ಕಾನೂನು ಉಲ್ಲಂಘಿಸುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ…
ಭದ್ರಾವತಿ: ಶಾಂತಿಗೆ ಭಂಗ ತರುವ ಯಾವುದೇ ಹೇಳಿಕೆ ಅಥವಾ ವಿಡಿಯೋಗಳನ್ನು ಸಾಮಾಜಿಕ ಜಲ ತಾಣಗಳಲ್ಲಿ ಪೋಸ್ಟ್ ಮಾಡುವುದು, ಫಾರ್ವಡ್ ಮಾಡಿ ಮತ್ತೊಬ್ಬರಿಗೆ ನೋವುಂಟು ಮಾಡುವುದು ಕಾನೂನಿನಲ್ಲಿ ಅಪ ರಾಧವಾಗಿದ್ದು, ಸರ್ವಧರ್ಮಗಳ ಮುಖಂಡರು ಯುವಕರಿಗೆ ತಿಳಿ ಹೇಳಬೇಕು. ಕಾನೂನು ಉಲ್ಲಂಘಿ ಸುವವರ ವಿರುದ್ದ ನಿರ್ದಾಕ್ಷ್ಯಿಣ್ಯ ವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಎಚ್ಚರಿಸಿ ದರು.
ಮುಂಬರುವ ಬಕ್ರೀದ್ ಹಬ್ಬದ ಅಂಗವಾಗಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಕ್ರೀದ್ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಅವರು, ಯಾವುದೇ ಸಮುದಾಯವಾಗಿ ರಲಿ ಹಬ್ಬಗಳ ಆಚರಣೆ ವೇಳೆ ಅನ್ಯ ಧರ್ಮದ ಬಗ್ಗೆ ತಾತ್ಸಾರ ಮಾಡದೆ. ಶಾಂತಿಯುತ ವಾಗಿ ಹಬ್ಬ ಆಚರಿಸಿದಾಗ ಮಾತ್ರ ಸಹಭಾಳ್ವೆ ಸಾಧ್ಯ. ಶಾಂತಿ ಸುವ್ಯವಸ್ಧೆಗೆ ಭಂಗ ತರುವವರ ವಿರುದ್ದ ಪೊಲೀಸರು ಕಣ್ಗಾವಲಿಟ್ಟಿದ್ದು. ಕಿಡಿಗೇಡಿಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ, ಅನು ಮಾನಾಸ್ಪದವಾಗಿ ತಿರುಗಾಡುವವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ನಾಗರೀಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸ ಬೇಕೆಂದು ಜಿ ರಕ್ಷಣಾಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ಹೆಚ್ಚುವರಿ ಜಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮ್ ರೆಡ್ಡಿ, ಗ್ರಾಮಾಂತರ ವೃತ್ತ ನಿರೀಕ್ಷಕ ಗುರುರಾಜ್ ಎನ್ ಮೈಲಾರಿ, ಹೊಳೆಹೊನ್ನೂರು ವೃತ್ತನಿರೀಕ್ಷಕ ಲಕ್ಷ್ಮೀಪತಿ, ನಗರಸಭೆ ಹಿರಿಯ ಇಂಜಿನಿಯರ್ ಶಿವ ಪ್ರಸಾದ್ ಇನ್ನಿತರರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ಸರ್ವ ಧರ್ಮಗಳ ಪ್ರಮು ಖರು, ನಗರಸಭಾ ಸದಸ್ಯರು, ವಿವಿಧ ಪಕ್ಷಗಳ ಅಧ್ಯಕ್ಷರು, ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು. ಉಪವಿಭಾಗದ ಎ ಠಾಣೆಗಳ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.