ಜಿಲ್ಲಾ ಸುದ್ದಿತಾಜಾ ಸುದ್ದಿ

ಬರಪೀಡಿತ ಜಿಲ್ಲೆ ಎಂದು ಘೋಷಿಸಿ: ಬಿವೈಆರ್ ಆಗ್ರಹ..

Share Below Link

ಶಿವಮೊಗ್ಗ: ಶಿವಮೊಗ್ಗ ಜಿಯನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಸುದ್ದಿಗೋಷ್ಟಿಯಲ್ಲಿ ರಾಜ್ಯ ಸರ್ಕಾರಕ್ಕೆ ಆಗ್ರಹಪಡಿಸಿzರೆ.
ಈ ವರ್ಷ ಮಳೆಗಾಲ ವಾಡಿಕೆ ಗಿಂತ ಕಡಿಮೆಯಾಗಿದೆ. ಒಟ್ಟಾರೆ ತೆಗೆದುಕೊಂಡರೆ ಜಿಯಲ್ಲಿ ಶೇ.೪೦ ಕ್ಕಿಂತ ಹೆಚ್ಚು ಕಡಿಮೆ ಮಳೆಯಾಗಿದೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ. ಭತ್ತ, ಮೆಕ್ಕೆಜೋಳ ಸೇರಿದಂತೆ ಎ ಬೆಳೆಗಳ ಬಿತ್ತನೆ ಕಡಿಮೆಯೇ ಆಗಿದೆ. ಭತ್ತದ ನಾಟಿ ಇನ್ನೂ ೨೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಮೆಕ್ಕೆಜೋಳ ಕೂಡ ಬಿತ್ತನೆ ಯಲ್ಲಿ ಅತ್ಯಂತ ಕಡಿಮೆಯಾಗಿದೆ. ಬಿತ್ತಿದ ಪೈರು ಕೂಡ ನಾಶವಾಗಿದೆ ಎಂದರು.
ಮಳೆಗಾಲ ಕಡಿಮೆ ಆಗಿರುವುದರಿಂದ ವಿದ್ಯುತ್ ಸೇರಿದಂತೆ ಹಲವು ಸಮಸ್ಯೆ ಉಂಟಾಗಿವೆ. ಇದರ ನಡುವೆ ಬೆಳೆ ವಿಮೆ ಕೂಡ ಸರಿಯಾಗಿ ಆಗಿಲ್ಲ. ಉದಾಹರಣೆಗೆ ೫೦ ಸಾವಿರ ಹೆಕ್ಟೇರ್‌ಗಳಲ್ಲಿ ಭತ್ತ ಬಿತ್ತಿದ್ದರೂ ಕೂಡ ಕೇವಲ ೭೨೫೦ ಎಕರೆಯಲ್ಲಿ ಮಾತ್ರ ೧೩ ಸಾವಿರ ರೈತರು ಬೆಳೆ ವಿಮೆ ಮಾಡಿಸಿzರೆ. ಉಳಿದವರು ಬೆಳೆ ವಿಮೆ ಮಾಡಿಸಲೇ ಇಲ್ಲ. ಬೆಳೆ ವಿಮೆ ಮಾಡಿಸದೆ ಪರಿಹಾರವೂ ಸಿಗುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಜಿಧಿಕಾರಿಗಳು ತಕ್ಷಣವೇ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಮಧ್ಯಂತರ ಬೆಳೆವಿಮೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಡಿಕೆ ಬೆಳೆಗಾರರ ಸಮಸ್ಯೆ ಗಳನ್ನು ಕೂಡ ಬಗೆಹರಿಸಬೇಕಾಗಿದೆ. ಅಡಿಕೆ ಬೆಳೆಗೆ ಸಂಬಂಧಿಸಿದಂತ ಕೆಲವರು ಅಪಪ್ರಚಾರ ಮಾಡುತ್ತಿzರೆ. ಭೂತಾನ್‌ನಿಂದ ಅಡಿಕೆ ಬರುತ್ತಿದೆ. ಅದರಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗುತ್ತಿದೆ ಎಂದು ಹೇಳುವುದರಲ್ಲಿ ಅರ್ಥ ವಿಲ್ಲ. ಅಂತರಾಷ್ಟ್ರೀಯ ಒಪ್ಪಂದದ ಪ್ರಕಾರ ಯಾವುದೇ ಬೆಳೆಯನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೂ ಕೂಡ ಕೇಂದ್ರ ಸರ್ಕಾರ ಭೂತಾನ್ ನಿಂದ ಹಸಿ ಅಡಿಕೆಯನ್ನು ಮಾತ್ರ ಖರೀದಿಸಲು ಒಪ್ಪಿದೆ. ಅದೂ ಹಡಗಿನ ಮೂಲಕ ಮಾತ್ರ. ಭೂತಾನ್‌ನಿಂದ ಭಾರತಕ್ಕೆ ಅಡಿಕೆ ಬರುವುದು ಕೂಡ ಕಷ್ಟವಾಗುತ್ತದೆ ಎಂದರು.
ತೀರ್ಥಹಳ್ಳಿ ಶಾಸಕ ಸಚಿವ ಆರಗ eನೇಂದ್ರ ಮಾತನಾಡಿ, ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಕೆಲವರು ಅಡಿಕೆ ಬೆಲೆ ಕುಸಿಯುತ್ತಿದೆ ಇದಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಅಪಪ್ರಚಾರ ಮಾಡುತ್ತಿzರೆ. ಈ ಆತಂಕ ಬೇಡ. ರಾಜ್ಯ ಸರ್ಕಾರ ಕೂಡ ಅಡಿಕೆ ಬೆಳೆಗಾರರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಹೊರೆಯಾಗುತ್ತಿದೆ. ಸರ್ಕಾರಿ ನೌಕರರಿಗೆ ವೇತನ ನೀಡಲು ಕೂಡ ಹಣ ಇಲ್ಲದಂತಾಗಿದೆ. ಅದರಲ್ಲೂ ವಿದ್ಯುತ್ ದರವನ್ನು ಏರಿಸಲಾಗಿದೆ. ಇಂಧನ ಸಚಿವರು ಸುಮ್ಮನೆ ಕುಳಿತಿzರೆ. ಲೋಡ್ ಶೆಡ್ಡಿಂಗ್ ಬೇರೆ ಇದೆ. ಇದೆಲ್ಲವೂ ಸರ್ಕಾರದ ಉಚಿತ ಯೋಜನೆಯಿಂದ ಆಗಿರುವ ತೊಂದರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಗಿರೀಶ್ ಪಟೇಲ್, ಸಂತೋಷ್ ಬಳ್ಳೇಕೆರೆ, ಶಿವರಾಜ್, ಅಣ್ಣಪ್ಪ ಮುಂತಾದವರು ಇದ್ದರು.