ಹಮ್ ದೋ- ಹಮಾರೆ ಬಾರಾ ಸಿನಿಮಾ ರದ್ದಿಗೆ ಆಗ್ರಹ…
ಶಿವಮೊಗ್ಗ : ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಜೂ.೭ ರಂದು ರಾಷ್ಟ್ರಾ ದ್ಯಂತ ಬಿಡುಗಡೆ ಯಾಗಲಿರುವ ಹಮ್ ದೋ ಹಮಾರೆ ಬಾರಾ (ನಾವಿಬ್ಬರು -ನಮಗೆ ಹನ್ನೆರಡು) ಎಂಬ ಸಿನಿಮಾವನ್ನು ಬಿಡುಗಡೆ ಮಾಡಬಾರದು. ಸಿನಿಮಾ ವನ್ನೇ ರದ್ದು ಮಾಡಬೇಕು ಎಂದು ನಗರದ ಸುನ್ನಿ ಜಮೀಯಾ ಮಸೀದಿ ಹಾಗೂ ಸುನ್ನಿ ಜಮಾಯತ್ ಉ ಮಸೀದಿ ಮತ್ತು ಇನ್ನಿತರ ಸಂಘಟನೆ ಗಳು ಆಗ್ರಹಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನ್ನಿ ಜಮೀಯಾ ಮಸೀದಿಯ ಅಧ್ಯಕ್ಷ ಮುನಾವರ್ ಪಾಶಾ, ಝೀ ಸಿನಿಮಾ ವಾಹಿನಿಯು ಇತ್ತೀಚೆಗೆ ಹಮ್ ದೋ ಹಮಾರೆ ಬಾರಾ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಇದರಲ್ಲಿ ಅಹುವಿನ ಪವಿತ್ರ ಗ್ರಂಥ ಖುರಾನ್ ಶರೀಫರಲ್ಲಿ ಇರುವ ಸೂರೆ ಎ-ಬಕರ ಸಾಲಿನಲ್ಲಿನ ಉಪದೇಶ ಗಳನ್ನು ಹಾಗೂ ಸಂದೇಶಗಳನ್ನು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ತಪ್ಪಾಗಿ ಗ್ರಹಿಸಿ ಅಪಾರ್ಥ ಸೃಷ್ಠಿಸಿ ಪ್ರಚೋದನಾತ್ಮಕ ಹಾಗೂ ಅವಹೇಳನಕಾರಿಯಾಗಿ ಚಿತ್ರಿಸಿ ಸಮಾಜದಲ್ಲಿ ಧರ್ಮಗಳ ಮಧ್ಯೆ ಗೊಂದಲ ಉಂಟು ಮಾಡಿzರೆ ಎಂದು ದೂರಿದರು.
ಯಾವುದೇ ಸಿನಿಮಾ ಒಂದು ಸಮುದಾಯವನ್ನು ಅವಹೇಳನ ಮಾಡಬಾರದು. ಸಿನಿಮಾ ಎಂದರೆ ಅದು ಮನರಂಜನೆ ಮಾತ್ರ. ಮನರಂಜನೆಯ ಮೂಲಕ ಉತ್ತಮ ಸಂದೇಶಗಳನ್ನು ನೀಡಬೇಕೆ ಹೊರತು ಕೆಟ್ಟ ಸಂದೇಶಗಳನ್ನಲ್ಲ. ಈ ಚಿತ್ರದ ಟ್ರೇಲರ್ ನೋಡಿದರೆ ಸಾಕು, ಇದು ಮುಸ್ಲಿಂ ಸಮುದಾಯವನ್ನೇ ಕೆಣಕುವಂತಿದೆ. ಒಬ್ಬ ಮಹಿಳೆಯ ಬಗ್ಗೆ ಈ ರೀತಿಯ ಕೆಟ್ಟ ಭಾವನೆಗಳನ್ನು ಉಂಟು ಮಾಡಿ ಪ್ರಚೋದನೆಯನ್ನು ನೀಡಬಾರದು. ಆದ್ದರಿಂದ ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದ ಅವರು ಈಗಾಗಲೇ ಈ ಬಗ್ಗೆ ಅಖಿಲ ಭಾರತ ಚಿತ್ರೀಕರಣ ಮತ್ತು ವಾಣಿಜ್ಯ ಮಂಡಳಿ, ಚೆನ್ನೈ ಹಾಗೂ ಹಿಂದಿ ಚಲನಚಿತ್ರ ಹಾಗೂ ವಾಣಿಜ್ಯ ಮಂಡಳಿ ಹಾಗೂ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದರು.
ಪ್ರಮುಖರಾದ ಆಶ್ರಫ್ ಅಹಮ್ಮದ್, ಸತ್ತಾರ್ ಬೇಗ್, ನಯಾಜ್ ಅಹಮ್ಮದ್ ಖಾನ್, ಹಸನ್ ಖಾನ್ ಅಫ್ರಿದಿ, ಮುಫ್ತಿ ಅಖಿಲ್ ರಝಾ, ಅಶ್ರಫ್ ಹುಸೇನ್ ಸಾಬ್, ಏಜಜ್ ಪಾಶಾ, ಮುಫ್ತಿ ಅಫಲ್ ಆಲೀಸ್ ಸಾಬ್ ಇದ್ದರು.