ಜಿಲ್ಲಾ ಸುದ್ದಿತಾಜಾ ಸುದ್ದಿ

2ಬಿ ಮೀಸಲಾತಿ ರದ್ದು ನಿರ್ಧಾರ: ಸಂರಕ್ಷಣಾ ವೇದಿಕೆ ಖಂಡನೆ…

Share Below Link

ಶಿವಮೊಗ್ಗ: ರಾಜ್ಯ ಸರ್ಕಾರ ೨ಬಿ ಮೀಸಲಾತಿ ರದ್ದುಗೊಳಿಸಿ ರುವ ನಿರ್ಧಾರವನ್ನು ೨ಬಿ ಮೀಸಲಾತಿ ಸಂರಕ್ಷಣಾ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ವೇದಿಕೆಯ ಮುಖಂಡ ಹಾಗೂ ವಕೀಲ ಶಹರಾಜ್ ಮುಜಹಿದ್ ಸಿದ್ದಿಖಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶದಿಂದ ಯಾವುದೇ ಸಾಂವಿಧಾನಿಕ ತಳಹದಿ ಇಲ್ಲದೇ ಈ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿದೆ. ತಕ್ಷಣವೇ ಇದನ್ನು ಹಿಂಪಡೆಯ ಬೇಕು. ಇಲ್ಲದಿದ್ದರೆ ರಾಜದ್ಯಂತ ಹೋರಾಟ ನಡೆಸಲಾಗುವುದು ಎಂದರು.
ರಾಜ್ಯ ಸರ್ಕಾರ ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ನಿಲ್ಲಿಸುತ್ತೇವೆ ಎಂದು ಹೇಳಿದೆ. ಆದರೆ, ಮುಸ್ಲಿಂ ಎನ್ನುವುದು ಒಂದು ಧರ್ಮವಲ್ಲ, ಅದೊಂದು ಇಸ್ಲಾಂ ಧರ್ಮದ ಸಮುದಾಯ ಸೂಚಕದ ಪದ. ಪರಿಶಿಷ್ಟರಲ್ಲಿ ಹಿಂದುಳಿದ ವರ್ಗಗಳಲ್ಲಿ ಹೇಗೆ ಸಮುದಾಯಗಳು ಬರುತ್ತ ವೆಯೋ ಹಾಗೆಯೇ ಇಸ್ಲಾಂ ಧರ್ಮದಲ್ಲೂ ಕೂಡ ಮುಸ್ಲಿಂ ಅನ್ನುವುದು ಒಂದು ಸಮುದಾಯ ಪ್ರತಿಬಿಂಬಿಸುತ್ತದೆಯೇ ಹೊರತೂ ಅದು ಧರ್ಮವಲ್ಲ. ಆದರೆ ಸರ್ಕಾರ ಇದನ್ನು ಧರ್ಮವಾಗಿ ಪ್ರತಿಬಿಂಬಿಸುತ್ತದೆ ಎಂದರು.
ನಾವು ಮೀಸಲಾತಿಯ ವಿರೋಧಿಗಳಲ್ಲ, ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯದ ವರಿಗೆ ಮೀಸಲಾತಿ ನೀಡಿರುವು ದನ್ನು ನಮ್ರತೆಯಿಂದ ಸ್ವಾಗತಿಸು ತ್ತೇವೆ. ಆದರೆ, ಮುಸ್ಲಿಂ ಸಮುದಾ ಯದ ೨ಬಿ ಮೀಸಲಾತಿ ರದ್ದುಗೊ ಳಿಸಿರುವುದನ್ನು ತೀವ್ರವಾಗಿ ಖಂಡಿ ಸುತ್ತೇವೆ. ಮತ್ತು ಇದರ ಹಿಂದೆ ರಾಜಕೀಯ ಉದ್ದೇಶವಿದೆಯೇ ಹೊರತೂ ಬೇರೆ ಏನೂ ಇಲ್ಲ. ಮುಸ್ಲಿಂ ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀ ಯವಾಗಿ ಹಿಂದೆ ಉಳಿದಿದೆ. ದಲಿತ ವರ್ಗದವರಿಗಿಂತ ಕೆಳಮಟ್ಟದಲ್ಲಿ ಇದ್ದೇವೆ. ಆದರೆ, ಸರ್ಕಾರ ನಮ್ಮ ಮೀಸಲಾತಿಯನ್ನು ಕಸಿದುಕೊಂಡು ಮೂಗಿಗೆ ತುಪ್ಪ ಹಚ್ಚುವಂತೆ ನಿಮಗೆ ಆರ್ಥಿಕ ದುರ್ಬಲ ವರ್ಗ ದಲ್ಲಿ ಮೀಸಲಾತಿ ನೀಡುತ್ತೇವೆ ಎಂದು ಹೇಳುತ್ತಿದೆ. ಮುಂದು ವರೆದ ಸಮುದಾಯಕ್ಕೆ ಮಾತ್ರ ಅದು ತಲುಪುತ್ತದೆಯೇ ಹೊರತು ನಮಗೆ ತಲುಪುವುದಿಲ್ಲ. ನಾವು ಎಲ್ಲವನ್ನು ಸಹಿಸಿಕೊಂಡಿದ್ದೇವೆ. ಈ ಹಿಂದೆ ನಮಗೆ ನಮ್ಮ ಹೋರಾಟದ ಫಲವಾಗಿ ಪ್ರವರ್ಗ ೨ಬಿ ಅಡಿಯಲ್ಲಿ ಶೇ. ೪ ರಷ್ಟು ಮೀಸಲಾತಿ ನೀಡಿತ್ತು. ನಾವು ಕೇಳಿದ್ದು ಶೇ. ೮ ರಷ್ಟು ಮೀಸಲಾತಿಯನ್ನು. ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ಕೂಡ ನಮ್ಮ ಮಾತನ್ನು ಕೇಳದೇ ಶೇ. ೪ ರಷ್ಟು ಮೀಸಲಾತಿ ನೀಡಿತ್ತು. ಅದು ನ್ಯಾಯಾಲಯದ ಮಧ್ಯ ಪ್ರವೇಶ ದಿಂದ. ಆದರೆ, ಈಗ ಬಿಜೆಪಿ ಸರ್ಕಾರ ಆ ಮೀಸಲಾತಿಯನ್ನು ಕೂಡ ಕಸಿದುಕೊಂಡಿದೆ. ಹಾಗಾಗಿ ಎಲ್ಲ ಸರ್ಕಾರಗಳು ಅಲ್ಪಸಂ ಖ್ಯಾತರ ಕಲ್ಯಾಣ ಮರೆತು ಮತ ಬ್ಯಾಂಕ್ ಆಗಿ ಮಾಡಿಕೊಂಡಿವೆ ಎಂದರು.
ರಾಜ್ಯ ಸರ್ಕಾರ ಈ ನಿರ್ಧಾರ ವನ್ನು ಕೂಡಲೇ ಮರುಪರಿಶೀಲನೆ ಮಾಡಿ ರದ್ದುಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ. ನಮ್ಮ ಹೋರಾಟಕ್ಕೆ ಎ ಸಮಾಜದ ಮುಖಂಡರು, ಸ್ವಾಮೀಜಿಗಳು, ಮಠಾಧಿಪತಿಗಳು ಧ್ವನಿಗೂಡಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಹೇಲ್ ಅಹ್ಮದ್, ಸೈಯದ್ ಲಿಯಾಖತ್, ಡಾ. ಹಬೀಬುರ್ ರೆಹಮಾನ್, ರಹೀಂ, ಮೊಹ ಮ್ಮದ್ ನೋಮಾನ್ ಇದ್ದರು.