ಕ್ಯಾಸಿನಕೆರೆ ಅಕ್ವಡಕ್ ದುರಸ್ತಿ ವಿಳಂಬ: ರೈತರಿಗೆ ಅನ್ಯಾಯ..
ಸಾಸ್ವೆಹಳ್ಳಿ: ಕ್ಯಾಸಿನಕೆರೆ ಮೂಲಕ ಹಾದು ಹೋಗಿರುವ ಭದ್ರಾ ನಾಲೆಯ ಅಕ್ವಡಕ್ ಹಾಳಾಗಿದ್ದು, ದುರಸ್ತಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಅಕ್ವಡಕ್ ಹಾಳಾಗಿ ಐದು ದಿನಗಳಾದವು. ಅಕ್ವಡಕ್ ದುರಸ್ತಿ ಕಾರ್ಯ ವಿಳಂಬದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಹೊನ್ನಾಳಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ. ತಿಪ್ಪೇಶ್ ಆರೋಪಿಸಿzರೆ.
ಇಲ್ಲಿನ ಭದ್ರಾ ಎಡದಂಡೆ ಜಲಾನಯನ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಅಕ್ವಡಕ್ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

ಭತ್ತದ ಬೆಳೆ ಈಗಾಗಲೇ ಒಣಗುವ ಹಂತಕ್ಕೆ ಬಂದಿದೆ. ದಿಗ್ಗೇನಹಳ್ಳಿಯಲ್ಲಿ ಭದ್ರಾ ಅಕ್ವಡಕ್ ಒಡೆದು ತಿಂಗಳ ಕಾಲ ತಡವಾಗಿ ನೀರು ಬಿಡಲಾಯಿತು. ಇದರಿಂದ ಎಕರೆಗೆ ೧೫ ಚೀಲ ಭತ್ತ ಬೆಳೆದಿzರೆ. ರೈತರಿಗೆ ತುಂಬಾ ನಷ್ಟವಾಗಿದೆ. ಬೆಳೆ ನಷ್ಟದ ಪರಿಹಾರವನ್ನು ಯಾರೂ ನೀಡಿರಲಿಲ್ಲ. ಈಗಲೂ ಬೆಳೆ ನಷ್ಟವಾದರೆ ಪರಿಹಾರ ನೀಡುವ ವರು ಯಾರು ಎಂದು ಪ್ರಶ್ನಿಸಿದರು.
ಅಧಿಕಾರಿಗಳು ವಿಳಂಬ ಮಾಡದೆ ತ್ವರಿತಗತಿಯಲ್ಲಿ ದುರಸ್ತಿ ಕಾರ್ಯ ತೀವ್ರಗೊಳಿಸಿ, ಕೆಳ ಭಾಗದ ರೈತರಿಗೆ ನೀರು ಬಿಡಬೇಕು. ಇಲ್ಲವಾದರೆ ರೈತರು ಬೀದಿಗಿಳಿಯ ಬೇಕಾಗುತ್ತದೆ. ಕ್ಯಾಸಿನಕೆರೆಯಿಂದ ಹೊನ್ನಾಳಿಯ ಗಡಿಭಾಗ ಗೊಲ್ಲರ ಹಳ್ಳಿಯವರೆಗೂ ಸಾವಿರಾರು ಎಕರೆ ಭತ್ತ ನಾಟಿ ಮಾಡಿzರೆ. ಎ ರೈತರು ಒಗ್ಗೂಡಿ ಪ್ರತಿಭಟನೆ ಮಾಡಬೇಕಾಗುವುದು ಎಂದರು.
ಭದ್ರಾ ಡ್ಯಾಂ ವ್ಯಾಪ್ತಿಯಲ್ಲಿ ಸುಮಾರು ೪೨ ಅಕ್ವಡಕ್‌ಗಳು, ಗೇಟ್‌ಗಳು, ಕಟ್ಟೆಗಳು ಕಳೆದ ೫೦ ವರ್ಷಗಳಿಂದ ನಿರ್ವಹಣೆಯಿಲ್ಲದೆ ಹಾಳಾಗಿವೆ. ಅಧಿಕಾರಿಗಳು, ಶಾಸಕರು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಹಾಳಾಗಿ ರುವ ಅಕ್ವಡಕ್‌ಗಳನ್ನು ಸೇರಿದಂತೆ ಇತರೆ ರಚನೆಗಳನ್ನು ನೀರು ಬಂದ್ ಆದಾಗ ರೈತರಿಗೆ ತೊಂದರೆಯಾ ಗದಂತೆ ಸರಿಪಡಿಸಿ, ಭದ್ರಾ ಕಾಲುವೆಯಲ್ಲಿ ನಿರಂತರವಾಗಿ ನೀರು ಹರಿಯುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾರ ತೀಯ ಕಿಸಾನ್ ಸಂಘದ ಕಾರ್ಯ ದರ್ಶಿ ಹಾಲಸ್ವಾಮಿ, ಪದಾಧಿಕಾರಿಗಳಾದ ಮಶ್ ಎಚ್.ಬಿ, ಸುರೇಶ್ ಬಿ.ಜಿ, ವೀರೇಶ್ ಎಚ್.ಬಿ, ಹನುಮಂತಪ್ಪ ಕೆ., ಚಂದ್ರಶೇಖರ್, ರುದ್ರೇಶ್, ದೇವೆಂದ್ರಪ್ಪ, ಬೆನಕೇಶ್, ದೇವರಾಜ್ ಇದ್ದರು.

