ಪಪಂ ಮುಖ್ಯಾಧಿಕಾರಿ ವಜಾಕ್ಕೆ ಆಗ್ರಹ…
ಶಿವಮೊಗ್ಗ: ದೌರ್ಜನ್ಯ ಮತ್ತು ದಬ್ಬಾಳಿಕೆಯಿಂದ ಮನೆಯನ್ನು ಧ್ವಂಸಗೊಳಿಸಿ ಅವಮಾನ ಮಾಡಿರುವ ಆನವಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ಸೇವೆಯಿಂದ ವಜ ಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ಸುದ್ದಿ ಗೋಷ್ಟಿಯಲ್ಲಿ ಆಗ್ರಹಿಸಿದರು.
ಸೊರಬ ತಾಲೂಕಿನ ಆನವಟ್ಟಿ ಗ್ರಾಮದ ಹಾನಗಲ್ ಮುಖ್ಯ ರಸ್ತೆಯಲ್ಲಿರುವ ೮ ಎಕರೆ ಸರ್ಕಾರಿ ಜಗದಲ್ಲಿ ಕಳೆದ ೬೦ ವರ್ಷ ಗಳಿಂದಲೂ ವಾಸವಾಗಿದ್ದ ನಾಗರಿಕರ ಮೇಲೆ ದೌರ್ಜನ್ಯ ಹಾಗೂ ದಬ್ಬಾಳಿಕೆ ನಡೆಸಿ ಮನೆ ಯನ್ನು ಧ್ವಂಸಗೊಳಿಸಿ ಅವಮಾನ ಮಾಡಿದ್ದನ್ನು ತೀವ್ರವಾಗಿ ಅವರು ಖಂಡಿಸಿದರು.
ಜಿಧಿಕಾರಿ ಹಾಗೂ ಸೊರಬ ತಹಸೀಲ್ದಾರ್ ಅವರ ಜೊತೆ ಚರ್ಚೆ ನಡೆಸದೆ ಸರ್ವಾಧಿಕಾರಿತನದಿಂದ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಬಡ ಜನರ ಮನೆಗಳನ್ನು ಧ್ವಂಸ ಮಾಡಿಸಿದ್ದೂ ಅಲ್ಲದೆ ಪೊಲೀಸರ ಬೆಂಬಲದಿಂದ ಮಹಿಳೆಯರು ಮತ್ತು ಮಕ್ಕಳನ್ನು ಮನೆಯಿಂದ ಹೊರಹಾಕಿ ಜೆಸಿಪಿ ಬಳಸಿ ಮನೆಗಳನ್ನು ಧ್ವಂಸ ಮಾಡಿ ೨೦ ಕುಟುಂಬಗಳನ್ನು ಬೀದಿಪಾಲು ಮಾಡಿzರೆ ಎಂದು ಗಂಭೀರ ಆರೋಪ ಮಾಡಿದರು.
ಮುಖ್ಯಾಧಿಕಾರಿಯ ಧೋರಣೆ ಖಂಡಿಸಿ ಮಾ.೧೭ರಿಂದ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರ ನಡೆಸುತ್ತಿದ್ದು, ಮಾ.೨೦ರ ಬೆಳಿಗ್ಗೆ ೧೧ ಗಂಟೆಗೆ ಜಿಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಸೊರಬ ತಾಲೂಕು ಕಚೇರಿ ಮುಂಭಾಗದಿಂದ ಆನವಟ್ಟಿ ಪಪಂ .ಯವರೆಗೂ ಪಾದಯಾತ್ರೆ ನಡೆಸಿ, ಅಲ್ಲಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ಥರು ಉಪಸ್ಥಿತರಿದ್ದರು.