾರದಾ ಪೀಠಮ್ನ ೭೧ನೇ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿನಃ ರವರು ಕೂಡಲಿಯ ಮೂಲಮಠದಲ್ಲಿ ಜು.10ರಿಂದ ಸೆ.7ರವರೆಗೆ ಚಾತುರ್ಮಾಸ್ಯ ವ್ರತಾಚರಣೆ ನಡೆಸಲಿzರೆ. ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮಿನಃರವರ ಕರಕಮಲ ಸಂಜತರಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿನಃ ರವರ 41ನೇ ಚಾತುರ್ಮಾಸ್ಯ ವ್ರತಾಚರಣೆ ಇದಾಗಿದೆ. ಜು.10ರಿಂದ ಸೆ.7ರ ವರೆಗೆ ಎರಡು ತಿಂಗಳ ಕಾಲ ಕೂಡಲಿಯ ಶೃಂಗೇರಿ ಶಾರದಾ ಮೂಲ ಪೀಠಮ್ನಲ್ಲಿ ಧಾರ್ಮಿಕ ವ್ರತಾಚರಣೆಗಳು ನಡೆಯಲಿವೆ.
ಪೂಜ್ಯಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳಾದ ತಾವು ಸನ್ಯಾಸಗ್ರಹಣ ಮಾಡಿದ ಬಳಿಕ ಈವರೆಗೆ ನಿರಂತರವಾಗಿ ಪ್ರತಿವರ್ಷವೂ ಚಾತುರ್ಮಾಸ್ಯ ವ್ರತವನ್ನು ಆಚರಿಸುತ್ತಿರುವುದು ಅಪರೂಪದ ಸಾಧನೆ. ಈ ಬಾರಿ ಪೂಜ್ಯರು 41ನೇ ವರ್ಷದ ವ್ರತವೊಂದೇ ಭಕ್ತರ ನಂಬಿಕೆ, ಭಕ್ತಿ, ಶ್ರದ್ಧೆಯ ಪಾರಮ್ಯವನ್ನು ಪ್ರತಿಬಿಂಬಿಸುತ್ತಿದೆ.
ಶ್ರೀಮಠದಲ್ಲಿ ನಡೆಯಲಿರುವ ಈ ಎ ಕಾರ್ಯಕ್ರಮಗಳಲ್ಲಿ ಭಕ್ತರು ಸಕ್ರಿಯವಾಗಿ ಪಾಲ್ಗೊಂಡು ಶ್ರೀ ವಿದ್ಯಾಶಂಕರರ ಹಾಗೂ ಶ್ರೀ ಶಾರದಾಂಬೆಯವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಕಟಣೆ ಕೋರಿದೆ.
