ತಾಜಾ ಸುದ್ದಿ

ಸಂಗೀತ ಕಲಿಕೆಯಿಂದ ಖಿನ್ನತೆ ದೂರ…

Share Below Link

ಶಿವಮೊಗ್ಗ: ಶತಮಾನಗ ಳಿಂದಲೂ ಸಂಗೀತಕ್ಕೆ ವಿಶೇಷ ಸ್ಥಾನಮಾನ ಇದ್ದು, ಸಂಗೀತದಿಂದ ಧ್ವನಿ ಸಂಸ್ಕರಣದ ಜತೆಯಲ್ಲಿ ನಮ್ಮಲ್ಲಿನ ಖಿನ್ನತೆ ದೂರವಾಗುತ್ತದೆ ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್ ಹೇಳಿದರು.
ಶಿವಮೊಗ್ಗದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಕಿಮ್ ಸ್ಟಾರ್ ವತಿಯಿಂದ ಆಯೋಜಿಸಿದ್ದ ಜನಪದ ಹಾಗೂ ಫಾಸ್ಟ್ ಸಾಂಗ್ಸ್ ಕನ್ನಡ ಚಿತ್ರಗೀತೆಗಳ ಗ್ರಾಂಡ್ ಫಿನಾಲೆ ಕೋಸ್ಟಲ್ ಐಕಾನ್ ಸೀಸನ್ ೨ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಕಲಿಕೆಯಲ್ಲಿ ವಿದ್ಯಾ ರ್ಥಿಗಳು ನಿರಂತರ ಆಸಕ್ತಿ ವಹಿಸಬೇಕು. ಪರಿಶ್ರಮ ಪಟ್ಟಲ್ಲಿ ಯಶಸ್ಸು ನಿಶ್ಚಿತವಾಗಿ ಲಭಿಸುತ್ತದೆ. ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಉನ್ನತ ಹಂತಕ್ಕೆ ತಲುಪಲು ಸಂಪೂರ್ಣ ಪ್ರಯತ್ನ ನಡೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಆಕಾಶ ವಾಣಿ ದೂರದರ್ಶನ ಕಲಾವಿದೆ ವಿದ್ಯಾ ಮಂಜುನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿ, ಸಂಗೀತ ಸಾಧಕನ ಸ್ವತ್ತಾ ಗಿದ್ದು, ಏಕಾಗ್ರತೆ, ಭಕ್ತಿ ಹಾಗೂ ಶ್ರದ್ಧೆಯಿಂದ ಕಲಿಯುವ ಮನೋ ಭಾವ ಬೆಳೆಸಿಕೊಳ್ಳಬೇಕು. ಕರ್ನಾ ಟಕವು ಸಂಗೀತದ ತವರೂರು. ಬಾ ಲ್ಯದಿಂದಲೇ ಸಂಗೀತದ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.
ಆಕಾಶವಾಣಿ ಕಲಾವಿದೆ ಉಮಾ ದಿಲೀಪ್ ಮಾತನಾಡಿ, ಪಾಶ್ಚಿಮಾತ್ಯ ಸಂಗೀತದ ಅಬ್ಬರದಲ್ಲಿ ಶಾಸ್ತ್ರೀಯ ಸಂಗೀತ ಮರೆಯಾ ಗುತ್ತಿದೆ. ಸಂಗೀತವನ್ನು ಗುರುವಿನ ಮೂಲಕ ಅಭ್ಯಾಸ ಮಾಡಿದರೆ ಪರಿಪೂರ್ಣನಾಗಲು ಸಾಧ್ಯ ಎಂದು ಹೇಳಿದರು.
ಕಿಮ್ ಸ್ಟಾರ್ ಉಡುಪಿಯ ಜಯಶೀಲನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಹೊಸ ಪ್ರತಿಭೆ ಗಳಿಂದ ಇಂತಹ ವೇದಿಕೆಗಳಿಂದ ಅವಕಾಶ ದೊರೆಯುತ್ತದೆ. ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗ್ರಾಂಡ್ ಫಿನಾಲೆಗೆ ಆಯ್ಕೆ ಯಾದ ೯ ಜನ ಹಾಡುಗಾರರಿಗೆ ಗುರುತಿಸಿ ಪದಕ ನೀಡಿ ಗೌರವಿಸ ಲಾಯಿತು. ರೋಟರಿ ಕ್ಲಬ್ ಮಿಡ್ ಟೌನ್ ಸದಸ್ಯ ಸಂತೋಷ್, ರಾಜೇಶ್. ಸುಮಂತ್, ಧನಂ ಜಯ್, ವಿಭಾ ಉಪಸ್ಥಿತರಿದ್ದರು.