ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಈಡಿಗ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡಲು ಆಗ್ರಹ…

Share Below Link

ಶಿವಮೊಗ್ಗ: ಈಡಿಗ ಕುಲ ಬಾಂಧವರ ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ಜಿ ಘಟಕದ ಅಧ್ಯಕ್ಷ ಜಿ.ಇ. ಮುರಳೀಧರ್ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ದಲ್ಲಿ ಈಡಿಗ ಸಮಾಜ ಎ ಕ್ಷೇತ್ರಗಳಲ್ಲಿಯೂ ಹಿಂದೆ ಉಳಿ ದಿದೆ. ಮುಖ್ಯವಾಗಿ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಅರಿವು ಮೂಡಿಸುವುದು ಅಗತ್ಯ ವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎ ರೀತಿಯ ನೆರವು ನೀಡಬೇಕು ಎಂದರು.
ಹಿಂದಿನ ಸರ್ಕಾರ ನಿಗಮ ಮಂಡಳಿಗೆ ಅನುಮೋದನೆ ನೀಡಿತ್ತು.ಇಂದಿನ ಸರ್ಕಾರ ನಿಗಮ ಮಂಡಳಿ ಸ್ಥಾಪಿಸಿ ಕನಿಷ್ಠ ೫೦೦ ಕೋಟಿ ಮೀಸಲಿಡಬೇಕು. ಜೊತೆಗೆ ಕುಲಶಾಸ್ತ್ರ ಅಧ್ಯಯನ ನಡೆಸ ಬೇಕು. ಮುಖ್ಯವಾಗಿ ಸಮುದಾ ಯದ ಮೂಲ ಕಸುಬಾದ ನೀರಾ ಸೇಂದಿ ಈಗ ಇಲ್ಲವಾಗಿದ್ದು, ಇದಕ್ಕೆ ಪೂರಕವಾಗಿ ಯುವ ಸಮು ದಾಯಕ್ಕೆ ಉದ್ಯೋಗ ಕಲ್ಪಿಸುವ ಹಿನ್ನೆಲೆಯಲ್ಲಿ ಸರ್ಕಾರಿ ಬೀಳು ಜಗದಲ್ಲಿ ಈಚಲು, ತಾಳೆ, ಬೈನೆ ಹಾಗೂ ತೆಂಗಿನ ಮರಗಳನ್ನು ನೆಟ್ಟು ನೀರಾ, ಸೇಂದಿಗೆ ಅನುಮತಿ ನೀಡಬೇಕು ಎಂದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಪ್ರತಿ ಜಿ ಯಲ್ಲೂ ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು. ವಿಧಾನಸೌಧದಲ್ಲಿ ಶ್ರೀಗಳ ಪುತ್ಥಳಿ ಸ್ಥಾಪಿಸಬೇಕು. ಮಾರಯ್ಯ ಜಯಂತಿ ಆಚರಿ ಸಬೇಕು. ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಪಠ್ಯದಲ್ಲಿ ಅಳವಡಿಸ ಬೇಕು. ಮುಳುಗಡೆ ಸಂತ್ರಸ್ತರಿಗೆ ಬಗರ್ ಹುಕುಂ ಸಾಗುವಳಿದಾರರಿಗೆ ಭೂ ಮಂಜೂ ರಾತಿ ಪತ್ರ ನೀಡಬೇಕು ಎಂದು ಒತ್ತಾಯಿಸಿ ದರು.
ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸರ್ಕಾರ ಹಸ್ತಕ್ಷೇಪ ಮಾಡಬಾರದು.ರಾಜಕೀಯ ಹಿತಾಸಕ್ತಿಗಳಿಂದ ಕ್ಷೇತ್ರವನ್ನು ದೂರ ಇಡಬೇಕು. ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರು ಸ್ಥಾಪಿಸಬೇಕು ಎಂದ ಅವರು, ಈ ಎ ಹೋರಾಟಗಳನ್ನು ಮುಂದಿ ಟ್ಟುಕೊಂಡು ನಮ್ಮ ಸಮಾಜದ ಗುರುಗಳಾದ ಡಾ.ಶ್ರೀ ಪ್ರಣವಾ ನಂದ ಸ್ವಾಮೀಜಿಯವರು ಕಳೆದ ೩ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿzರೆ. ಹಿಂದಿನ ಸರ್ಕಾರ ನೆಪಮಾತ್ರಕ್ಕೆ ಕೆಲವು ಬೇಡಿಕೆಗಳನ್ನು ಈಡೇರಿಸಿದೆ. ಈಗಿನ ಸರ್ಕಾರ ನಮ್ಮ ಎ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಈಡಿಗ ಮಹಾ ಮಂಡಳಿಯ ಗೌರವ ಜಿಧ್ಯಕ್ಷ ಪ್ರೊ. ಕಲ್ಲನ, ಪ್ರಮುಖರಾದ ಮಂಜುನಾಥ್, ಶಿವಕು ಮಾರ್, ಆಶಾ, ಹೆಚ್. ವಾಸಪ್ಪ ಮಾಸ್ತಿಕಟ್ಟೆ, ವೆಂಕಟೇಶ್ ಮೂರ್ತಿ, ಸುದರ್ಶನ್ ಇದ್ದರು.