ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ರಾಗಿಗುಡ್ಡ ಪ್ರದೇಶವನ್ನು ಜೀವವೈವಿಧ್ಯ ಸಂರಕ್ಷಿತ ಅರಣ್ಯವೆಂದು ಘೋಷಿಸಿ…

Share Below Link

ಶಿವಮೊಗ್ಗ: ನಗರದ ತಾಪ ಮಾನ ಹೆಚ್ಚಳ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನ ದಲ್ಲಿಟ್ಟುಕೊಂಡು ಶಿವಮೊಗ್ಗದ ಆಕ್ಸಿಜನ್ ಬ್ಯಾಗ್ ಆಗಿರುವ ಇಲ್ಲಿನ ಹೊರವಲಯದ ರಾಗಿಗುಡ್ಡ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ, ಜೀವವೈವಿಧ್ಯ ಸಂರಕ್ಷಿತ ಅರಣ್ಯ ಎಂದು ಕೂಡಲೇ ಘೋಷಿಸಬೇಕೆಂದು ಒತ್ತಾಯಿಸಿ ರಾಗಿಗುಡ್ಡ ಉಳಿಸಿ ಅಭಿಯಾನದ ವತಿಯಿಂದ ಇಂದು ಮಂಗಳವಾರ ಬೆಳಿಗ್ಗೆ ಶಾಸಕ ಕೆ.ಎಸ್.ಈಶ್ವರಪ್ಪ ನವರಿಗೆ ಮನವಿ ಸಲ್ಲಿಸಲಾಯಿತು.
ರಾಗಿಗುಡ್ಡ ಉಳಿಸಿ ಅಭಿಯಾ ನವು ಶಿವಮೊಗ್ಗದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಒಟ್ಟು ೧೧,೨೧೪ ಸಾರ್ವಜನಿಕರ ಸಹಿಗಳ ಸಂಗ್ರಹವುಳ್ಳ ಎರಡು ಪುಸ್ತಕಗಳನ್ನು ಸಾವಿರಾರು ಸಂಖ್ಯೆ ಯ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಜಥಾ ನಡೆಸುವ ಮೂಲಕ ಜಿಧಿಕಾರಿಗಳಿಗೆ ಸಲ್ಲಿಸಿzರೆ.
ಈ ಸಂದರ್ಭದಲ್ಲಿ ರಾಗಿಗುಡ್ಡ ಸರ್ವೆ ನಂಬರ್ ೧೧೨ರಲ್ಲಿ ವಿeನ ಮತ್ತು ತಂತ್ರeನ ಇಲಾಖೆಗೆ ಕಾದಿರಿಸಿದ ಜಗವನ್ನು ಸೈನಿಕ ಶಾಲೆಗೆ ಬಳಸುವುದನ್ನು ಮತ್ತು ತ್ಯಾವರೆಚಟ್ನಳ್ಳಿ ಭಾಗದ ಸರ್ವೇ ನಂ. ೭೬ರ ಯಾವುದೇ ಭಾಗವನ್ನು ಇತರೆ ಕಾರಣಗಳಿಗಾಗಿ ಬಳಸುವಕ್ಕೆ ವಿರೋಧವಿದೆ.
ಯಾವುದೇ ಕಾರಣಕ್ಕೂ ರಾಗಿಗುಡ್ಡದ ಪರಿಸರದಲ್ಲಿ ಕಾಂಕ್ರೀಟ್ ಅಭಿವೃದ್ಧಿ ಕಾರ್ಯ ನಡೆಯಬಾರದು. ಅದು ಹಸಿರು ತಾಣವಾಗಿ ಮಾತ್ರ ಇರಬೇಕು. ಇಎಸ್‌ಐ ಆಸ್ಪತ್ರೆ ಹೊರತುಪಡಿಸಿ ಇತರೆ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಪರಭಾರೆಯಾಗಿರುವ ಜಗವನ್ನು ರದ್ದುಪಡಿಸಬೇಕು. ಇಎಸ್‌ಐ ಆಸ್ಪತ್ರೆ ನಿರ್ಮಾಣದಿಂದ ರಾಗಿಗುಡ್ಡದ ಪರಿಸರಕ್ಕಾದ ನಷ್ಟವನ್ನು ಸರಿದೂಗಿಸಲು ಹಾಗೂ ತಾಪಮಾನ ಹೆಚ್ಚಳವನ್ನು ತಡೆಗ ಟ್ಟಲು ಹಸಿರು ತಾಣವಾಗಿರುವ ರಾಗಿಗುಡ್ಡವನ್ನು ಈ ಮೊದಲಿನಂತೆ ಹಸಿರೀಕರಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಪ್ರದೇ ಶದಲ್ಲಿ ಇನ್ನು ಮುಂದೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಂತೆ ಸಹಕರಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭದಲ್ಲಿ ರಾಗಿಗುಡ್ಡ ಉಳಿಸಿ ಅಭಿಯಾನದ ಕೆ.ವಿ.ವಸಂತ ಕುಮಾರ್, ಶೇಖರ್ ಗೌಳೇರ್, ಡಾ| ಶ್ರೀಪತಿ, ಎಂ.ವಿ.ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.