ಶಿಕ್ಷಣದಿಂದ ವಂಚಿತವಾಗಿ ಅeನದ ಗೂಡಾಗಿ ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿ: ಕೆ.ಬಿ ಬ್ಯಾಳಿ
ಕುಕನೂರು:ಸಂಸ್ಥಾನ ಗವಿ ಮಠದ ೧೬ನೇ ಪೀಠಾಧಿಪತಿಗಳಾದ ಪರಮಪೂಜ್ಯ ಲಿಂಗೈಕ ಜಗದ್ಗುರು ಶ್ರೀ ಮರಿ ಶಾಂತವೀರ ಶಿವಯೋಗಿಗಳು ಅeನದ ಬರಡು ಭೂಮಿಯಲ್ಲಿ ಶಿಕ್ಷಣದ eನವನ್ನು ಬಿತ್ತನೆ ಮಾಡಿ ಯಶಸ್ವಿ ಬೆಳೆಯನ್ನು ತೆಗೆದು ಈ ಭಾಗದ ಜನರನ್ನು ಸೃಷ್ಟಿತ ಮತ್ತು ಸುಸಂಸ್ಕೃತ ಮಾಡಿದ ಮಹಾನ್ ಪುರುಷರು ಎಂದು ಸಾಹಿತಿ ಡಾ. ಕೆ.ಬಿ ಬ್ಯಾಳಿ ತಿಳಿಸಿದರು.
ಕುಕನೂರು ಪಟ್ಟಣದ ಶ್ರೀ ಗವಿಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠ ಪ್ರೀತ ಪರಂಪರೆಯ ೧೬ನೇ ಪೀಠಾ ಧಿಪತಿಗಳಾದ ಪರಮಪೂಜ್ಯ ಲಿಂಗೈಕ ಜಗದ್ಗುರು ಶ್ರೀ ಮರಿ ಶಾಂತವೀರ ಶಿವಯೋಗಿಗಳವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಸಾಹಿತಿ ಗಳಾದ ಕೆ.ಬಿ.ಬೆಳ್ಳಿ ಮಾತನಾಡುತ್ತಾ ಒಂದು ಕಾಲದಲ್ಲಿ ಹೈದರಾಬಾದ್ ಕರ್ನಾಟಕ (ಇಂದಿನ ಕಲ್ಯಾಣ ಕರ್ನಾಟಕ) ಪ್ರದೇಶವು ಶಿಕ್ಷಣ ದಿಂದ ವಂಚಿತವಾಗಿ ಅeನದ ಗೂಡಾಗಿ ಹಿಂದುಳಿದ ಪ್ರದೇಶ ವೆಂಬ ಹಣೆ ಪಟ್ಟಿಯನ್ನು ಹೊತ್ತು ಕೊಂಡಿತ್ತು ಅಂತಹ ಸಂದರ್ಭದಲ್ಲಿ ಈ ಭಾಗದ ಜನರಿಗೆ ಶಿಕ್ಷಣದ eನ ಗಂಗೆಯನ್ನೆ ಹರಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ತೆರೆಯುವು ದರೊಂದಿಗೆ ಅeನದ ಗೂಡಾ ಗಿದ್ದ ಪ್ರದೇಶದ ಜನರನ್ನು ಸುಶಿ ಕ್ಷಿತರನ್ನಾಗಿ ಮಾರ್ಪಡಿಸಿದ ಕೀರ್ತಿ ಕೇವಲ ಪೂಜ್ಯ ಜಗದ್ಗುರು ಶ್ರೀ ಮ ರಿಶಾಂತವೀರ ಶಿವಯೋಗಿಗಳವ ರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಪೂಜ್ಯ ಮರಿಶಾಂತ ಶಿವ ಯೋಗಿ ಗುರುಗಳು ಮಾಡಿದ ಕಾರ್ಯಗಳನ್ನೆಲ್ಲ ಸ್ಮರಿಸೋದೆ ನಮ್ಮ ಜೀವನ ಸಾರ್ಥಕ, ಶ್ರೀಗಳು ಈ ಭಾಗದ ಜನತೆಯ ಆಶಾಕಿರಣ ವಾಗಿದ್ದು ಅಂದಿನ ಕಾಲದಲ್ಲಿಯೇ ಕಾಶಿಯಲ್ಲಿ ಅಧ್ಯಯನ ಮಾಡಿ ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯ ಪಡೆದು ಸಂಸ್ಥಾನ ಶ್ರೀ ಗವಿಮಠದಲ್ಲಿ ೧೬ನೇ ಪೀಠಾಧ್ಯಕ್ಷ ರಾಗಿದ್ದರು ಎಂದು ವಿದ್ಯಾರ್ಥಿ ಗಳಿಗೆ ತಿಳಿಸಿದರು.
ಅಂತಹ ಮಹಾನ್ ದೈವಿ ಪು ರುಷರ ಪುಣ್ಯ ಸ್ಮರಣೆ ಮಾಡೋದು ಅತ್ಯಂತ ಅರ್ಥಪೂರ್ಣವಾಗಿದ್ದು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಂತಹ ನಾವೇ ಪುಣ್ಯವಂತರು ಎಲ್ಲರೂ ಅವರ ಜೀವನ ಕ್ರಮವನ್ನು ತಮ್ಮ ಬಾಳಲ್ಲಿ ಅಳವಡಿಸಿಕೊಂಡು ಜೀ ವನ ಸಾರ್ಥಕಮಾಡಿಕೊಳ್ಳೋಣ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಸಂಯೋಜಕ ಗವಿಸಿದ್ದಪ್ಪ ಕರ್ಮುಡಿ ಶ್ರೀಗಳ ಕುರಿತು ಮಾತನಾಡುತ್ತಾ ಶ್ರೀಗಳು ಲಿಂಗಾನುಷ್ಠಾನ ಪ್ರಿಯರು ಪವಾಡ ಸದೃಶರಾಗಿ ಈ ಭಾಗದ ಅನ್ನ, ಅಕ್ಷರ,eನ, ಆಧ್ಯಾತ್ಮಿಕವಾಗಿ ಈ ನಾಡನ್ನು ಉದ್ಧಾರ ಮಾಡಿದರು. ಅಂತಹ ಮಹಾನ್ ಪುರುಷರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನೆ ಮಾಡುವ ಹಾಗೂ ಕಾರ್ಯನಿರ್ವಹಿಸುವ ನಾವು ನೀವುಗಳೇ ಧನ್ಯರು ಎಂದು ತಿಳಿಸಿದರು.
ಕಾರ್ಯಕ್ರಮದ ನಿರೂಪಣೆ ಯನ್ನು ಶರಣಪ್ಪ ಗುಡ್ಲಾನೂರ್ ನೆರವೇರಿಸಿದರು ಈ ಸಂದರ್ಭ ದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾ ಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.