ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

100 ಅಡಿ ದ್ವಿಪಥ ರಸ್ತೆಗೆ ಬಂಗಾರಪ್ಪನವರ ಹೆಸರು ನಾಮಕರಣಕ್ಕೆ ದೀವರ ಸಂಘ ಸ್ವಾಗತ…

Share Below Link

ಶಿವಮೊಗ್ಗ : ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿರುವ ಆಲ್ಕೊಳ ವೃತ್ತದಿಂದ ಡಿವಿಜಿ ವೃತ್ತದವರೆಗೆ ೧೦೦ ಅಡಿ ದ್ವಿಪಥ ರಸ್ತೆಗೆ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ರಸ್ತೆ ಎಂದು ನಾಮಕರಣ ಮಾಡಲು ಅನುಮೋದನೆ ನೀಡಿರುವುದನ್ನು ದೀವರ ಕ್ಷೇಮಾಭಿವೃದ್ಧಿ ಸಂಘ ಸ್ವಾಗತಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ತಡಗಣಿ ನಾಗರಾಜ್, ಸದರಿ ರಸ್ತೆಗೆ ಬಂಗಾರಪ್ಪ ರಸ್ತೆ ಎಂದು ನಾಮಕರಣ ಮಾಡಲು ನಮ್ಮ ಸಂಘ ಸರ್ಕಾರದ ಮೇಲೆ ಒತ್ತಡ ಹಾಕಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬಂಗಾರಪ್ಪ ಅಭಿಮಾನಿಗಳಿಗೂ ಕೂಡ ಹರ್ಷವಾಗಿದೆ. ಇದನ್ನು ನಮ್ಮ ಸಂಘ ಸ್ವಾಗತಿಸುತ್ತದೆ. ಸರ್ಕಾರಕ್ಕೆ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತದೆ ಎಂದರು.
ಬಂಗಾರಪ್ಪನವರು ಈ ನಾಡು ಕಂಡ ಧೀಮಂತ ರಾಜಕಾರಣಿ. ಬಡವರ ಬಂಧುವಾಗಿದ್ದರು. ಬಡವರಿಗಾಗಿಯೇ ಅನೇಕ ಯೋಜನೆಗಳನ್ನು ಜರಿಗೆ ತಂದವರು. ಅವರ ಹಲವು ಯೋಜನೆಗಳಿಂದ ಎ ವರ್ಗದ ಜನರು ಸಮಾನತೆಯಿಂದ ಬಾಳಲು ಸಾಧ್ಯವಾಗಿತ್ತು. ಶಿವಮೊಗ್ಗ ಜಿಗೂ ಅವರ ಕೊಡುಗೆ ಅಪಾರವಾಗಿದೆ. ಇಂತಹ ಮಹಾನ್ ಚೇತನದ ಹೆಸರನ್ನು ಈಗ ಶಿವಮೊಗ್ಗದ ಆಲ್ಕೊಳ ವೃತ್ತದ ಬಳಿಯ ರಸ್ತೆಗೆ ನಾಮಕರಣ ಮಾಡಿರುವುದು ಹೆಮ್ಮೆಯ ವಿಷಯ. ಈ ಹಿನ್ನೆಲೆ ಯಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಸದರಿ ರಸ್ತೆಗೆ ದಿ. ಎಸ್. ಬಂಗಾರಪ್ಪ ನವರ ಹೆಸರಿನ ನಾಮಫಲಕ ಅನಾವರಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಒಂದು ಕಾರ್ಯಕ್ರಮವನ್ನು ನಮ್ಮ ಸಂಘ ಆಯೋಜಿಸಿದೆ. ಇದರ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದರು.
ಪದಾಧಿಕಾರಿಗಳಾದ ಎಸ್.ಜಿ. ನಾಯಕ್, ಕುಪ್ಪಯ್ಯ, ಕೆ.ಎಸ್. ಮಂಜಪ್ಪ, ಉದಯಕುಮಾರ್, ಪರಮೇಶ್ವರಪ್ಪ, ಬಸವಣ್ಯಪ್ಪ, ಲೋಹಿತ್, ಹುಚ್ರಾಯಪ್ಪ, ಶಾಂತ ಕುಮಾರ್, ನಾರಾಯಣಮೂರ್ತಿ ಇದ್ದರು.