ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕಾಂತರಾಜ್ ವರದಿ ಅನುಷ್ಠಾನಕ್ಕೆ ಆಗ್ರಹ…

Share Below Link

ಶಿವಮೊಗ್ಗ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ೨೦೧೩-೧೪ ರಲ್ಲಿ ನಡೆಸಿದ ರಾಜ್ಯದ ಶಿಕ್ಷಣ ಮತ್ತು ಸಾಮಾಜಿಕ ಸ್ಥಿತಿಗತಿ ಕುರಿತು ನಡೆಸಿದ್ದ ಸಮೀಕ್ಷಾ ವರದಿ ಯನ್ನು ರಾಜ್ಯಸರಕಾರ ಸ್ವೀಕರಿಸಿ ಜರಿ ಮಾಡಬೇಕೆಂದು ಹಿಂದುಳಿ ದ ವರ್ಗಗಳ ಒಕ್ಕೂಟದ ಶಿವಮೊ ಗ್ಗ ಘಟಕದ ಸಂಚಾಲಕರಾದ ಆರ್ .ಕೆ.ಸಿದ್ದರಾಮಣ್ಣ ಆಗ್ರಹಿಸಿದರು.
ಪತ್ರಿಕಾ ಭವನದಲ್ಲಿ ಶುಕ್ರ ವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಹಿಂದೆ ಸಿದ್ದರಾ ಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಹಿಂದು ಳಿದ ವರ್ಗಗಳ ಶಾಶ್ವತ ಆಯೋ ಗದ ಅಧ್ಯಕ್ಷರಾಗಿದ್ದ ಕಾಂತರಾಜ್ ನೇತೃತ್ವದಲ್ಲಿ ರಾಜ್ಯದಲ್ಲಿ ಸಾಮಾ ಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯನ್ನು ನಡೆಸಿತ್ತು. ಸಮೀಕ್ಷೆ ಪೂರ್ಣಗೊಂಡಿದ್ದರೂ ವರದಿಯ ನ್ನು ಸರಕಾರಕ್ಕೆ ಸಲ್ಲಿಸಿಲ್ಲ ಈ ಕಾರಣದಿಂದ ಈಗಿನ ಸರಕಾರದ ಈ ಕೆಲಸವನ್ನು ಆದ್ಯತೆಯ ಮೇಲೆ ಮಾಡಬೇಕಿದೆ. ಸಮೀಕ್ಷೆಯಿಂದ ರಾಜ್ಯದಲ್ಲಿರುವ ಎ ಜತಿ, ಸಮುದಾಯಗಳ ಸಾಮಾಜಿಕ ಮತ್ತು ಶಿಕ್ಷಣ ಸ್ಥಿತಿಗತಿಯ ಚಿತ್ರಣ ಸಿಗಲಿದೆ. ಇದರ ಆಧಾರದ ಮೇಲೆ ಸರಕಾರದ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗುತ್ತದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯನ್ನು ಕರಾರುವಕ್ಕಾಗಿ ನಿರ್ಧಾರ ಮಾಡಲು ಸಾಧ್ಯವಾಗು ತ್ತದೆ. ನೂತನ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ವರದಿ ಸ್ವೀಕರಿಸುವುದಾಗಿ ಹೇಳಿರುವು ದನ್ನು ಸ್ವಾಗತಿಸುತ್ತೇವೆ ಎಂದರು.

ಜನರಲ್ಲಿ ಇದೊಂದು ಜತಿ ಗಣತಿ ಎಂಬ ತಪ್ಪು ಅಭಿಪ್ರಾಯ ವಿದೆ. ಆದರೆ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿ ತಿಳಿಯುವ ಉದ್ದೇಶದಿಂದ ಮಾಡಿರುವ ವರದಿ ಇದಾಗಿದೆ. ಆಯೋಗ ಕೆಲವೊಂದು ಶಿಫಾರಸು ಗಳನ್ನು ಮಾಡಿದ್ದು, ಅದನ್ನು ಸರಕಾರಕ್ಕೆ ಸಲ್ಲಿಸಬೇಕಿದೆ. ಈ ಬಗ್ಗೆ ಆಯೋಗ ಗಮನಹರಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ಈಗಿನ ಅಧ್ಯ ಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿ ಮಾಡಲಾಗು ವುದು. ಈ ಹಿಂದೆಯೂ ಪ್ರತಿಭ ಟನೆ ಮತ್ತು ಧರಣಿ ಮೂಲಕ ಮನವಿ ಮಾಡಿದ್ದೇವೆ. ಬಿಜೆಪಿ ಸರಕಾರ ಇzಗಲೂ ಯಡಿಯೂ ರಪ್ಪ ಅವರ ಬಳಿ ಮನವಿ ಸಲ್ಲಸಿ zವು ಎಂದು ಹೇಳಿದರು.

ಒಕ್ಕೂಟದ ಜಿಧ್ಯಕ್ಷ ವಿ.ರಾಜು ಅವರು ಮಾತನಾಡಿ, ಹಿಂದುಳಿದ ವರ್ಗಗಳ ಹೋರಾಟ ಶಿವಮೊಗ್ಗದಿಂದಲೇ ಮೊದಲು ಆರಂಭವಾಗಿತ್ತು. ಗಣಪತಿಯಪ್ಪ, ಬಹುಮತ ಹಾಲಪ್ಪ, ವೆಂಕಟೇಶ್ ಮೊದಲಿಯಾರ್ ಅವರುಗಳು ದಶಕಗಳ ಹಿಂದೆ ಹೋರಾಟ ಆರಂ ಭಿಸಿದ್ದರು. ಒಕ್ಕೂಟವು ಈ ಹಿಂದೆ ಅಧಿಕಾರಿಗಳು, ಆಯೋಗ ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾಂತರಾಜ್ ವರದಿ ಅನುಷ್ಠಾನ ಮಾಡಲು ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ಆಯೋಗದ ಮತ್ತು ಮುಖ್ಯ ಮಂತ್ರಿಯನ್ನು ಭೇಟಿ ಮಾಡಲಿದೆ. ಸರಕಾರ ವರದಿ ಸ್ವೀಕರಿಸಿ ಅನುಷ್ಠಾನಗೊಳಿಸುವ ಮೂಲಕ ಹಿಂದುಳಿದ ವರ್ಗಗಳ ಏಳಿಗೆಗೆ ಮುಂದಾಗಬೇಕಿದೆ ಎಂದು ರಾಜು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಒಕ್ಕೂ ಟದ ಎಸ್.ಬಿ.ಅಶೋಕ್ ಕುಮಾ ರ್, ಅಣ್ಣಪ್ಪ, ಎಸ್.ಪಿ.ಶೇಷಾದ್ರಿ, ನಾಗರತ್ನಮ್ಮ, ಎನ್.ಮಂಜುನಾ ಥ್, ಅಬ್ದುಲ್ ವಾಜೀದ್, ಮಜೀ ದ್ ಅಹಮದ್ ಮತ್ತಿತರರಿದ್ದರು.