ಸಿಎ ಪದವಿ ಪಡೆಯಲು ಸಮರ್ಪಣಾ ಮನೋಭಾವ ಅತ್ಯಗತ್ಯ: ಕರಿಂಬಿಲ್
ಶಿವಮೊಗ್ಗ : ನಗರದ ಪ್ರತಿಷ್ಠಿತ ಪಿಇಎಸ್ ಐಎಎಮ್‌ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳಿಗಾಗಿ ಸಿಎ ಫೌಂಡೇಶನ್ ಕುರಿತ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಶ್ರೀಲಾಲ್ ಮತ್ತು ರಾಹುಲ್ ಚಾರ್ಟಡ್ ಅಕೌಂಟೆಟ್ಸ್‌ನ ಸಹ ಸಂಸ್ಥಾಪಕ ಸಿಎ ಶ್ರೀಲಾಲ್ ಕರಿಂಬಿಲ್ ಅವರು ವಿದ್ಯಾರ್ಥಿಗಳನ್ನು ಉzಶಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ತಮ್ಮ ಬದುಕಿನಲ್ಲಿ ಮಹತ್ವವಾದುದನ್ನು ಸಾಧಿಸುವ ಉzಶವಿರುತ್ತದೆ. ಆದರೆ ಅದಕ್ಕಾಗಿ ಕೇವಲ ಕನಸುಗಳನ್ನು ಕಾಣುವುದಲ್ಲ ನಿಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಂಡು ಕನಸನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸಮಯವು ಅತ್ಯಂತ ಅಮೂಲ್ಯವಾದದ್ದು ಇದರ ಸದ್ಬಳಕೆ ಮಾಡಿಕೊಳ್ಳಿ. ನಿಮ್ಮಗುರಿ ಸಿಎ ಪರೀಕ್ಷೆಯನ್ನು ತೇರ್ಗಡೆ ಮಾಡಬೇಕು ಎಂದಾದಲ್ಲಿ ನೀವು ಶೇ ೧೦೦ ರಷ್ಟು ಪರಿಶ್ರಮವನ್ನು ಹಾಕಬೇಕು.ಅಲ್ಲದೆ ಸಮರ್ಪಣಾ ಮನೋಭಾವ ಇರಿಸಿಕೊಳ್ಳಬೇಕು. ನೀವು ಇಡುವ ಪ್ರತಿಯೊಂದು ಹೆಜ್ಜೆಯೂ ಕೂಡ ಮಹತ್ವಪೂರ್ಣವಾದುದು. ಜಗತಿಕವಾಗಿ ಸಿಎ ಮಾಡಿದವರಿಗೆ ಒಳ್ಳೆಯ ಗೌರವ ಹಾಗೂ ಸ್ಥಾನಮಾನಗಳು ಲಭಿಸುತ್ತವೆ. ೫ ವರ್ಷಗಳನ್ನು ಇದಕ್ಕಾಗಿ ನೀವು ವಿನಿಯೋಗಿಸಿದರೆ ನಿಮ್ಮ ಬದುಕು ಉಜ್ವಲವಾಗುತ್ತದೆ ಎಂದು ನುಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದಂತಹ ಸಿಎ ರಾಹುಲ್ ರಾಜನ್ ಅವರು ಮಾತನಾಡಿ, ನೀವು ಸಿಎ ಆಗಬೇಕೆಂದರೆ ನಿಮ್ಮ ಅಮೂಲ್ಯ ಸಮಯವನ್ನು ಇದಕ್ಕಾಗಿ ಮೀಸಲಿಟ್ಟು ಮನರಂಜನೆ, ಸಭೆ ಸಮಾರಂಭಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಏಕೆಂದರೆ ಏನನ್ನಾದರೂ ಮಹತ್ವವಾದುದನ್ನು ಸಾಧಿಸಲುತ್ಯಾಗ ಮಾಡುವುದು ಅನಿವಾರ್ಯವಾಗಿದೆ. ಆದರೆ ಮುಂದೆ ನಿಮಗೆ ಈ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ. ದೊಡ್ಡ ಕಂಪನಿಗಳಲ್ಲಿ ಪ್ರತಿಷ್ಠಿತ ಹುzಗಳು ಸಿಗುತ್ತವೆ. ಅಲ್ಲದೆ ಸರ್ಕಾರಿ ಕ್ಷೇತ್ರದಲ್ಲಿಯೂ ಕೂಡ ಸಾಕಷ್ಟು ಅವಕಾಶಗಳು ಇವೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಕೂಡ ಸಿಎ ಮಾಡಿದವರಿಗೆ ಸಾಕಷ್ಟು ಬೇಡಿಕೆಇದೆ. ಹಲವಾರುಸಿಎ ಪದವೀಧರರು ದೊಡ್ಡ ಕಂಪನಿಗಳನ್ನು ಕೂಡ ಸ್ಥಾಪಿಸಿzರೆ. ಈ ಕ್ಷೇತ್ರದಲ್ಲಿ ನೀವು ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಲು ವಿಪುಲ ಅವಕಾಶಗಳಿವೆ ಎಂದು ನುಡಿದರು.
ಪ್ರಾಂಶುಪಾಲ ಡಾ. ಸುದರ್ಶನ್, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಮೋಹನ್ ಡಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಹೆಚ್‌ಆರ್, ಶಿವಮೊಗ್ಗ ಸಿಎ ಕೋಚಿಂಗ್ ಸಂಸ್ಥೆಯ ರಮೇಶ್ ಹೆಗ್ಡೆ ಮತ್ತು ವಿಕಾಸ್ ಹೆಗ್ಡೆ, ಇನ್ನಿತರರು ಉಪಸ್ಥಿತರಿದ್ದರು.
