ಗಣಪತಿ ಪ್ರತಿಷ್ಠಾಪನೆ ಮಾಡಲು ಯಾವ ನಿರ್ಬಂಧ ಹೇರದಿರಲು ಆಗ್ರಹ
ಶಿವಮೊಗ್ಗ: ಹಿಂದೂ ಬಾಂಧ ವರು ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲು ಯಾವ ನಿರ್ಬಂಧವನ್ನೂ ಹೇರಬಾರದು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ವಿಶ್ವ ಹಿಂದೂ ಪರಿಷತ್‌ನ ಜಿಧ್ಯಕ್ಷ ಜೆ.ಆರ್. ವಾಸುದೇವ್ ಗಣಪತಿ ಹಬ್ಬ ಎಂಬುದು ಹಿಂದುಗಳ ಪ್ರಮುಖವಾದ ಹಬ್ಬ. ಆದರೆ ಈ ಹಬ್ಬ ಆಚರಿಸಲು ಪೊಲೀಸ್ ಇಲಾಖೆ ಮತ್ತು ಸರ್ಕಾರ ಬೇಡವಾದ ಹಲವು ನಿಬಂಧನೆಗಳನ್ನು ಹೇರುತ್ತಿದೆ. ಈ ನಿಬಂಧನೆಗಳು ಭಕ್ತರ ಭಾವನೆಗೆ ಧಕ್ಕೆ ಉಂಟುಮಾಡುತ್ತವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೇವಲ ದೇವಸ್ಥಾನ, ಸಭಾ ಮಂದಿರಗಳಿಗೆ ಸೀಮಿತ ಮಾಡದೆ ಸಾರ್ವಜನಿಕ ಪೆಂಡಾಲ್‌ಗಳಲ್ಲೂ ಗಣೇಶೋತ್ಸವ ಆಚರಿಸುವಂತಾಗ ಬೇಕು. ಸಾರ್ವಜನಿಕ ಗಣಪತಿ ಸಮಿತಿಯವರಿಗೆ ಬಂಟಿಂಗ್ಸ್ ಹಾಗೂ ಕೇಸರಿ ಧ್ವಜಗಳನ್ನು ಹಾಕುವಂತಿಲ್ಲ ಎಂದು ಹೇಳುವುದು ಸರಿಯಲ್ಲ. ಇದರ ಜತೆಗೆ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ಹೇಳುವುದು ಯಾವ ನ್ಯಾಯ? ಸಾರ್ವಜನಿಕ ಗಣಪತಿ ಇಡುವವರು ಸಿಸಿ ಕ್ಯಾಮೆರಾ ಅಳವಡಿಸುವುದು ಸಾಧ್ಯವೇ. ಪೊಲೀಸರು ಬೇಕಾದರೆ ಅಳವಡಿ ಸಿಕೊಳ್ಳಲಿ. ಇಂತಹ ಗೊಂದಲ ಸೃಷ್ಟಿಸಬಾರದು ಎಂದರು.
ಗಣಪತಿ ವಿಸರ್ಜನೆಯನ್ನು ಹಿಂದೂ ಸಂಪ್ರದಾಯದಂತೆ ತಮ್ಮ ಹತ್ತಿರದಲ್ಲಿರುವ ಹೊಳೆ, ಚಾನಲ್, ಬಾವಿ ಇಂತಹ ಜಗದಲ್ಲಿ ವಿಸ ರ್ಜನೆ ಮಾಡುತ್ತಾರೆ. ಪೊಲೀಸ್ ಇಲಾಖೆ ಇದಕ್ಕೆ ಸಹಕರ ನೀಡ ಬೇಕು. ಮಂಗಳ ವಾದ್ಯಕ್ಕೆ ಅವಕಾಶ ನೀಡಬೇಕು. ವಿಸರ್ಜನೆ ಮಾಡು ವಾಗ ವಾದ್ಯಗೋಷ್ಠಿಗಳನ್ನು ಬಳ ಸುವುದು ಸಂಪ್ರದಾಯ. ಇದನ್ನು ನಿರ್ಬಂಧಿಸುವುದು ಸಮಂಜಸವಲ್ಲ ಎಂದರು.
ಒಟ್ಟಾರೆ ಗಣಪತಿ ಹಬ್ಬ ಎನ್ನುವುದು ದೇಶದ ಏಕತೆ ಸಾರುವ ಉದ್ದೇಶದಿಂದ ಆರಂಭವಾದುದು. ಇದರಲ್ಲಿ ಹಿಂದುಗಳ ಭಾವನೆ ಅಡಗಿದೆ. ಇಂತಹ ಹಬ್ಬಕ್ಕೆ ಪೊಲೀಸ್ ಇಲಾಖೆ ನಿರ್ಬಂಧ ಹೇರುವುದನ್ನು ನಿಲ್ಲಿಸಬೇಕು. ಜೊತೆಗೆ ಶಾಂತಿ ಸಭೆಗಳಲ್ಲಿ ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿಗಳನ್ನು ಕಡಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನಾರಾಯಣ ಜಿ. ವರ್ಣೇಕರ್, ಬ ಜರಂಗದಳದ ರಾಘವನ್ ವಡಿ ವೇಲು, ನಾಗೇಶ್ ಗೌಡ ಇದ್ದರು.