ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಹೈಕೋರ್ಟ್ ತಡೆಯಾe ಧಿಕ್ಕರಿಸಿ ಹೆಟೆನ್ಶನ್ ವಿದ್ಯುತ್ ತಂತಿ ಅಳವಡಿಕೆ ಅವೈeನಿಕ ಕಾಮಗಾರಿ…

Share Below Link

ಶಿಕಾರಿಪುರ: ಈಸೂರು ಅಂಜನಾಪುರ ಮಾರ್ಗದಲ್ಲಿ ಹೆಟೆನ್ಶನ್ ವಿದ್ಯುತ್ ತಂತಿ ಅಳವಡಿಸುವ ಮೂಲಕ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಳ್ಳುವ ಜತೆಗೆ ಸಮೀಪದ ಸರ್ಕಾರಿ ಭೂಮಿಯನ್ನು ಬಿಟ್ಟು ಉzಶಪೂರ್ವಕವಾಗಿ ರೈತರ ಭೂಮಿಯನ್ನು ಕಬಳಿಸುವ ಅವೈeನಿಕ ಕಾಮಗಾರಿಗೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತಡೆಯಾe ಧಿಕ್ಕರಿಸಿ ಅಧಿಕಾರಿಗಳು ಸಚಿವರು, ಸಂಸದ, ಶಾಸಕರ ಗುಲಾಮರಾಗಿ ವರ್ತಿಸುತ್ತಿzರೆ ಎಂದು ರಾಜ್ಯ ರೈತ ಸಂಘದ ಜಿ ಸಂಚಾಲಕ ಸಂತೋಷ ಈಸೂರು ಆರೋಪಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಈಸೂರು ಗ್ರಾಮದಿಂದ ಅಂಜನಾಪುರಕ್ಕೆ ಕೆಪಿಟಿಸಿಎಲ್ ಹೈಟೆನ್ಶನ್ ವಿದ್ಯುತ್ ತಂತಿ ಅಳವಡಿಸುವ ಕಾಮಗಾರಿ ಅವೈeನಿಕ ವಾಗಿದ್ದು ಮಾರ್ಗದಲ್ಲಿ ರೈತರ ಫಲವತ್ತಾದ ಕೃಷಿ ಭೂಮಿ ಕಬಳಿಸುವ ಸಂಚು ರೂಪಿಸಲಾಗಿದೆ ಇದರೊಂದಿಗೆ ೪-೫ ಕಿ.ಮೀ ನಲ್ಲಿ ಪೂರ್ಣಗೊಳ್ಳುವ ಸರ್ಕಾರಿ ಭೂಮಿಯ ಸಮೀಪದ ಜಗವನ್ನು ಹೊರತುಪಡಿಸಿ ೧೫ ಕಿ.ಮೀ ಅಧಿಕ ಅಂತರವಿರುವ ರೈತರ ಭೂಮಿ ಯನ್ನು ಉzಶಪೂರ್ವಕವಾಗಿ ಕಬಳಿಸುವ ಅವೈeನಿಕ ಕಾಮಗಾರಿ ವಿರೋಧಿಸಿ ಕಳೆದ ೫ ವರ್ಷಗಳಿಂದ ನಿರಂತರವಾದ ಹೋರಾಟಕ್ಕೆ ಇದೀಗ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾe ನೀಡಿದೆ ಎಂದು ಆದೇಶದ ಪ್ರತಿ ಪ್ರದರ್ಶಿಸಿದರು.
ಹೈಟೆನ್ಶನ್ ವಿದ್ಯುತ್ ತಂತಿ ಅಳವಡಿಸುವ ಕಾಮಗಾರಿ ಅತ್ಯಂತ ಅಗತ್ಯವಾಗಿದ್ದು, ರೈತರ ಭೂಮಿ ಉzಶಪೂರ್ವಕವಾಗಿ ಕಬಳಿಸುವ ಅವೈeನಿಕ ಯೋಜನೆಯನ್ನು ರೈತ ಸಂಘ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ ಎಂದು ಸ್ಪಷ್ಟಪಡಿಸಿದ ಅವರು ಇದೀಗ ರಾಜ್ಯ ಉಚ್ಚ ನ್ಯಾಯಾಲಯದ ತಡೆಯಾe ಧಿಕ್ಕರಿಸಿ ಸ್ಥಳೀಯ ಪೊಲೀಸ್ ಇಲಾಖೆ, ಕೆಪಿಟಿಸಿಎಲ್ ಅಧಿಕಾರಿ ಗಳ ಸಹಕಾರದಿಂದ ಜಿ ಉಸ್ತುವಾರಿ ಸಚಿವರು, ಸಂಸದ ಶಾಸಕರ ಮಖಿಕ ಆದೇಶದ ಮೇರೆಗೆ ಕಾಮಗಾರಿ ನಿರಂತರವಾಗಿ ನಡೆಯುತ್ತಿದ್ದು ಉಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸು ತ್ತಿರುವ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಜನಸಾಮಾನ್ಯರಿಗೆ ನ್ಯಾಯ ದೊರಕುವುದು ಸಾದ್ಯವೇ ಎಂದು ಪ್ರಶ್ನಿಸಿದರು.


