ಜಿಲ್ಲಾ ಸುದ್ದಿತಾಜಾ ಸುದ್ದಿ

ಆಯುಷ್ಮಾನ್ಭವ ಕಾರ್ಯಕ್ರಮ ಪ್ರತಿ ಮನೆಗೆ ತಲುಪಿಸಿ: ಬಿವೈಆರ್

Share Below Link

ಶಿಕಾರಿಪುರ: ಕೇಂದ್ರ ಸರ್ಕಾರದ ಬಹು ಮಹತ್ವಾಕಾಂಕ್ಷೆಯ ಆಯುಷ್ಮಾನ್ಭವ ಕಾರ್ಯಕ್ರಮವನ್ನು ಪ್ರತಿಯೊಬ್ಬರ ಮನೆಮನೆಗೆ ತಲುಪಿಸುವ ಕಾರ್ಯವನ್ನು ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಶ್ರz,ನಿಷ್ಠೆಯಿಂದ ಮಾಡಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿನ ಸಾಂಕ್ರಾಮಿಕ ರೋU ವನ್ನು ಸಂಪೂರ್ಣ ನಿರ್ಮೂಲನೆ ಗೊಳಿಸುವ ಜತೆಗೆ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯ ಆರೋಗ್ಯ ಸುಧಾರಣೆಗಾಗಿ ಕೇಂದ್ರ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ ಅವರು ಪ್ರತಿ ಗ್ರಾಮಗಳಲ್ಲಿ ಆರೋಗ್ಯ ಸೇವೆಗಳ ಶುದ್ದೀಕರಣವಾಗಿಸುವ ನಿಟ್ಟಿನಲ್ಲಿ ಆಯುಷ್ಮಾನ್ಭವ ಕಾರ್ಯಕ್ರಮ ಆಯೋಜಿಸಲಾಗಿದ್ದು ತಾಲೂಕು ಹಾಗೂ ಜಿ ಮಟ್ಟದ ಆಸ್ಪತ್ರೆ,ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳ ೨ನೇ ಮಂಗಳವಾರ ಕ್ಷಯ ಮತ್ತು ಕುಷ್ಠ ರೋಗ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರ, ೩ನೇ ಮಂಗಳವಾರ ಸಂತಾನೋತ್ಪತ್ತಿ ಮತ್ತು ಆರೋಗ್ಯ ಸಮಸ್ಯೆ, ರಕ್ತಹೀನತೆ ಬಗ್ಗೆ ಜಾಗೃತಿ ಕಾರ್ಯಕ್ರಮ, ೪ನೇ ಮಂಗಳವಾರ ಕೆಎಫ್ಡಿ ಮತ್ತು ಇತರೆ ಕಾಯಿಲೆಗಳಿಗೆ ಸಂಬಂದಿಸಿದಂತೆ ಆರೋಗ್ಯ ಶಿಬಿರ ತಜ್ಞ ವೈದ್ಯರ ನೇತೃತ್ವದಲ್ಲಿ ನಡೆಯಲಿದೆ ಪ್ರತಿ ಆರೋಗ್ಯ ಕೇಂದ್ರದಲ್ಲಿ ಈ ಬಗ್ಗೆ ಗೋಡೆ ಬರಹದ ಮೂಲಕ ಜನಸಾಮಾನ್ಯರಿಗೆ ಜಗೃತಿ ಮೂಡಿ ಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಕೆಹೆಚ್‌ಬಿ ಬಡಾವಣೆಯಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ೧೫೦ ಹಾಸಿಗೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅ.೨ರಂದು ಶಾಸಕ ವಿಜಯೇಂದ್ರ ಸಮಕ್ಷಮದಲ್ಲಿ ಸೇವೆಯನ್ನು ಆರಂಭಿಸಲಿದೆ ಎಂದು ತಿಳಿಸಿ ಆಗ ಸಾರ್ವಜನಿಕ ಆಸ್ಪತ್ರೆಯ ಕಾರ್ಯಬಾರ ಒತ್ತಡ ಕಡಿಮೆ ಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಬದಲ್ಲಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶಿವಾನಂದ್, ಹಿರಿಯ ತಜ್ಞ ವೈದ್ಯ ಡಾ. ಅರುಣ್‌ಕುಮಾರ್, ಡಾ.ಶ್ರೀನಿವಾಸ್, ಡಾ.ರವೀಂದ್ರ, ಡಾ.ಅನಿಲ್‌ಕುಮಾರ್ ಸಿಬ್ಬಂದಿ ಹರೀಶ್, ಚಂದ್ರಶೇಖರ್, ಅನಸೂಯ ಮುಖಂಡ ಯೋಗೀಶ್ ಮಡ್ಡಿ, ಪರಶುರಾಮ ಚಾರ್ಗಲ್ಲಿ, ರಹಮತಿ, ಮಂಜುಸಿಂಗ್ ಇನ್ನಿತರರಿದ್ದರು.