ಈ ಹಿಂದಿನ ಜಿಧಿಕಾರಿ ಗುರುದತ್ತ ಹೆಗಡೆ ರಾಜಕೀಯ ಒತ್ತಡಕ್ಕೆ ಮಣಿದು ಹಾಜರಿದ್ದ ೩೯೦ಕ್ಕೂ ಅಧಿಕ ರೈತರನ್ನು ಹೊರದಬ್ಬಿ ಏಕಪಕ್ಷೀಯವಾಗಿ ರೈತರ ವಿರುದ್ದ ನೀಡಿದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾದ ಮೇಲ್ಮನವಿಗೆ ಇದೀಗ ದೊರೆತ ತಡೆಯಾe ರೈತರ ನ್ಯಾಯಪರ ಹೋರಾಟಕ್ಕೆ ದೊರೆತ ಜಯವಾಗಿದೆ ಎಂದ ಅವರು ತಡೆಯಾe ಧಿಕ್ಕರಿಸಿದ ಹಲವೆಡೆ ಸರ್ಕಾರಿ ಕಚೇರಿ ಜಫ್ತಿಯಾಗಿದ್ದು ಪುನರಾವರ್ತನೆಯಾಗದಂತೆ ಎಚ್ಚರಿಸಿದರು.
ಯಡಿಯೂರಪ್ಪನವರ ಹೆಸರಿನಲ್ಲಿ ಶಾಸಕರಾದ ವಿಜಯೇಂದ್ರ, ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ತೀವ್ರ ನಿರಾಸಕ್ತಿ ವಹಿಸುತ್ತಿದ್ದು, ತಾಲೂಕು ಪ್ರವಾಸದ ನೆಪದಲ್ಲಿ ಕೇವಲ ಮದುವೆ ಮುಂಜಿಗೆ ಮಾತ್ರ ಹಾಜರಾಗಿ ರೈತರ ಸಮಸ್ಯೆ ಆಲಿಸದೆ ನಿರ್ಲಕ್ಷಿಸುತ್ತಿzರೆ ಎಂದು ದೂರಿದ ಅವರು, ಈ ಹಿಂದೆ ಅಂಜನಾಪುರ ಜಲಾಶಯ ದಲ್ಲಿ ಕೇವಲ ೮ ಅಡಿ ನೀರಿನಲ್ಲಿ ರೈತರು ಬೇಸಿಗೆ ಭತ್ತ ಬೆಳೆಯುತ್ತಿದ್ದು ಇದೀಗ ೨೦ ಅಡಿ ನೀರು ಸಂಗ್ರಹವಿದ್ದರೂ ಬೇಸಿಗೆ ನೀರು ನೀಡುತ್ತಿಲ್ಲ ರೈತರ ಜತೆ ಬೇಸಿಗೆ ನೀರು ಬಿಡುವ ಬಗ್ಗೆ ಚರ್ಚಿಸದೆ ತೊಘಲಕ್ ದರ್ಬಾರ್ ನಡೆಯು ತ್ತಿದೆ ಎಂದು ಹರಿಹಾಯ್ದರು.


ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್ ಈಶ್ವರಪ್ಪ ಮಾತನಾಡಿ, ಅವೈeನಿಕ ವಿದ್ಯುತ್ ಮಾರ್ಗ ಬದಲಾವಣೆಗಾಗಿ ಕಳೆದ ೫ ವರ್ಷ ದಿಂದ ಹೋರಾಟ, ಸತತ ಅಹೋರಾತ್ರಿ ಧರಣಿ, ಸುಳ್ಳು ಕ್ರಿಮಿನಲ್ ದೂರು ಮತ್ತಿತರ ನೋವು ಅನುಭವಿಸಿ ಇದೀಗ ದೊರೆತ ತಡೆಯಾeಯನ್ನು ಪೊಲೀಸ್ ವ್ಯವಸ್ಥೆ ಮೂಲಕ ದಬ್ಬಾಳಿಕೆ ದೌರ್ಜನ್ಯದಿಂದ ಹತ್ತಿಕ್ಕುವ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಇದೇ ಸ್ಥಿತಿ ಮುಂದು ವರಿದಲ್ಲಿ ಗುತ್ತಿಗೆದಾರ, ಅಧಿಕಾರಿ ಗಳನ್ನು ಕಂಬಕ್ಕೆ ಕಟ್ಟಿಹಾಕಲಾಗು ವುದು ಎಂದು ಎಚ್ಚರಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಮೋದ್, ಸಂಚಾಲಕ ಸುಭಾಷಚಂದ್ರ ಚಿಕ್ಕಜೋಗಿಹಳ್ಳಿ, ಗೌರವಾಧ್ಯಕ್ಷ ಬಸವರಾಜ ಪಾಟೀಲ್, ಉಪಾಧ್ಯಕ್ಷ ಅಬ್ದುಲ್ ಮುನಾಫ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *